
ಬೆಂಗಳೂರು (ಜು. 17): ಪರ್ಪ್ಲೆಕ್ಸಿಟಿ AI (Perplexity AI) ಕಳೆದ ವಾರ ಕಾಮೆಟ್ ಅನ್ನು ಪರಿಚಯಿಸಿತು, ಇದು ಕೃತಕ ಬುದ್ಧಿಮತ್ತೆ-ಚಾಲಿತ ನಮಗೆ ಬೇಕಾದ ಮಾಹಿತಿಯನ್ನು ನೀಡುವ ಹೊಸ ವೆಬ್ ಬ್ರೌಸರ್ ಆಗಿದ್ದು, ಸಾಂಪ್ರದಾಯಿಕ ಬ್ರೌಸಿಂಗ್ ಅನ್ನು ಏಜೆಂಟ್ AI ನೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ. ಒಂದೇ ಸರಳ ಇಂಟರ್ಫೇಸ್‌ನಲ್ಲಿ ಮತ್ತು ಕಡಿಮೆ ಟ್ಯಾಬ್‌ಗಳೊಂದಿಗೆ, ಕಾಮೆಟ್ ಬಳಕೆದಾರರಿಗೆ ಸರ್ಚ್ ಮಾಡಲು, ಪ್ರಶ್ನಿಸಲು, ತಮ್ಮ ಕೆಲಸವನ್ನು ನಿರ್ವಹಿಸಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ, ಇದು ಬಳಕೆದಾರರ ಪ್ರಶ್ನೆಗಳನ್ನು ಹೆಚ್ಚು ಆಳವಾಗಿ ಅವಲೋಕನ ಮಾಡಿ ಮಾಹಿತಿಯನ್ನು ನೀಡುತ್ತದೆ.
ಇಂತಹ ಪರ್ಪ್ಲೆಕ್ಸಿಟಿ ಎಐ ಈಗ ಪ್ರಸಿದ್ಧ ಟೆಲಿಕಾಂ ಕಂಪನಿ ಏರ್ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದು ಬಳಕೆದಾರರಿಗೆ ಪರ್ಪ್ಲೆಕ್ಸಿಟಿ ಪ್ರೊನ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಬಳಕೆದಾರರು ಒಂದು ವರ್ಷದವರೆಗೆ ಪರ್ಪ್ಲೆಕ್ಸಿಟಿ ಪ್ರೊ ಅನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಪರ್ಪ್ಲೆಕ್ಸಿಟಿ ಪ್ರೊ ಅಡಿಯಲ್ಲಿ, GPT-4 ಮತ್ತು ಕ್ಲೌಡ್‌ನಂತಹ ಅನೇಕ ಮುಂದುವರಿದ AI ಭಾಷಾ ಮಾದರಿಗಳಿಗೆ ಪ್ರವೇಶ ಲಭ್ಯವಿದೆ.
ಏರ್‌ಟೆಲ್ ಬಳಕೆದಾರರು ಈಗ ಇವೆಲ್ಲವನ್ನೂ ಉಚಿತವಾಗಿ ಪಡೆಯಬಹುದು. ಇದಕ್ಕಾಗಿ, ಅವರು ಯಾವುದೇ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕಾಗಿಲ್ಲ. ಏರ್‌ಟೆಲ್‌ನ ಅಪ್ಲಿಕೇಶನ್‌ಗೆ ಹೋಗಿ ಈ ಕೊಡುಗೆಯನ್ನು ಪಡೆಯಬಹುದು. ಪರ್ಪ್ಲೆಕ್ಸಿಟಿ ಪ್ರೊನ ಬೆಲೆ 17 ಸಾವಿರ ರೂ. ಅಂದರೆ ಏರ್ಟೆಲ್ ಬಳಕೆದಾರರು 17 ಸಾವಿರ ರೂ.ಗಳ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಏರ್‌ಟೆಲ್ ಪೋಸ್ಟ್‌ಪೇಯ್ಡ್ ಬಳಕೆದಾರರಿಗಾಗಿ ಈ ಕೊಡುಗೆಯನ್ನು ನೋಡಲಾಗಿದೆ.
Tech Utility: ನಿಮ್ಮ ಊರಲ್ಲಿ ಹಾಳಾದ ರಸ್ತೆ-ಗುಂಡಿ ಕಂಡರೆ ತಕ್ಷಣ ಈ ಸರ್ಕಾರಿ ಆ್ಯಪ್ ಮೂಲಕ ದೂರು ನೀಡಿ
ನೀವು ಏರ್‌ಟೆಲ್ ಪೋಸ್ಟ್‌ಪೇಯ್ಡ್ ಬಳಕೆದಾರರಾಗಿದ್ದರೆ, ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನೀವು ಇದರ ಬ್ಯಾನರ್ ಅನ್ನು ನೋಡಲು ಸಾಧ್ಯವಾಗುತ್ತದೆ. ಪ್ರಿಪೇಯ್ಡ್ ಬಳಕೆದಾರರಿಗೆ, ನಾವು ಏರ್‌ಟೆಲ್‌ನ ಅಪ್ಲಿಕೇಶನ್‌ನಲ್ಲಿ ಈ ಕೊಡುಗೆಯನ್ನು ನೋಡಲಿಲ್ಲ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ಗೆ ಹೋಗುವ ಮೂಲಕ ಇದನ್ನು ಕ್ಲೈಮ್ ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ