ಮಾರುಕಟ್ಟೆಗೆ ಬಂತು ಅದ್ಭುತ ಕ್ಯಾಮೆರಾ, ಫಾಸ್ಟ್ ಚಾರ್ಜರ್​ನ ಒಪ್ಪೋ ರೆನೋ 11 ಸರಣಿ ಸ್ಮಾರ್ಟ್​ಫೋನ್

|

Updated on: Nov 23, 2023 | 4:04 PM

OPPO Reno 11 and OPPO Reno 11 Pro Launched: ಒಪ್ಪೋ ರೆನೋ 11 ಸರಣಿಯು ವಿಶೇಷವಾಗಿ ಕ್ಯಾಮೆರಾ ವಿಭಾಗಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಆಂಡ್ರಾಯ್ಡ್ 14 OS ನೊಂದಿಗೆ ಬರುತ್ತವೆ. 32MP ಸೆಲ್ಫಿ ಕ್ಯಾಮೆರಾ ಕೂಡ ಇದೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಮಾರುಕಟ್ಟೆಗೆ ಬಂತು ಅದ್ಭುತ ಕ್ಯಾಮೆರಾ, ಫಾಸ್ಟ್ ಚಾರ್ಜರ್​ನ ಒಪ್ಪೋ ರೆನೋ 11 ಸರಣಿ ಸ್ಮಾರ್ಟ್​ಫೋನ್
Oppo Reno 11 Series
Follow us on

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ಒಪ್ಪೋ ಇದೀಗ ಹೊಸ ಮೊಬೈಲ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಇಂದು ಚೀನಾ ಮಾರುಕಟ್ಟೆಯಲ್ಲಿ ಒಪ್ಪೋ ರೆನೋ 11 ಸರಣಿ (OPPO Reno 11 Series) ಬಿಡುಗಡೆ ಆಗಿದೆ. ಇದರಲ್ಲಿ ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ 11 ಪ್ರೊ ಎಂಬ ಎರಡು ಸ್ಮಾರ್ಟ್​ಫೋನ್​ಗಳಿವೆ. ಇವುಗಳು ಒಪ್ಪೋ ರೆನೋ 10 ರ ಉತ್ತರಾಧಿಕಾರಿಯಾಗಿದೆ. ರೆನೋ 11 ಸರಣಿಯಲ್ಲಿ ವಿಶೇಷವಾಗಿ ಕ್ಯಾಮೆರಾ ವಿಭಾಗಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಆಂಡ್ರಾಯ್ಡ್ 14 OS ನೊಂದಿಗೆ ಬರುತ್ತವೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಒಪ್ಪೋ ರೆನೋ 11 5G ಸರಣಿಯ ಬೆಲೆ:

ಒಪ್ಪೋ ರೆನೋ 11 ಪ್ರೊ 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 12GB + 256GB ಸ್ಟೋರೇಜ್ ಆಯ್ಕೆಗೆ RMB 3,499 (ಸುಮಾರು ರೂ. 41,100) ಮತ್ತು 12GB + 512GB ರೂಪಾಂತರಕ್ಕೆ RMB 3,799 (ಅಂದಾಜು ರೂ. 45,100).

ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ರೆಡ್ಮಿ ನೋಟ್ 13R ಪ್ರೊ ಬಿಡುಗಡೆ

ಇದನ್ನೂ ಓದಿ
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಎಚ್ಚರದಿಂದಿರಿ
OpenAI ಸಿಇಒ ಆಗಿ ಮರಳಿ ಬರಲಿದ್ದಾರೆ ಸ್ಯಾಮ್ ಆಲ್ಟ್‌ಮನ್
OpenAIಗೆ ಬಿಗ್​​​ ಫೈಟ್​​ ನೀಡಲು ಬರುತ್ತಿದೆ ಗೂಗಲ್​​​ನ ಜೆಮಿನಿ
ಯೂಟ್ಯೂಬ್ ಚಾನೆಲ್​ನಲ್ಲಿ ಸಬ್​ಸ್ಕ್ರೈಬರ್ಸ್ ಹೆಚ್ಚಿಸುವುದು ಹೇಗೆ?

ಇನ್ನು ರೆನೋ 11 5G ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB + 256GB ಸ್ಟೋರೇಜ್ ಆಯ್ಕೆಗೆ RMB 2,499 (ಸುಮಾರು 29,700 ರೂ.), 12GB + 256GB ಮಾದರಿಗೆ RMB 2,799 (ರೂ. 32,900) ಮತ್ತು 12GB + 512GB ಮಾಡೆಲ್​ಗೆ RMB 2,999 (ರೂ. 35,300) ನಿಗದಿ ಮಾಡಲಾಗಿದೆ.

ಒಪ್ಪೋ ರೆನೋ 11 5G ಸರಣಿ ಫೀಚರ್ಸ್:

ಡಿಸ್ ಪ್ಲೇ: ರೆನೋ 11 2,412 X 1,080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 800 nits ಗರಿಷ್ಠ ಬ್ರೈಟ್​ನೆಸ್​ನೊಂದಿಗೆ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ರೆನೋ 11 ಪ್ರೊ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.74-ಇಂಚಿನ FHD+ ಡಿಸ್ ಪ್ಲೇಯೊಂದಿಗೆ ಬರುತ್ತದೆ.

ಪ್ರೊಸೆಸರ್ : ರೆನೋ 11 ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ನಿಂದ ಚಾಲಿತವಾಗುತ್ತದೆ. ಅಂತೆಯೆ ರೆನೋ 11 ಪ್ರೊನಲ್ಲಿ ಸ್ನಾಪ್‌ಡ್ರಾಗನ್ 8+ Gen 1 SoC ಅನ್ನು Adreno GPU ನೊಂದಿಗೆ ಜೋಡಿಸಲಾಗಿದೆ.

RAM/ಸಂಗ್ರಹಣೆ : ರೆನೋ 11 ಅನ್ನು 8GB/256GB, 12GB/256GB, ಮತ್ತು 12GB/512GB ಸಂಗ್ರಹಣೆಯಲ್ಲಿ ನೀಡಲಾಗುತ್ತದೆ. ರೆನೋ 11 ಪ್ರೊ ಕೇವಲ ಎರಡು ರೂಪಾಂತರಗಳಲ್ಲಿ ಬರಲಿದೆ: 12GB/256GB, ಮತ್ತು 12GB/512GB ಸಂಗ್ರಹಣೆ.

OS : ರೆನೋ 11 ಸರಣಿಯು ಆಂಡ್ರಾಯ್ಡ್ 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ : ರೆನೋ 11 ಸ್ಮಾರ್ಟ್​ಫೋನ್ 50MP ಪ್ರಾಥಮಿಕ ಕ್ಯಾಮೆರಾ, 32MP ಸೆಕೆಂಡರಿ ಲೆನ್ಸ್ ಮತ್ತು 8MP ಮೂರನೇ ಸಂವೇದಕದೊಂದಿಗೆ ಬರುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ರೆನೋ 11 ಪ್ರೊನಲ್ಲಿ 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ f/1.8 ಅಪರ್ಚರ್, OIS, 32MP ಪೋರ್ಟ್ರೇಟ್ ಸೆನ್ಸಾರ್ ಮತ್ತು 2x ಹೈಬ್ರಿಡ್ ಜೂಮ್ ಮತ್ತು 20x ಡಿಜಿಟಲ್ ನೊಂದಿಗೆ 8MP ಮೂರನೇ ಕ್ಯಾಮೆರಾ ನೀಡಲಾಗಿದೆ. 32MP ಸೆಲ್ಫಿ ಕ್ಯಾಮೆರಾ ಕೂಡ ಇದೆ.

ಬ್ಯಾಟರಿ : ರೆನೋ 11 5G 67W ವೇಗದ ಚಾರ್ಜಿಂಗ್‌ನೊಂದಿಗೆ 4,800mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಆದರೆ ಪ್ರೊ ಆವೃತ್ತಿಯು 4,700mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ