Oppo K10: ಕಡಿಮೆ ಬೆಲೆ, ಬಂಪರ್ ಫೀಚರ್ಸ್: ಇಂದಿನಿಂದ ಒಪ್ಪೋ K10 ಖರೀದಿಗೆ ಲಭ್ಯ: ಈ ಫೋನ್ ಮಿಸ್ ಮಾಡ್ಬೇಡಿ

| Updated By: Vinay Bhat

Updated on: Mar 29, 2022 | 6:35 AM

Oppo K10 First Sale: ದೀರ್ಘ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿರುವ ಒಪ್ಪೋ K10 ಫೋನ್ ಇಂದಿನಿಂದ ಭಾರತದಲ್ಲಿ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ ಮೂಲಕ (Flipkart) ಮೊದಲ ಸೇಲ್ ಕಾಣುತ್ತಿದೆ.

Oppo K10: ಕಡಿಮೆ ಬೆಲೆ, ಬಂಪರ್ ಫೀಚರ್ಸ್: ಇಂದಿನಿಂದ ಒಪ್ಪೋ K10 ಖರೀದಿಗೆ ಲಭ್ಯ: ಈ ಫೋನ್ ಮಿಸ್ ಮಾಡ್ಬೇಡಿ
Oppo K10
Follow us on

ಭಾರತದಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್​ಗಳ ಮೂಲಕ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಕಳೆದ ವಾರ ತನ್ನ K-ಸರಣಿಯಲ್ಲಿ ಹೊಸ ಒಪ್ಪೋ ಕೆ10 (Oppo K10) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿತ್ಉ. 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಈ ಫೋನ್​ಗೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ನೀಡಲಾಗಿದೆ. ದೀರ್ಘ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿರುವ ಈ ಫೋನ್ ಇಂದಿನಿಂದ ಭಾರತದಲ್ಲಿ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ನಲ್ಲಿ (Flipkart) ಇಂದು ಮಧ್ಯಾಹ್ನ 12 ಗಂಟೆಯಿಂದ ಒಪ್ಪೋ K10 ಮೊದಲ ಸೇಲ್ ಕಾಣುತ್ತಿದೆ.

 ಬೆಲೆ ಎಷ್ಟು?:

ಭಾರತದಲ್ಲಿ ಒಪ್ಪೋ K10 ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಮಾದರಿಗೆ 14,990 ರೂ. ನಿಗದಿ ಮಾಡಲಾಗಿದೆ. 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 16,990 ರೂ. ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಕಾರ್ಬನ್ ಮತ್ತು ಬ್ಲೂ ಫ್ಲೇಮ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಮಾರ್ಚ್ 29 ರಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಕಂಪನಿಯ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಜೊತೆಗೆ ಆಕರ್ಷಕ ಆಫರ್​ಗಳನ್ನು ಸಹ ನೀಡಲಾಗಿದೆ.

ಏನು ವಿಶೇಷತೆ?:

ಒಪ್ಪೋ K10 ಸ್ಮಾರ್ಟ್‌ಫೋನ್ 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.59 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಹೊಂದಿದ್ದು, ಕಲರ್‌ ಒಎಸ್‌ 11.1 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗದ ಸ್ಟೋರೇಜ್‌ ಸ್ಪೇಸ್‌ ಬಳಸಿಕೊಂಡು ಹೆಚ್ಚುವರಿ 5G ಮೂಲಕ ಡೈನಾಮಿಕ್ RAM ವಿಸ್ತರಣೆಯನ್ನು ಬೆಂಬಲಿಸುತ್ತದೆ.

ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ ಲೋ ಲೈಟ್‌ ಫೋಟೋಗ್ರಫಿಗಾಗಿ ನೈಟ್‌ಸ್ಕೇಪ್ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 33W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

Poco X4 Pro 5G: ಬೊಂಬಾಟ್ ಬ್ಯಾಟರಿ, ಭರ್ಜರಿ ಕ್ಯಾಮೆರಾ: ಭಾರತದಲ್ಲಿ ಪೋಕೋ X4 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್

WhatsApp: ಇನ್ನುಂದೆ ವಾಟ್ಸ್​ಆ್ಯಪ್​ನಲ್ಲಿ ಶೇರ್ ಮಾಡಬಹುದು 100MB ಗಿಂತ ಅಧಿಕ ಫೈಲ್: ಇಲ್ಲಿದೆ ಮಾಹಿತಿ