Earth Day 2022: ವಿವಿಧ ಪ್ರದೇಶದಲ್ಲಿ ಹವಾಮಾನ ಬದಲಾವಣೆ ಪರಿಣಾಮಕ್ಕೆ ಕನ್ನಡಿ ಹಿಡಿದ ಗೂಗಲ್ ಡೂಡಲ್

1970ರಿಂದಲೂ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಪರಿಸರವನ್ನು ರಕ್ಷಿಸಲು ತುರ್ತಾಗಿ ಆಗಬೇಕಿರುವ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಭೂಮಿ ದಿನವನ್ನು ಆರಂಭಿಸಲಾಯಿತು.

Earth Day 2022: ವಿವಿಧ ಪ್ರದೇಶದಲ್ಲಿ ಹವಾಮಾನ ಬದಲಾವಣೆ ಪರಿಣಾಮಕ್ಕೆ ಕನ್ನಡಿ ಹಿಡಿದ ಗೂಗಲ್ ಡೂಡಲ್
ವಿಶ್ವ ಭೂಮಿ ದಿನದ ಪ್ರಯುಕ್ತ ಗೂಗಲ್ ಪ್ರಕಟಿಸಿರುವ ಡೂಡಲ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 22, 2022 | 8:07 AM

ವಿಶ್ವದ ಪ್ರಮುಖ ಸರ್ಚ್​ ಎಂಜಿನ್ ಗೂಗಲ್ ಶುಕ್ರವಾರ (ಏಪ್ರಿಲ್ 22) ವಿಶ್ವ ಭೂಮಿದಿನದ ಪ್ರಯುಕ್ತ ವಿಶೇಷ ಡೂಡಲ್ (ಕಲಾಕೃತಿ) ಒಂದನ್ನು ಪರಿಚಯಿಸಿದೆ. ಆಗಾಗ ಗೂಗಲ್ ಬಿಡುಗಡೆ ಮಾಡುವ ಡೂಡಲ್​ಗಳು ಜಗತ್ತನ್ನು ಕಾಡುತ್ತಿರುವ, ಪ್ರಭಾವಿಸುತ್ತಿರುವ ಪ್ರಮುಖ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ನೆರವಾಗುತ್ತವೆ. 1970ರಿಂದಲೂ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಪರಿಸರವನ್ನು ರಕ್ಷಿಸಲು ತುರ್ತಾಗಿ ಆಗಬೇಕಿರುವ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಭೂಮಿ ದಿನವನ್ನು ಆರಂಭಿಸಲಾಯಿತು. ಪರಿಸರ ಬದಲಾವಣೆಯಿಂದ ಭೂಮಿಯ ವಿವಿಧೆಡೆ ಆಗಿರುವ ಪರಿಣಾಮಗಳನ್ನು ಗುರುತಿಸುವುದು ಮತ್ತು ಸರಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಭೂಮಿ ದಿನದ ಮುಖ್ಯ ಉದ್ದೇಶ.

ಪ್ರತಿ ವರ್ಷ ವಿಶ್ವ ಭೂಮಿ ದಿನದಂದು ಹವಾಮಾನ ವೈಪರಿತ್ಯದಿಂದ ಅಗಿರುವ ಬದಲಾವಣೆಗಳನ್ನು ಬಿಂಬಿಸಲು ಗೂಗಲ್​ನ ಹೋಂ ಪೇಜ್​ನಲ್ಲಿ ಚಿತ್ರವೊಂದನ್ನು ಪ್ರಕಟಿಸುವುದು ವಾಡಿಕೆ. ಇದು ಹಲವು ಗಂಟೆಗಳ ವರೆಗೆ ಗೂಗಲ್ ಹೋಂ ಪೇಜ್​ನಲ್ಲಿಯೇ ಇರುತ್ತದೆ. ಗೂಗಲ್ ಅರ್ತ್ ಟೈಮ್ ಲ್ಯಾಪ್ಸ್​ ಮತ್ತು ಇತರ ಮೂಲಗಳ ಪಡೆದ ಚಿತ್ರವನ್ನು ಡೂಡಲ್​ಗೆ ಬಳಸಲಾಗುತ್ತದೆ. ಒಂದೇ ದಿನದಲ್ಲಿ ಈ ಚಿತ್ರಗಳು ಸಹ ಹಲವು ಬಾರಿ ಬದಲಾಗುತ್ತವೆ ಎಂದು ಗೂಗಲ್ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಡೂಡಲ್​ನ ಮೊದಲ ಚಿತ್ರವು ಕಿಲಿಮಾಂಜಾರೊ ಸಮಾವೇಶದಲ್ಲಿ ಪ್ರದರ್ಶಿಸಿದ ನೀರ್ಗಲ್ಲು ಪ್ರದೇಶ ಕಡಿಮೆಯಾದ ಚಿತ್ರವನ್ನು ಒಳಗೊಂಡಿದೆ. ಇದರಲ್ಲಿ 1986 ಮತ್ತು 2020ರ ಅವಧಿಯಲ್ಲಿ ಆಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಎರಡನೇ ಚಿತ್ರವು ಗ್ರೀನ್​ಲ್ಯಾಂಡ್​ನ ಸರ್​ಮರ್​ಸೂಖ್​ನಲ್ಲಿ ಆಗಿರುವ ಬದಲಾವಣೆಯನ್ನು ಬಿಂಬಿಸುತ್ತದೆ. ಈ ಚಿತ್ರವನ್ನು ಡಿಸೆಂಬರ್ 2000ದಿಂದ 2020ರಂದು ತೆಗೆಯಲಾಗಿದೆ.

ಡೂಡಲ್​ನಲ್ಲಿ ಕಂಡುಬರುವ ಮತ್ತೊಂದು ಚಿತ್ರ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್. ಲಿಜರ್ಡ್​ ದ್ವೀಪದಲ್ಲಿ ಹವಳ ದಿಬ್ಬಗಳನ್ನು ಸಂಗ್ರಹಿಸಲು ನಡೆಯುತ್ತಿರುವ ಪ್ರಯತ್ನಗಳಿಂದ ಪರಿಸರದ ಮೇಲೆ ಆಗಿರುವ ಪರಿಣಾಮವನ್ನು ಇದು ಬಿಂಬಿಸುತ್ತದೆ. ಮಾರ್ಚ್​ನಿಂದ ಮೇ 2016ರ ನಡುವಣ ಅವಧಿಯಲ್ಲಿ ತಿಂಗಳಿಗೊಮ್ಮೆ ಈ ಚಿತ್ರಗಳನ್ನು ತೆಗೆಯಲಾಗಿದೆ.

ವಿಶ್ವ ಭೂಮಿ ದಿನದ ಪ್ರಯುಕ್ತ ಗೂಗಲ್ ಹೊರತಂದಿರುವ ಡೂಡಲ್​ನ ವಿಸ್ತೃತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: Fatima Sheikh ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್​​ಗೆ ಗೂಗಲ್ ಡೂಡಲ್ ಗೌರವ

ಇದನ್ನೂ ಓದಿ: Kamal Ranadive: ಭಾರತೀಯ ಬಯೋಮೆಡಿಕಲ್ ಸಂಶೋಧಕಿ ಕಮಲ್ ರಣದಿವೆ 104ನೇ ಜನ್ಮ ದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ

Published On - 8:05 am, Fri, 22 April 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್