Kannada News Technology Oppo A77s is now official. Oppo has added yet another mid-range smartphone to its product
Oppo A77s: 33W ಫಾಸ್ಟ್ ಚಾರ್ಜರ್, 50MP ಕ್ಯಾಮೆರಾ: ಒಪ್ಪೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್‌ಫೋನ್ ಬಿಡುಗಡೆ
ಒಪ್ಪೋ ಸಂಸ್ಥೆಗೆ A ಸರಣಿಯ ಫೋನ್‌ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಇದೀಗ ಭಾರತದಲ್ಲಿ ಈ ಸರಣಿಯಡಿಲ್ಲಿ ಹೊಸ ಸ್ಮಾರ್ಟ್ಫೋನೊಂದನ್ನು ಅನಾವರಣ ಮಾಡಿದೆ. ಅದುವೇ ಒಪ್ಪೋ ಎ77ಎಸ್ (Oppo A77s).
ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗೂ (Smartphone) ಸೈ ಮಿಡ್ ರೇಂಜ್ ಮೊಬೈಲ್ಗೂ ರೆಡಿ ಎಂಬಂತೆ ಆಕರ್ಷಕ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ಚೀನಾ ಮೂಲಕ ಪ್ರಸಿದ್ಧ ಒಪ್ಪೋ (Oppo) ಸಂಸ್ಥೆಗೆ A ಸರಣಿಯ ಫೋನ್‌ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಇದೀಗ ಭಾರತದಲ್ಲಿ ಈ ಸರಣಿಯಡಿಲ್ಲಿ ಹೊಸ ಸ್ಮಾರ್ಟ್ಫೋನೊಂದನ್ನು ಅನಾವರಣ ಮಾಡಿದೆ. ಅದುವೇ ಒಪ್ಪೋಎ77ಎಸ್ (Oppo A77s). ಇದು ಕೂಡ ಬಜೆಟ್ ಬೆಲೆಯ ಫೋನಾಗಿದ್ದು 20,000 ರೂ. ಒಳಗೆ ಖರೀದಿಸಬಹುದು. ಕಡಿಮೆ ಬೆಲೆಯಾಗಿದ್ದರೂ ಇದರಲ್ಲಿ ಅತ್ಯುತ್ತಮ ಫೀಚರ್ಗಳಿವೆ. ಆಕರ್ಷಕ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅನೇಕ ಆಯ್ಕೆಗಳಿವೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಒಪ್ಪೋ A77s ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ ಕೇವಲ 17,999 ರೂ., ಈ ಫೋನ್ ಇಂದಿನಿಂದಲೇ ಖರೀದಿಗೆ ಸಿಗಲಿದೆ. ಇದು ವಿಶೇಷವಾದ ಸನ್‌ಸೆಟ್ ಆರೆಂಜ್ ಮತ್ತು ಸ್ಟಾರಿ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ.
ಮೊದಲ ಸೇಲ್ ಪ್ರಯುಕ್ತ ಭರ್ಜರಿ ಆಫರ್ ಕೂಡ ನೀಡಲಾಗಿದ್ದು ಬ್ಯಾಂಕ್ ಕಾರ್ಡ್‌ಗಳ ಮೂಲಕ ಶೇ. 10 ಕ್ಯಾಶ್‌ಬ್ಯಾಕ್ ದೊರೆಯಲಿದೆ. 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಾಗಲಿದೆ.
ಇದನ್ನೂ ಓದಿ
Twitter: ಟ್ವಿಟರ್ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್ನಲ್ಲಿ ಬಳಸಿ
Amazon Happiness Upgrade Days Sale: ಅಮೆಜಾನ್ನಲ್ಲಿ ಹ್ಯಾಪಿನೆಸ್ ಅಪ್ಗ್ರೇಡ್ ಸೇಲ್: 20,000 ರೂ. ಒಳಗೆ ಸಿಗುತ್ತಿದೆ ಈ 5G ಸ್ಮಾರ್ಟ್ಫೋನ್ಗಳು
Xiaomi 12T Pro: ಮಾರುಕಟ್ಟೆಗೆ ಬಂತು 200MP ಕ್ಯಾಮೆರಾದ ಎರಡನೇ ಸ್ಮಾರ್ಟ್‌ಫೋನ್: ಶವೋಮಿಯಿಂದ ವಿನೂತನ ಪ್ರಯತ್ನ
Google Contact: ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಅಕೌಂಟ್ನಿಂದ ಕಾಂಟಾಕ್ಟ್ಗಳನ್ನು ಬ್ಯಾಕಪ್ ಮತ್ತು ಮರಳಿ ಪಡೆಯುವುದು ಹೇಗೆ?
ಒಪ್ಪೋ A77s ಸ್ಮಾರ್ಟ್‌ಫೋನ್ 1,612×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ.
ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಆಧಾರಿತ ColorOS 12.1ನಲ್ಲಿ ರನ್ ಆಗಲಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ.
8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಕ್ಯಾಮೆರಾ ಫೀಚರ್ಗಳಲ್ಲಿ ಒಪ್ಪೋ ಬೊಕೆ ಫ್ಲೇರ್ ಪೋಟ್ರೇಟ್ ಮೋಡ್, ಫೋಕಸ್ ಮತ್ತು ಬ್ಲರ್ ಅನ್ನು ಒದಗಿಸುತ್ತದೆ. ಇದು ಉತ್ತಮ ಕ್ವಾಲಿಟಿ ಫೋಟೋ ಸೆರೆ ಹಿಡಯಲು ಸಹಾಯ ಮಾಡುತ್ತದೆ.
ಒಪ್ಪೋ A77s ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಕಂಪನಿ ಹೇಳಿರುವ ಪ್ರಕಾರ ಈ ಫೋನ್ ಕೇವಲ 71 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆಯಂತೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ ಅನ್ನು ಬೆಂಬಲಿಸಲಿದೆ. ಇದಲ್ಲದೆ IP54 ರೇಟಿಂಗ್, ಸ್ಟೀರಿಯೋ ಸ್ಪೀಕರ್ ಸೆಟಪ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿಸಲಾಗಿದೆ.