ಚೀನಾದ ಪ್ರಸಿದ್ಧ ಹ್ಯಾಂಡ್‌ಸೆಟ್ ತಯಾರಕ ಒಪ್ಪೋ ಗ್ರಾಹಕರಿಗಾಗಿ ಆಕರ್ಷಕ ಕ್ಯಾಮೆರಾದ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಚೀನಾ ಮಾರುಕಟ್ಟೆಯಲ್ಲಿ ಒಪ್ಪೋ ಫೈಂಡ್ X7 ಮತ್ತು ಒಪ್ಪೋ ಫೈಂಡ್ X7 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಒಪ್ಪೋ ಫೈಂಡ್ X7 ಸರಣಿಯಲ್ಲಿ (OPPO Find X7 series) ಬಿಡುಗಡೆಯಾದ ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ, ಕ್ವಾಲ್ಕಂ ಕಂಪನಿಯ ಪ್ರಮುಖ ಮತ್ತು ಶಕ್ತಿಯುತ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ, ಒಪ್ಪೋದ ಈ ಫೋನಿನ ಸರಣಿಯಲ್ಲಿ ಉತ್ತಮ ಕ್ಯಾಮರಾ ಗುಣಮಟ್ಟಕ್ಕಾಗಿ Hasselblad ಜೊತೆ ಕೈಜೋಡಿಸಿದೆ. ಇದು ಡಿಎಸ್ಎಲ್ಆರ್ ಮಾದರಿಯಲ್ಲಿ ಫೋಟೋವನ್ನು ಸೆರೆಹಿಡಿಯುತ್ತದೆ. ಈ ಫೋನಿನ ಫೀಚರ್ಸ್ ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸ್ಪ್ಲೇ : 3168 × 1440 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.82-ಇಂಚಿನ ಕ್ವಾಡ್ HD+ LTPO ಡಿಸ್ಪ್ಲೇ ಹೊಂದಿದೆ. 1-120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್4500 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ನೀಡಲಾಗಿದೆ.
ಚಿಪ್‌ಸೆಟ್: ಮೀಡಿಯಾ ಟೆಕ್ ಡೈಮೆನ್ಶನ್ 9300 ಪ್ರೊಸೆಸರ್ ಅನ್ನು ಫೋನ್‌ನಲ್ಲಿ ವೇಗ ಮತ್ತು ಬಹುಕಾರ್ಯಕ್ಕಾಗಿ ಬಳಸಲಾಗಿದೆ.
Amazon Great Republic Day Sale 2024: ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳ ಮೇಲೆ ಬಂಪರ್ ಡಿಸ್ಕೌಂಟ್
ಕ್ಯಾಮೆರಾ ಸೆಟಪ್: ಹಿಂಭಾಗವು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 64 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಫೋನ್‌ನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.
ಬ್ಯಾಟರಿ: 100 ವ್ಯಾಟ್ SuperVOOC ವೈರ್ಡ್ ಚಾರ್ಜ್ ಬೆಂಬಲದೊಂದಿಗೆ 5000 mAh ಬ್ಯಾಟರಿ ಇದೆ.
ಡಿಸ್ಪ್ಲೇ: ಈ ಫೋನ್ 6.82 ಇಂಚಿನ ಬಾಗಿದ AMOLED ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್, 4500 nits ಗರಿಷ್ಠ ಬ್ರೈಟ್‌ನೆಸ್, 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ.
ಚಿಪ್‌ಸೆಟ್: ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನರೇಷನ್ 3 ಪ್ರೊಸೆಸರ್ ಅನ್ನು ಈ ಪ್ರಮುಖ ಫೋನ್‌ನಲ್ಲಿ ವೇಗ ಮತ್ತು ಬಹುಕಾರ್ಯಕಕ್ಕಾಗಿ ಬಳಸಲಾಗಿದೆ.
ಕ್ಯಾಮೆರಾ ಸೆಟಪ್: ಹಿಂಭಾಗವು 50 ಮೆಗಾಪಿಕ್ಸೆಲ್ ಸೋನಿ LYT 900 ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ LYT 600 ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ IMX 890 ಪೆರಿಸ್ಕೋಪ್ ಟೆಲಿಫೋಟೋ ಸಂವೇದಕ ಮತ್ತು 50MP ಸೋನಿ IMX ಟೆಲಿಪ್‌ಟೋಪ್ 858 ಅನ್ನು ಹೊಂದಿದೆ. ಈ ಫೋನ್‌ನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ: 5000 mAh ಬ್ಯಾಟರಿಯನ್ನು ಒದಗಿಸಲಾಗಿದೆ, ಇದು 100 ವ್ಯಾಟ್ SuperVOOC ವೈರ್ಡ್ ಚಾರ್ಜ್ ಮತ್ತು 50 ವ್ಯಾಟ್ ವೈರ್‌ಲೆಸ್ ಚಾರ್ಜ್ ಅನ್ನು ಬೆಂಬಲಿಸುತ್ತದೆ.
ಈ ಫೋನ್‌ನ 12 GB RAM / 256 GB ಸ್ಟೋರೇಜ್ ರೂಪಾಂತರದ ಬೆಲೆ RMB 3999 (ಅಂದಾಜು ರೂ 47,500). 16GB/256GB ಸ್ಟೋರೇಜ್ ರೂಪಾಂತರದ ಬೆಲೆ RMB 4299 (ಅಂದಾಜು ರೂ. 51,100) ಮತ್ತು 16GB/512GB ಸ್ಟೋರೇಜ್ ರೂಪಾಂತರದ ಬೆಲೆ RMB 4599 (ಅಂದಾಜು ರೂ. 54,600).
ಈ ಮೊಬೈಲ್‌ನ 12 GB RAM / 256 GB ರೂಪಾಂತರದ ಬೆಲೆ RMB 5999 (ಅಂದಾಜು ರೂ 70,300). 16 GB RAM / 256 GB ರೂಪಾಂತರದ ಬೆಲೆ RMB 6499 (ಅಂದಾಜು ರೂ 77,200) ಮತ್ತು 16 GB RAM / 512 GB ರೂಪಾಂತರದ ಬೆಲೆ RMB 6999 (ಅಂದಾಜು ರೂ 83,100).
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Tue, 9 January 24