Oppo F21 Pro 5G: ಒಪ್ಪೋ F21 ಪ್ರೊ 5G ಸ್ಮಾರ್ಟ್‌ಫೋನ್‌ ಮಾರಾಟ ಆರಂಭ: ಈ ಫೋನ್​ನಲ್ಲಿ ಏನೇನಿದೆ ನೋಡಿ

| Updated By: Vinay Bhat

Updated on: Apr 21, 2022 | 2:58 PM

ಇಂದಿನಿಂದ ಒಪ್ಪೋ F21 ಪ್ರೊ 5G ಮಾದರಿ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಅನ್ನು ಒಳಗೊಂಡಿದೆ.

Oppo F21 Pro 5G: ಒಪ್ಪೋ F21 ಪ್ರೊ 5G ಸ್ಮಾರ್ಟ್‌ಫೋನ್‌ ಮಾರಾಟ ಆರಂಭ: ಈ ಫೋನ್​ನಲ್ಲಿ ಏನೇನಿದೆ ನೋಡಿ
Oppo F21 Pro 5G
Follow us on

ಕೆಲವು ದಿನಗಳ ಹಿಂದೆಯಷ್ಟೆ ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಒಪ್ಪೋ ಎಫ್​​21 ಪ್ರೊ (Oppo F21 Pro) ಮತ್ತು ಒಪ್ಪೋ ಎಫ್​​21 ಪ್ರೊ 5ಜಿ (Oppo F21 Pro 5G) ಮಾದರಿಯ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಈಗಾಗಲೇ ಒಪ್ಪೋ F21 ಪ್ರೊ ಫೋನ್ ಭರ್ಜರಿ ಸೇಲ್ ಕಾಣುತ್ತಿದೆ. ಇದೀಗ ಇಂದಿನಿಂದ ಒಪ್ಪೋ F21 ಪ್ರೊ 5G ಮಾದರಿ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಅನ್ನು ಒಳಗೊಂಡಿದೆ. ಆಕರ್ಷಕ ಡಿಸ್ ಪ್ಲೇ, ಬಲಿಷ್ಠ ಪ್ರೊಸೆಸರ್ ಜೊತೆಗೆ ದೀರ್ಘ ಸಮಯ ಬಾಳಿಕೆ ಬರುವ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಕೂಡ ನೀಡಲಾಗಿದೆ. ಒಪ್ಪೋ F21 ಪ್ರೊ 5G ಪ್ರಸಿದ್ದ ಇ ಕಾಮರ್ಸ್​ ತಾಣವಾದ ಅಮೆಜಾನ್ (Amazon) ಮೂಲಕ ಖರೀದಿ ಮಾಡಬಹುದು.

ಭಾರತದಲ್ಲಿ ಒಪ್ಪೋ F21 ಪ್ರೊ 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಮಾರಾಟ ಆಗುತ್ತಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 26,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ. ಲಾಂಚ್‌ ಆಫರ್‌ನಲ್ಲಿ 10% ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ನೋ-ಕಾಸ್ಟ್ EMI ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅಮೆಜಾನ್ ಜೊತೆಗೆ ಒಪ್ಪೋ ಕಂಪನಿಯ ಅಧಿಕೃತ ವೆಬ್​ಸೈಟ್ ಮೂಲಕವೂ ನಿಮ್ಮದಾಗಿಸಬಹುದು.

ಒಪ್ಪೋ F21 ಪ್ರೊ 5G ಆವೃತ್ತಿಯ ಸ್ಮಾರ್ಟ್‌ಫೋನ್‌ 6.4-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಲರ್‌OS 12.1 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಆರ್ಬಿಟ್ ಲೈಟ್‌ಗಳನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಜೊತೆಗೆ 4,500mAh ಬ್ಯಾಟರಿ ಹೊಂದಿದ್ದು, 33W SuperVOOC ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G LTE, 4G, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಇನ್ನು ಇದರ ಜೊತೆ ಬಿಡುಗಡೆ ಆದ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್​​ನಿಂದ ಕೂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಲರ್‌OS 12.1 ಜೊತೆಗೆ ರನ್ ಆಗುತ್ತದೆ.

ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 22,999 ರೂ. ಆಗಿದೆ.

Realme Q5: ಬಜೆಟ್ ಬೆಲೆಗೆ ಬಲಿಷ್ಠ ಸ್ಮಾರ್ಟ್​​ಫೋನ್: ರಿಯಲ್ ಮಿಯಿಂದ ಹೊಸ Q5 ಸರಣಿ ಬಿಡುಗಡೆ

Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು