Oppo Reno 7 5G: ಒಪ್ಪೋ ರೆನೋ 7 ಸೇಲ್ ಆರಂಭ: ಈ ಫೋನ್ ನೀವು ಏಕೆ ಖರೀದಿಸಬೇಕು?, ಇಲ್ಲಿದೆ 3 ಕಾರಣ

| Updated By: Vinay Bhat

Updated on: Feb 17, 2022 | 2:04 PM

ಒಪ್ಪೋ ರೆನೋ 7 (Oppo Reno 7 5G) ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಹೊಂದಿದೆ. ಜೊತೆಗೆ 4500mAh ಬ್ಯಾಟರಿ ಸಾಮರ್ಥ್ಯ ಹಾಗೂ 65W ಚಾರ್ಜಿಂಗ್‌ ಬೆಂಬಲ ಈ ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು?, ಇದನ್ನು ನೀವು ಏಕೆ ಖರೀದಿಸಬೇಕು? ಎಂಬುದಕ್ಕೆ ಈ ಸ್ಟೋರಿ ಓದಿ.

Oppo Reno 7 5G: ಒಪ್ಪೋ ರೆನೋ 7 ಸೇಲ್ ಆರಂಭ: ಈ ಫೋನ್ ನೀವು ಏಕೆ ಖರೀದಿಸಬೇಕು?, ಇಲ್ಲಿದೆ 3 ಕಾರಣ
Oppo Reno 7 5G
Follow us on

ಭಾರತದಲ್ಲಿ ವಾರಗಳ ಹಿಂದೆಯಷ್ಟೆ ಒಪ್ಪೋ ಕಂಪನಿ ತನ್ನ ರೆನೋ ಸರಣಿಯ ಅಡಿಯಲ್ಲಿ ಎರಡು ಹೊಸ ಒಪ್ಪೋ ರೆನೋ 7 ಪ್ರೊ ಮತ್ತು ರೆನೋ 7 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಪೈಕಿ ಒಪ್ಪೋ ರೆನೋ 7 ಪ್ರೊ (Oppo Reno 7 5G) ಮೊನ್ನೆಯಷ್ಟೆ ಗ್ರಾಹಕರ ಕೈ ಸೇರಿತ್ತು. ಇದೀಗ ಒಪ್ಪೋ ರೆನೋ 7 ಕೂಡ ತನ್ನ ಮಾರಾಟವನ್ನು ಆರಂಭಿಸಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಸೇಲ್ ಲೈವ್ ಆಗಿದೆ. ತನ್ನ ಆಕರ್ಷಕ ಫೀಚರ್ಸ್‌ಗಳಿಂದಲೇ ಗಮನ ಸೆಳೆದಿರುವ ಒಪ್ಪೋ ರೆನೋ 7 (Oppo Reno 7 5G) ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಹೊಂದಿದೆ. ಜೊತೆಗೆ 4500mAh ಬ್ಯಾಟರಿ ಸಾಮರ್ಥ್ಯ ಹಾಗೂ 65W ಚಾರ್ಜಿಂಗ್‌ ಬೆಂಬಲ ಈ ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು?, ಇದನ್ನು ನೀವು ಏಕೆ ಖರೀದಿಸಬೇಕು? ಎಂಬುದಕ್ಕೆ ಈ ಸ್ಟೋರಿ ಓದಿ.

ಏನು ವಿಶೇಷತೆ?:

ಒಪ್ಪೋ ರೆನೋ 7 ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಪಡೆದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ನಲ್ಲಿ ಕಲರ್‌ ಒಎಸ್‌ 12 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್‌-ಆಂಗಲ್‌ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮರಾ ಹೊಂದಿದೆ. 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 65W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿಸುತ್ತದೆ.

ಬೆಲೆ ಎಷ್ಟು?:

ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಆಯ್ಕೆಯಲ್ಲಷ್ಟೆ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 28,999 ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಸ್ಟ್ಯಾರಿ ಬ್ಲ್ಯಾಕ್‌ ಮತ್ತು ಸ್ಟಾರ್‌ಟ್ರೇಲ್ಸ್‌ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಮಾಡಿದರೆ 10% ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ. ಇದನ್ನು ಫ್ಲಿಪ್‌ಕಾರ್ಟ್, ಒಪ್ಪೋ ಆನ್‌ಲೈನ್ ​​ಸ್ಟೋರ್, ಮತ್ತು ರಿಟೇಲ್‌ ಸ್ಟೋರ್‌ ನಲ್ಲಿ ಖರೀದಿಸಬಹುದು.

ಏಕೆ ಖರೀದಿಸಬೇಕು?:

  • ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನಿನ ಡಿಸೈನ್ ಅದ್ಭುತವಾಗಿದೆ. ಸ್ಟೈಲೀಶ್ ಫೋನ್ ಎದುರು ನೋಡುತ್ತಿರುವವರಿಗೆ ಇದು ಇಷ್ಟವಾಗುತ್ತದೆ. ಪ್ರೀಮಿಯಂ ಮಾದರಿಯಲ್ಲಿ ಇದು ಕಾಣುತ್ತಿದ್ದು, ಕೈಯಲ್ಲಿ ಗ್ರಿಪ್​ನೊಂದಿಗೆ ಹೊಂದಿಕೊಳ್ಳುತ್ತದೆ.
  • ಈ ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ, 90Hz ರಿಫ್ರೆಶ್ ರೇಟ್ ಪಡೆದಿದೆ. ಇದು ಸಿನಿಮಾ ವೀಕ್ಷಣೆಗೆ ಅಥವಾ ಗೇಮ್​ಗಳನ್ನು ಆಡಲು ಹೇಳಿಮಾಡಿಸಿದ್ದು. ಟಚ್ ಕೂಡ ತುಂಬಾ ನಯವಾಗಿದ್ದು, 180Hz ಟಚ್ ಸ್ಯಾಂಪಲ್ ರೇಟ್ ಹೊಂದಿದೆ.
  • 45000mAh ಸಾಮರ್ಥ್ಯದ ಬ್ಯಾಟರಿ ಪವರ್ ನೀಡಲಾಗಿದ್ದು, ಸಾಮಾನ್ಯವಾಗಿ ಮೊಬೈಲ್ ಉಪಯೋಗಿಸುವವರಿಗೆ ಇದು ಉತ್ತಮ ಆಯ್ಕೆ. ಜೊತೆಗೆ 65W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಅಂದರೆ ಚಾರ್ಜ್ ಕಡಿಮೆ ಇದ್ದರೂ 35 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.

Realme 9 Pro 5G: ರಿಯಲ್‌ ಮಿ 9 ಪ್ರೊ 5G, ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ ರಿಲೀಸ್: ಇದರಲ್ಲಿದೆ ಅಚ್ಚರಿ ಫೀಚರ್ಸ್