Realme Q5: ಬಜೆಟ್ ಬೆಲೆಗೆ ಬಲಿಷ್ಠ ಸ್ಮಾರ್ಟ್​​ಫೋನ್: ರಿಯಲ್ ಮಿಯಿಂದ ಹೊಸ Q5 ಸರಣಿ ಬಿಡುಗಡೆ

Realme Q5 Pro: ಇದೀಗ ಮತ್ತೆರಡು ಬಲಿಷ್ಠವಾದ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅದುವೆ ರಿಯಲ್‌ ಮಿ ಕ್ಯೂ5 ಮತ್ತು ರಿಯ ಲ್‌ಮಿ ಕ್ಯೂ5 ಪ್ರೊ. ಈ ಎರಡೂ ರಿಯಲ್‌ ಮಿಯ ನೂತನ ಫೋನ್‌ಗಳು ತ್ರಿವಳಿ ಕ್ಯಾಮೆರಾ ರಚನೆ ಹಾಗೂ 120Hz ಡಿಸ್‌ಪ್ಲೇಗಳೊಂದಿಗೆ ಬರುತ್ತವೆ.

Realme Q5: ಬಜೆಟ್ ಬೆಲೆಗೆ ಬಲಿಷ್ಠ ಸ್ಮಾರ್ಟ್​​ಫೋನ್: ರಿಯಲ್ ಮಿಯಿಂದ ಹೊಸ Q5 ಸರಣಿ ಬಿಡುಗಡೆ
Realme Q5 and Realme Q5 Pro
Follow us
| Updated By: Vinay Bhat

Updated on: Apr 21, 2022 | 2:04 PM

ವಿಶ್ವದಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಪ್ರಸಿದ್ಧ ರಿಯಲ್ ಮಿ ಕಂಪನಿ ಸದ್ಯದಲ್ಲೇ ಶವೋಮಿಯನ್ನು (Xiaomi) ಹಿಂದಿಕ್ಕಿ ನಂಬರ್ ಒನ್ ಪಟ್ಟ ಅಲಂಕರಿಸಿದರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಅತ್ಯುತ್ತಮ ಸ್ಮಾರ್ಟ್​​ಫೋನ್​ಗಳನ್ನು ರಿಯಲ್ ಮಿ ಪರಿಚಯಿಸುತ್ತಿದೆ. ಇದೀಗ ಮತ್ತೆರಡು ಬಲಿಷ್ಠವಾದ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅದುವೆ ರಿಯಲ್‌ ಮಿ ಕ್ಯೂ5 (Realme Q5) ಮತ್ತು ರಿಯಲ್‌ ಮಿ ಕ್ಯೂ5 ಪ್ರೊ (Realme Q5 Pro). ಈ ಎರಡೂ ರಿಯಲ್‌ ಮಿಯ ನೂತನ ಫೋನ್‌ಗಳು ತ್ರಿವಳಿ ಕ್ಯಾಮೆರಾ ರಚನೆ ಹಾಗೂ 120Hz ಡಿಸ್‌ಪ್ಲೇಗಳೊಂದಿಗೆ ಬರುತ್ತವೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಕೆಲವೇ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿದೆ. ಇದರಲ್ಲಿ ರಿಯಲ್‌ ಮಿ Q5 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಹೊಂದಿದ್ದರೆ, ರಿಯಲ್‌ ಮಿ Q5 ಪ್ರೊ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಭಾರತದಲ್ಲಿ ಎಷ್ಟಿರಬಹುದು?, ವಿಶೇಷತೆಗಳು ಏನೆಲ್ಲ ಇವೆ ಎಂಬುದನ್ನು ನೋಡೋಣ.

ರಿಯಲ್‌ ಮಿ Q5 ಫೋನಿನ ಫೀಚರ್ಸ್​ ಬಗ್ಗೆ ನೋಡುವುದಾದರೆ ಇದು 6.6 ಇಂಚಿನ ಫುಲ್‌ ಹೆಚ್‌ಡಿ + LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್​ನಿಂದ ಕೂಡಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಅಂತೆಯೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆ ಆಗಿದೆ.

ರಿಯಲ್‌ಮಿ Q5 ಪ್ರೊ ಫೋನ್ ಕೂಡ 6.6 ಇಂಚಿನ E4 AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು, 1,300 ನಿಟ್ಸ್‌ ಬ್ರೈಟ್ನೆಸ್‌ ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಅಡ್ರೊನಾ 650 GPU ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, ಇದು 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ ರಿಲೀಸ್ ಆಗಿದೆ.

ವಿದೇಶದಲ್ಲಿ ರಿಯಲ್‌ ಮಿ Q5 ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 6GB RAM ಮತ್ತು 128GB ಸ್ಟೋರೇಜ್‌ನ ಬೇಸ್‌ ಮಾಡೆಲ್‌ CNY 1,399, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 16,700 ರೂ. ಎನ್ನಬಹುದು. ಇನ್ನು ರಿಯಲ್‌ ಮಿ Q5 ಪ್ರೊ ಫೋನ್ ಕೂಡ ಮೂರು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್‌ನ ಬೇಸ್‌ ಮಾಡೆಲ್‌ CNY 1,799. ಇದರ ಬೆಲೆ ಭಾರತದಲ್ಲಿ ಅಂದಾಜು 21,500 ರೂ. ಎಂದು ಅಂದಾಜಿಸಲಾಗಿದೆ.

Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?