Tips and Tricks: ಈ ಟಿಪ್ಸ್​ ಮತ್ತು ಟ್ರಿಕ್​ಗಳನ್ನು ಪ್ರಯೋಗಿಸಿ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಸೂಪರ್ ಫಾಸ್ಟ್ ಮಾಡಿ

ಈ ಸ್ಮಾರ್ಟ್‌ಫೋನ್‌ ಯುಗದಲ್ಲಿ ನಾವು ನಮ್ಮ ಅಗತ್ಯಕ್ಕೂ ಮೀರಿ ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸಿರುವುದರಿಂದ, ನಮ್ಮ ಸ್ಮಾರ್ಟ್‌ಫೋನ್ ಕಾರ್ಯಗಳು ನಿಧಾನವಾದರೆ ಆಗುವ ಕಿರಿಕಿರಿ ಅಷ್ಟಿಟ್ಟಲ್ಲ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ವೇಗ ನಿಧಾನವಾಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಇಂದಿನ ಲೇಖನವು ನಿಮಗೆ ಅತ್ಯಂತ ಉಪಯೋಗಕಾರಿಯಗಬಲ್ಲದು.

Tips and Tricks: ಈ ಟಿಪ್ಸ್​ ಮತ್ತು ಟ್ರಿಕ್​ಗಳನ್ನು ಪ್ರಯೋಗಿಸಿ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಸೂಪರ್ ಫಾಸ್ಟ್ ಮಾಡಿ
Smartphone Speed
Follow us
TV9 Web
| Updated By: Vinay Bhat

Updated on: Feb 18, 2022 | 6:55 AM

ನಮ್ಮ ಪ್ರತಿನಿತ್ಯದ ಜೀವನದಲ್ಲಿ ಸ್ಮಾರ್ಟ್​ಫೋನ್​ (Smartphone) ಕೂಡಾ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ನಾವು ನಮ್ಮ ಮೊಬೈಲ್​ನಲ್ಲಿ ಇನ್​ಸ್ಟಾಲ್​​ ಮಾಡಿರುವ ಆ್ಯಪ್​ಗಳಿಂದಲೋ ಅಥವಾ ಹೆಚ್ಚಿನ ಗ್ರಾಫಿಕ್​ ಬಳಕೆಯಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದ ಇದರ​ ಕಾರ್ಯ ನಿರ್ವಹಣೆಯ ವೇಗದ ಮಿತಿ ಕುಂಠಿತಗೊಳ್ಳುತ್ತದೆ. ಒಂದು ವಿಡಿಯೋ ಡೌನ್‌ಲೋಡ್ ಮಾಡಬೇಕೆಂದರೂ, ಒಂದು ಅಪ್ಲಿಕೇಷನ್ (App) ತೆರೆಯಬೇಕೆಂದರೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಸ್ಮಾರ್ಟ್‌ಫೋನ್‌ ಯುಗದಲ್ಲಿ ನಾವು ನಮ್ಮ ಅಗತ್ಯಕ್ಕೂ ಮೀರಿ ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸಿರುವುದರಿಂದ, ನಮ್ಮ ಸ್ಮಾರ್ಟ್‌ಫೋನ್ ಕಾರ್ಯಗಳು ನಿಧಾನವಾದರೆ (Phone Slow) ಆಗುವ ಕಿರಿಕಿರಿ ಅಷ್ಟಿಟ್ಟಲ್ಲ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ವೇಗ ನಿಧಾನವಾಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಇಂದಿನ ಲೇಖನವು ನಿಮಗೆ ಅತ್ಯಂತ ಉಪಯೋಗಕಾರಿಯಗಬಲ್ಲದು. ನಿಮ್ಮ ಸ್ಮಾರ್ಟ್‌ಫೋನನ್ನು 100% ಸೂಪರ್ ಫಾಸ್ಟ್ ಆಗಿ ಕೆಲಸ ಮಾಡ ಬೇಕೆಂದರೆ ನಿಮ್ಮ ಫೋನಿನಲ್ಲಿ ಕೆಲವೇ ಕೆಲವು ಕೆಲಸಗಳನ್ನು ಮಾಡಿದರೆ ಸಾಕಾಗುತ್ತದೆ. ಅದು ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಅಧಿಕ ಡೇಟಾ ಸಾಮರ್ಥ್ಯದ ಗೇಮ್ಸ್‌, ಥರ್ಡ್‌ಪಾರ್ಟಿ ಮೂಲದ ಅಪ್ಲಿಕೇಶನ್‌ಗಳಂತಹ ಕೆಲವು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸಾಮಾಜಿಕ ತಾಣಗಳು ಮತ್ತು ಮೆಸೆಜಿಂಗ್‌ ಆಪ್‌ಗಳು ಸೇರಿ ಸ್ಮಾರ್ಟ್‌ಫೋನ್‌ ಮೆಮೊರಿ ಭರ್ತಿಯಾಗಿ ಕಾರ್ಯ ಮಂದಗತಿಯಲ್ಲಿ ನಡೆಸುತ್ತದೆ. ಇದಲ್ಲದೇ ಫೋನ್‌ ಸರಿಯಾದ ವೇಳೆ ಅಪ್‌ಡೇಟ್‌ ಮಾಡದಿದ್ದರೂ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ. ಇವುಗಳನ್ನು ಹೊರತುಪಡಿಸಿ ಇನ್ನು ಹಲವು ಕಾರಣಗಳಿಂದಾಗಿ ಸಹ ಫೋನ್ ತನ್ನ ಕಾರ್ಯ ಸ್ಲೋ ಮಾಡಿರುತ್ತದೆ.

ಮೆಮೊರಿ ಬಗ್ಗೆ ಗಮನವಿರಲಿ

16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿಯನ್ನು ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೊರೇಜ್‌ನಿಂದಾಗಿ ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ಮೆಮೊರಿಗಿಂತ ಅರ್ಧಕ್ಕಿಂತಲೂ ಹೆಚ್ಚು ಸ್ಟೋರೇಜ್‌ ಖಾಲಿ ಇರಲಿ.

ಕಡಿಮೆ ಆ್ಯಪ್‌ಗಳನ್ನು ಬಳಸಿ

ಒಂದೇ ಸಾರಿ ಹಲವು ಆ್ಯಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆ್ಯಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣ. ಹಾಗಾಗಿ, ಒಂದೇ ಸಾರಿ ಹಲವು ಆ್ಯಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗುವುದನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.

ಅಪ್‌ಡೇಟ್‌ ಮಾಡುವುದು ಉತ್ತಮ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ. ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್‌ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಿ.

ಬ್ಯಾಕ್‌ಗ್ರೌಂಡ್‌ ಆ್ಯಪ್ಸ್‌

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆ್ಯಪ್​​ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆ್ಯಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ ಆಗುವ ಆ್ಯಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಜಂಕ್ ಫೈಲ್ ತೆಗೆಯಿರಿ

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಂಕ್ ಫೈಲ್‌ಗಳು ಇದ್ದರೆ ಸ್ಮಾರ್ಟ್‌ಪೋನಿನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ, ನಿಮ್ಮ ಫೋನಿನಲ್ಲಿರುವ ಕಡತಗಳನ್ನು ಆಗಾಗ್ಗೆ ಆಯಂಟಿ ವೈರಸ್ ಆ್ಯಪ್ ಮೂಲಕ ಸ್ವಚ್ಛಗೊಳಿಸಿ. ಸೆಟ್ಟಿಂಗ್ಸ್ ತೆರೆದು ಅಲ್ಲಿ ಕಾಣಿಸುವ ಕ್ಯಾಚೆಯನ್ನು ವಾರಕ್ಕೆ ಒಮ್ಮೆಯಾದರೂ ಕ್ಲೀನ್ ಮಾಡುವುದನ್ನು ಮರೆಯದೇ ಇದ್ದರೆ ಫೋನ್ ವೇಗ ಹೆಚ್ಚುತ್ತದೆ.

ಡೇಟಾ ಸೇವರ್ ಮೋಡ್‌

ಸ್ಮಾರ್ಟ್‌ಫೋನಿನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಹೆಚ್ಚು. ಈ ಬ್ರೌಸರ್‌ನಲ್ಲಿ ಡೇಟಾ ಸೇವರ್ ಆಯ್ಕೆ ಸಿಗುತ್ತದೆ. ಅದನ್ನು ಸಕ್ರಿಯಗೊಳಿಸಿದರೆ ನಿಮ್ಮ ಮೊಬೈಲ್ ಡೇಟಾ ಬಳಕೆ ಕಡಿಮೆಯಾಗಿ ನಿಮ್ಮ ಫೋನಿನ ವೇಗ ಹೆಚ್ಚುತ್ತದೆ. ಕಡಿಮೆ ಡಾಟಾ ಬಳಸಿಕೊಂಡು ಹೆಚ್ಚು ಪೇಜ್‌ಗಳು ವೇಗವಾಗಿ ಲೋಡ್ ಆಗುತ್ತವೆ. ಜೊತೆಗೆ ಒಂದು ಸಿನೆಮಾವನ್ನೂ ಕಡಿಮೆ ಡೇಟಾದಲ್ಲೇ ನೋಡಬಹುದು.

ಆಟೋ ಸಿಂಕ್

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ.

Redmi Smart TV X43: ಧೂಳೆಬ್ಬಿಸುತ್ತಿದೆ ನಂಬರ್ ಒನ್ ಸ್ಮಾರ್ಟ್​ ಟಿವಿ ಬ್ರ್ಯಾಂಡ್​ ಶವೋಮಿಯ ರೆಡ್ಮಿ ಸ್ಮಾರ್ಟ್‌ ಟಿವಿ X43: ಇದರ ಬೆಲೆ ಕೇವಲ …

Oppo Reno 7 5G: ಒಪ್ಪೋ ರೆನೋ 7 ಸೇಲ್ ಆರಂಭ: ಈ ಫೋನ್ ನೀವು ಏಕೆ ಖರೀದಿಸಬೇಕು?, ಇಲ್ಲಿದೆ 3 ಕಾರಣ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್