Oppo Reno 7 series: 2022ರ ಬಹುನಿರೀಕ್ಷಿತ ಒಪ್ಪೋ ರೆನೋ 7 ಸರಣಿ ಬಿಡುಗಡೆ: ಕ್ಯಾಮೆರಾಕ್ಕೆ ಫಿದಾ ಆಗೋದು ಗ್ಯಾರಂಟಿ

| Updated By: Vinay Bhat

Updated on: Feb 04, 2022 | 2:47 PM

ಒಪ್ಪೋ ಭಾರತದಲ್ಲಿ ರೆನೋ ಸರಣಿಯ ಅಡಿಯಲ್ಲಿ ಎರಡು ಹೊಸ ಒಪ್ಪೋ ರೆನೋ 7 ಪ್ರೊ ಮತ್ತು ರೆನೋ 7 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೋ 7 ಪ್ರೊ ಮತ್ತು ಒಪ್ಪೋ ರೆನೋ 7 (Oppo Reno 7 Pro 5G and Oppo Reno 7 5G) ಸ್ಮಾರ್ಟ್‌ಫೋನ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ.

Oppo Reno 7 series: 2022ರ ಬಹುನಿರೀಕ್ಷಿತ ಒಪ್ಪೋ ರೆನೋ 7 ಸರಣಿ ಬಿಡುಗಡೆ: ಕ್ಯಾಮೆರಾಕ್ಕೆ ಫಿದಾ ಆಗೋದು ಗ್ಯಾರಂಟಿ
Oppo Reno 7 series
Follow us on

ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗೂ (Smartphone) ಸೈ ಮಿಡ್ ರೇಂಜ್ ಮೊಬೈಲ್​ಗೂ ರೆಡಿ ಎಂಬಂತೆ ಆಕರ್ಷಕ ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ಒಪ್ಪೋ (Oppo) ಸಂಸ್ಥೆಗೆ ರೆನೋ ಸರಣಿಯ ಫೋನ್‌ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಇದೀಗ ಒಪ್ಪೋ ಭಾರತದಲ್ಲಿ ರೆನೋ ಸರಣಿಯ ಅಡಿಯಲ್ಲಿ ಎರಡು ಹೊಸ ಒಪ್ಪೋ ರೆನೋ 7 ಪ್ರೊ ಮತ್ತು ರೆನೋ 7 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೋ 7 ಪ್ರೊ ಮತ್ತು ಒಪ್ಪೋ ರೆನೋ 7 (Oppo Reno 7 Pro 5G and Oppo Reno 7 5G) ಸ್ಮಾರ್ಟ್‌ಫೋನ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. ರೆನೋ 7ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದೆ. ಒಪ್ಪೋ ರೆನೋ 7 ಮೀಡಿಯಾಟೆಕ್‌ ಡೈಮೆನ್ಸಿಟಿ 900SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಒಪ್ಪೋ ರೆನೋ 7 ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 180Hz ಟಚ್‌ ರೆಸ್ಪಾನ್ಸ್‌ ರೇಟ್‌ ಹಾಗೂ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ RAM ಸಾಮರ್ಥ್ಯವನ್ನು ನೀವು ಹೆಚ್ಚು ಅಗತ್ಯವಿರುವಾಗ ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್​ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್‌-ಆಂಗಲ್‌ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮರಾ ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 65W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಒಪ್ಪೋ ರೆನೋ 7ಪ್ರೊ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 1 ಆಧಾರಿತ ಕಲರ್‌ ಒಎಸ್‌ 12ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM + 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ imx709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು 39,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಬರುತ್ತದೆ. ಒಪ್ಪೋ ರೆನೋ 7 ಸ್ಮಾರ್ಟ್‌ಫೋನ್‌ 28,999ರೂ. ಬೆಲೆಯನ್ನು ಹೊಂದಿದೆ. ಇದು ಫ್ಲಿಪ್‌ಕಾರ್ಟ್, ಒಪ್ಪೋ ಆನ್‌ಲೈನ್ ​​ಸ್ಟೋರ್, ಮತ್ತು ರಿಟೇಲ್‌ ಸ್ಟೋರ್‌ ನಲ್ಲಿ ಫೆಬ್ರವರಿ 17ರಿಂದ ಖರೀದಿಗೆ ಲಭ್ಯವಾಗಲಿದೆ.

Moto G Stylus 2022: ಭಯಂಕರ ಸ್ಟೈಲಿಶ್ ಆಗಿದೆ ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌: ಬೆಲೆ ಎಷ್ಟು?

Power Bank: ಇಲ್ಲಿದೆ ನೋಡಿ 27,000,000mAh ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?