Kamal Ranadive: ಭಾರತೀಯ ಬಯೋಮೆಡಿಕಲ್ ಸಂಶೋಧಕಿ ಕಮಲ್ ರಣದಿವೆ 104ನೇ ಜನ್ಮ ದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ

Google Doodle: ಸಂಶೋಧಕಿ ಕಮಲ್ ರಣದಿವೆ ಅವರ 104ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್​ನಲ್ಲಿ ವಿಶೇಷ ನಮನ ಸಲ್ಲಿಸಿದೆ.

Kamal Ranadive: ಭಾರತೀಯ ಬಯೋಮೆಡಿಕಲ್ ಸಂಶೋಧಕಿ ಕಮಲ್ ರಣದಿವೆ 104ನೇ ಜನ್ಮ ದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ
ಕಮಲ್​ ರಣದಿವೆ
Follow us
TV9 Web
| Updated By: shruti hegde

Updated on: Nov 08, 2021 | 8:37 AM

ಭಾರತೀಯ ಜೀವಶಾಸ್ತ್ರಜ್ಞೆ ಡಾ. ಕಮಲ್ ರಣದಿವೆ ಅವರ 104ನೇ ಜನ್ಮದಿನವನ್ನು ಇಂದು ಗೂಗಲ್ ತನ್ನ ಡೂಡಲ್​ನಲ್ಲಿ ಆಚರಿಸಿದೆ. ಕಮಲ್ ರಣದಿವೆ ಭಾರತೀಯ ಬಯೋಮೆಡಿಕಲ್ ಸಂಶೋಧಕಿ. ಕ್ಯಾನ್ಸರ್ ಮತ್ತು ಸೋಂಕುಗಳ ನಡುವೆ ಇರುವ ಕೊಂಡಿಗಳ ಕುರಿತಾಗಿ ಸಂಶೋಧನೆ ನಡೆಸಿದರು. ತಮ್ಮ ವಿಜ್ಞಾನ ಮತ್ತು ಶಿಕ್ಷಣದ ಮೂಲಕ ಸಮಾನ ಸಮಾಜವನ್ನು ರಚಿಸುವ ಉದ್ದೇಶದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆಸರು ಪಡೆದರು. ಸಂಶೋಧಕಿ ಕಮಲ್ ರಣದಿವೆ ಅವರ 104ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್​ನಲ್ಲಿ ವಿಶೇಷ ನಮನ ಸಲ್ಲಿಸಿದೆ.

ಕಮಲ್ ರಣದಿವೆ ಅವರು 1917ರಲ್ಲಿ ಪುಣೆಯಲ್ಲಿ ಜನಿಸಿದರು. ತಮ್ಮ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರಿಗೆ ತಂದೆಯೇ ಬೆನ್ನೆಲುಬಾಗಿ ನಿಂತರು. ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. ಅವರು ತಂದೆಯ ಆಸೆಯಂತೆಯೇ ಶಿಕ್ಷಣದಲ್ಲಿ ಜೀವಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣವನ್ನು ಮುಂದುವರೆಸಿದರು. 1949ರಲ್ಲಿ ಭಾರತೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ (ICRC) ಸಂಶೋಧಕರಾಗಿ ಕೆಲಸ ಮಾಡುವಾಗ ಡಾಕ್ಟರೇಟ್ ಪಡೆದುಕೊಂಡರು. ಯುಎಸ್ಎ ಮೇರಿಲ್ಯಾಂಡ್​ನ ಬಾಲ್ಟಿಮೋರ್​ನಲ್ಲಿರುವ ಜಾನ್ಸ್ ಹಾಪ್​ಕಿನ್ಸ್​ ವಿಶ್ವವಿದ್ಯಾನಿಲಯದಲ್ಲಿ ಫೆಲೋಶಿಪ್ ನಂತರ ಮುಂಬೈಗೆ ತೆರಳಿದರು.

ಕ್ಯಾನ್ಸರ್ ಬೆಳವಣಿಗೆಗೆ ಕಾರಣಗಳನ್ನು ಪತ್ತೆಹಚ್ಚಲು ಕಮಲ್ ರಣದಿವೆ ಮುಂದಾದರು. ಜೊತೆಗೆ ಕ್ಯಾನ್ಸರ್ ಮತ್ತು ಸೋಂಕುಗಳ ನಡುವಿನ ಕೊಂಡಿಯ ಬಗ್ಗೆ ಸಂಶೋಧನೆ ನಡೆಸಿದರು. ಭಾರತದ ಮೊದಲ ಸಂಶೋಧಕರಲ್ಲಿ ಕಮಲ್ ರಣದಿವೆ ಕೂಡಾ ಒಬ್ಬರು. ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಾ, ಕುಷ್ಠರೋಗವನ್ನು ಉಂಟು ಮಾಡುವ ಬ್ಯಾಕ್ಟೀರಿಯಾದ ಬಗ್ಗೆ ಅಧ್ಯಯನ ಮಾಡಿದರು. ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿಯುವ ಅಧ್ಯಯನದಲ್ಲಿ ತೊಡಗಿಕೊಂಡರು. ಬಳಿಕ 11 ಸಹೋದ್ಯೋಗಿಗಳ ಜೊತೆಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಮಹಿಳೆಯರನ್ನು ಬೆಂಬಲಿಸಲು ಭಾರತೀಯ ಮಹಿಳಾ ವಿಜ್ಞಾನ ಸಂಘ (IWSA) ಸ್ಥಾಪಿಸಿದರು.

1989ರಲ್ಲಿ ನಿವೃತ್ತಿ ಪಡೆದ ಬಳಿಕ ಕಮಲ್ ರಣದಿವೆ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಗ್ರಾಮೀಣ ಸಮುದಾಯದಲ್ಲಿ ಕೆಲಸ ಮಾಡಿದರು. ಮಹಿಳೆಯರಿಗೆ ಆರೋಗ್ಯ ಕಾರ್ಯಕರ್ತರಾಗಿ ತರಬೇತಿ ನೀಡಿದರು. ಆರೋಗ್ಯ ಮತ್ತು ಶಿಕ್ಷಣವನ್ನು ಜನರಿಗೆ ನೀಡಲು ಮುಂದಾದರು. ವಿಜ್ಞಾನ ಕ್ಷೇತ್ರ ಮತ್ತು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆಸರು ಪಡೆದ ಡಾ. ಕಮಲ್ ರಣದಿವೆ ಅವರ 104ನೇ ಜನ್ಮ ದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಆಚರಿಸಿದೆ.

ಇದನ್ನೂ ಓದಿ:

Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್​​ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್​ ವಿಶೇಷ ನಮನ

Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್