ನಥಿಂಗ್ ಪ್ರಿಯರಿಗೆ ಬಂಪರ್ ಸುದ್ದಿ: ನಥಿಂಗ್ ಫೋನ್ 2A ಬಿಡುಗಡೆಗೆ ದಿನಾಂಕ ಫಿಕ್ಸ್

Nothing Phone (2a) India Launch; ನಥಿಂಗ್ ಫೋನ್ 2(A) ಮಾರ್ಚ್ 5, 2024 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ನಥಿಂಗ್ ಫೋನ್ 1 ಗಿಂತ ನಥಿಂಗ್ ಫೋನ್ 2(ಎ) ಬೆಲೆ ಅಗ್ಗವಾಗಿರಲಿದೆಯಂತೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ.

ನಥಿಂಗ್ ಪ್ರಿಯರಿಗೆ ಬಂಪರ್ ಸುದ್ದಿ: ನಥಿಂಗ್ ಫೋನ್ 2A ಬಿಡುಗಡೆಗೆ ದಿನಾಂಕ ಫಿಕ್ಸ್
Nothing Phone 2a
Follow us
Vinay Bhat
|

Updated on: Feb 18, 2024 | 12:47 PM

ವರ್ಷದಿಂದ ವರ್ಷಕ್ಕೆ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್‌ಗಳ (Smartphones) ಬಳಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ನಥಿಂಗ್ ಫೋನ್ ಎಲ್ಲರನ್ನೂ ಆಕರ್ಷಿಸುತ್ತಿವೆ. ಭಾರತದಲ್ಲಿ ಫೋನ್ ಮಾರಾಟದ ವಿಷಯದಲ್ಲೂ ಇದು ಮುಂಚೂಣಿಯಲ್ಲಿದೆ. ಇದೀಗ ಈ ಕಂಪನಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಗೆ ಸಜ್ಜಾಗಿದೆ. ಅದುವೇ ನಥಿಂಗ್ ಫೋನ್ 2(A). ಈ ಫೋನನ್ನು ಮಾರ್ಚ್ 5, 2024 ರಂದು ಅನಾವರಣಗೊಳಿಸುವುದಾಗಿ ಕಂಪನಿಯ ಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.

ಲಂಡನ್ ಮೂಲದ ನಥಿಂಗ್ ಟೆಕ್ನಾಲಜಿ ಕಂಪನಿಯು ಕಳೆದ ಕೆಲವು ತಿಂಗಳುಗಳಿಂದ ಈ ಹೊಸ ಫೋನ್ ಬಗ್ಗೆ ಒಂದಲ್ಲ ಒಂದು ಮಾಹಿತಿ ಹಂಚಿಕೊಳ್ಳುತ್ತಲೇ ಇದೆ. ನಥಿಂಗ್ ಫೋನ್ 2(A) 6.7-ಇಂಚಿನ 120Hz ಡಿಸ್​ಪ್ಲೇ ಮತ್ತು 12GB RAM ನೊಂದಿಗೆ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳಿವೆ.

ಸ್ಯಾಮ್​ಸಂಗ್​ನಿಂದ ಅದ್ಭುತ: ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್

ನಥಿಂಗ್ ಫೋನ್ 1 ಗಿಂತ ನಥಿಂಗ್ ಫೋನ್ 2(ಎ) ಬೆಲೆ ಕೂಡ ಅಗ್ಗವಾಗಿರಲಿದೆಯಂತೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಹಾಗೆಯೆ ಇದು ‘ಗ್ಲಿಫ್ ಇಂಟರ್ಫೇಸ್’ ಇಲ್ಲದೆ ಬಿಡುಗಡೆಯಾಗಲಿದೆ ಎಂಬ ಮಾತಿದೆ. ಈ ಫೋನಿನ ಬೆಲೆ ಸುಮಾರು ರೂ. 31,000 ಇರಬಹುದು.

ಈ ಸಾಧನವನ್ನು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಗಳಿವೆ. ಹೆಚ್ಚುವರಿಯಾಗಿ, ಈ ಫೋನ್ 50MP ಡ್ಯುಯಲ್-ಕ್ಯಾಮೆರಾ ಸೆಟಪ್, 32MP ಮುಂಭಾಗದ ಕ್ಯಾಮೆರಾ ಮತ್ತು 1084×2412 ಪಿಕ್ಸೆಲ್ ರೆಸಲ್ಯೂಶನ್ ಡಿಸ್​ಪ್ಲೇಯೊಂದಿಗೆ ಬರುತ್ತದೆ. ನಥಿಂಗ್ ಫೋನ್ 2(A) ಕ್ಯಾಮೆರಾದಲ್ಲಿ Sony IMX615 ಸಂವೇದಕವನ್ನು ಹೊಂದಿರುವುದು ಖಚಿತವಾಗಿದೆ.

ಆ್ಯಪಲ್‌ನ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್​ಫೋನ್‌ ಹೇಗಿರಲಿದೆ ಗೊತ್ತೇ?

ಆಂಡ್ರಾಯ್ಡ್ 14-ಆಧಾರಿತ ನಥಿಂಗ್ ಓಎಸ್ 2.5 ಕಸ್ಟಮ್ ಸ್ಕಿನ್ ಆಫ್ ದಿ ಬಾಕ್ಸ್ ಮೂಲಕ ರನ್ ಆಗುತ್ತದೆ. ಬ್ಯಾಟರಿ ಸಾಮರ್ಥ್ಯವು ಎಷ್ಟೆಂದು ತಿಳಿದುಬಂದಿಲ್ಲ, ಈ ಫೋನ್ 45W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆಯಂತೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ