ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮತ್ತೊಂದು ನೂತನ ಫೋನ್ ಅನಾವರಣ ಮಾಡುವ ಬಗ್ಗೆ ಬಹಿರಂಗ ಪಡಿಸಿದ್ದು, ಇದು ಎಫ್ ಸರಣಿಯದ್ದಾಗಿದೆ. ಒಪ್ಪೋ ತನ್ನ ಎಫ್ ಸರಣಿ ಅಡಿಯಲ್ಲಿ ಹೊಸ ಒಪ್ಪೋ F25 (Oppo F25) ಫೋನ್ ಅನ್ನು ಮಾರ್ಚ್ 5, 2024 ರಂದು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸಾಧನವು 6.7 ಇಂಚಿನ AMOLED ಡಿಸ್ಪ್ಲೇ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದಂತಹ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರಬಹುದು ಎಂದು ಹೇಳಲಾಗಿದೆ.
ಒಪ್ಪೋ F25 ಬಿಡುಗಡೆ ದಿನಾಂಕ ಮಾರ್ಚ್ 5, 2024 ಎಂದು ಖ್ಯಾತ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ಹೊರಬರುತ್ತಿರುವ ಕುತೂಹಲಕಾರಿ ವಿಷಯವೆಂದರೆ ಭಾರತಕ್ಕೆ ಬರುತ್ತಿರುವ ಈ ಸ್ಮಾರ್ಟ್ಫೋನ್ ಒಪ್ಪೋ ರೆನೋ 11F ನ ರೀಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತದೆ. ಕಂಪನಿಯು ಇತ್ತೀಚೆಗೆ ಒಪ್ಪೋ ರೆನೋ 11F ಅನ್ನು ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ನಥಿಂಗ್ ಪ್ರಿಯರಿಗೆ ಬಂಪರ್ ಸುದ್ದಿ: ನಥಿಂಗ್ ಫೋನ್ 2A ಬಿಡುಗಡೆಗೆ ದಿನಾಂಕ ಫಿಕ್ಸ್
ಒಪ್ಪೋ F25 ನ ವಿಶೇಷತೆಗಳ ಬಗ್ಗೆ ಕೆಲ ಮಾಹಿತಿಗಳು ತಿಳಿದುಬಂದಿದೆ. ಅದರ ಪ್ರಕಾರ, ಈ ಫೋನ್ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಅದು FHD ಪ್ಲಸ್ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ. 120Hz ರಿಫ್ರೆಶ್ ದರದೊಂದಿಗೆ ಬರಲಿದೆ. ಡಿಸ್‌ಪ್ಲೇ ಅಡಿಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದು. ಆಂಡ್ರಾಯ್ಡ್ 14 ಆಧಾರಿತ ColorOS 14 ನಲ್ಲಿ ಫೋನ್ ರನ್ ಆಗುತ್ತದೆ.
Exclusive ✨
Oppo F25 launching in India on 5 March, 2024
Expected Specifications
📱 6.7″ FHD+ AMOLED display
120Hz refresh rate
🔳 MediaTek Dimensity 7050
🎮 ARM Mali-G68 MC4 GPU
LPDDR4x RAM and UFS 3.1 storage
🍭 Android 14
📸 64MP main+ 8MP+ 2MP rear camera
📷 32MP front… pic.twitter.com/gMFmqX3Ss0— Abhishek Yadav (@yabhishekhd) February 17, 2024
ಸ್ಯಾಮ್ಸಂಗ್ನಿಂದ ಅದ್ಭುತ: ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್ಫೋನ್
ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಹಿಂಭಾಗದ ಫಲಕವು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, 64-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಮೀಡಿಯಾಟೆಕ್ನ ಡೈಮೆನ್ಸಿಟಿ 7050 ಚಿಪ್‌ಸೆಟ್ ಅನ್ನು ಫೋನ್‌ನಲ್ಲಿ ನೀಡಬಹುದು.
ಇದು 8 GB ಫಿಸಿಕಲ್ RAM ಮತ್ತು 8 GB ವರ್ಚುವಲ್ RAM ನೊಂದಿಗೆ ಬರುತ್ತದೆ. ಇದು 256 GB ವರೆಗೆ ಸಂಗ್ರಹಣೆಯನ್ನು ಕೂಡಿಡಬಲ್ಲದು. ಬ್ಯಾಟರಿ ಸಾಮರ್ಥ್ಯವು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಆಗಿರುತ್ತದೆ. IP65 ರೇಟಿಂಗ್ ಅನ್ನು ಫೋನ್‌ನಲ್ಲಿಯೂ ಕಾಣಬಹುದು. ಇದರ ಬೆಲೆ 30,000 ರೂ. ಆಸುಪಾಸಿನಲ್ಲಿ ಇರಬಹುದು ಎನ್ನಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ