Poco C3: ಭಾರತದಲ್ಲಿ ದಾಖಲೆಯ ಮಾರಾಟ ಕಂಡ ಪೋಕೋ ಸಿ3: ಅಂಥದ್ದೇನಿದೆ ಇದರಲ್ಲಿ ಗೊತ್ತೇ?

| Updated By: Vinay Bhat

Updated on: Aug 05, 2021 | 3:02 PM

ಕಳೆದ ಅಕ್ಟೋಬರ್​ನಲ್ಲಿ ಬಿಡುಗಡೆ ಆದ ಪೋಕೋ C3 ಸ್ಮಾರ್ಟ್​ಫೋನ್ ಭಾರತದಲ್ಲಿ ದಾಖಲೆಯ ಮಾರಾಟ ಕಂಡಿದೆ ಎಂದು ಕಂಪನಿ ಹೇಳಿದೆ.

Poco C3: ಭಾರತದಲ್ಲಿ ದಾಖಲೆಯ ಮಾರಾಟ ಕಂಡ ಪೋಕೋ ಸಿ3: ಅಂಥದ್ದೇನಿದೆ ಇದರಲ್ಲಿ ಗೊತ್ತೇ?
Poco C3
Follow us on

ವಿದೇಶಿ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳಿಗೆ ಭಾರತೀಯ ಮಾರುಕಟ್ಟೆ ಒಂದುರೀತಿಯ ಚಿನ್ನವಿದ್ದಂತೆ. ಇಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್​ಫೋನ್​ಗಳು (Smartphone) ಲೆಕ್ಕವಿಲ್ಲದಂತೆ ಮಾರಾಟವಾಗುತ್ತಿದೆ. ಅದರಲ್ಲೂ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳಿರುವ ಫೋನ್ ರಿಲೀಸ್ ಆದರೆ ಎಲ್ಲಿಲ್ಲದ ಬೇಡಿಕೆ ಎನ್ನಬಹುದು. ಇದಕ್ಕಾಗಿಯೆ ಶವೋಮಿ (Xiaomi), ಪೋಕೋ, ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಅನೇಕ ಫಾರಿನ್ ಬ್ರ್ಯಾಂಡ್​ಗಳಿಗೆ ಭಾರತ ನೆಚ್ಚಿನ ತಾಣವಾಗಿದೆ. ಅಂತೆಯೆ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಪೋಕೋ ತನ್ನ ಸಿ ಸರಣಿಯಲ್ಲಿ ಬಿಡುಗಡೆ ಮಾಡಿದ್ದ ಪೋಕೋ ಸಿ3 (Poco C3) ಸ್ಮಾರ್ಟ್​ಫೊನ್ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಕಳೆದ ಅಕ್ಟೋಬರ್​ನಲ್ಲಿ ಬಿಡುಗಡೆ ಆದ ಪೋಕೋ C3 ಸ್ಮಾರ್ಟ್​ಫೋನ್ ಭಾರತದಲ್ಲಿ ದಾಖಲೆಯ ಮಾರಾಟ ಕಂಡಿದೆ ಎಂದು ಕಂಪನಿ ಹೇಳಿದೆ. ಪೋಕೋ ಹೇಳಿರುವ ಪ್ರಕಾರ ಈ ಫೋನ್ ಭಾರತದಲ್ಲಿ ಬರೋಬ್ಬರಿ ಎರಡು ಮಿಲಿಯನ್ ಮಾರಾಟದ ಗಡಿ ದಾಟಿದೆಯಂತೆ. ಅಂದರೆ ಇದು ಲಾಂಚ್ ಆದ ಒಂಬತ್ತು ತಿಂಗಳಲ್ಲಿ ಎರಡು ಮಿಲಿಯನ್ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಹಾಗೆಯೇ ಬಿಡುಗಡೆ ಆದ ಮೂರು ತಿಂಗಳಲ್ಲಿ ಒಂದು ಮಿಲಿಯನ್ ಮಾರಾಟದ ಗಡಿಯನ್ನು ದಾಟಿತ್ತು ಎಂದು ಕಂಪನಿ ತನ್ನ ವರದಿಯಲ್ಲಿ ಹೇಳಿದೆ.

 

ಪೋಕೋ ಸಂಸ್ಥೆ 2018 ರಲ್ಲಿ ಶವೋಮಿಯ ಸಬ್​ ಬ್ರ್ಯಾಂಡ್ ಆಗಿ ಲಾಂಚ್ ಆಯಿತು. ಆದರೆ, 2020 ರಲ್ಲಿ ಶವೋಮಿಯಿಂದ ಹೊರಬಂದು ತನ್ನದೇ ಆದ ಸ್ವತಂತ್ರ ಸಂಸ್ಥೆ ಕಟ್ಟಿಕೊಂಡು ಅತ್ಯುತ್ತಮ ಸ್ಮಾರ್ಟ್​ಫೋನ್​​ಗಳನ್ನು ಬಿಡುಗಡೆ ಮಾಡುತ್ತಿದೆ.

ಪೋಕೋ C3 ಸ್ಮಾರ್ಟ್​ಫೋನ್ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 3GB RAM ಮತ್ತು 32GB ಸ್ಟೋರೇಜ್‌ ವೇರಿಯಂಟ್‌ ದರವು 7,499 ರೂ. ಆಗಿದೆ. ಅಂತೆಯೆ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 8,499 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಮಾರಾಟವಾಗುತ್ತಿದೆ.

ಪೋಕೋ C3 ಸ್ಮಾರ್ಟ್‌ಫೋನ್​ನಲ್ಲಿ ಅಂಥದ್ದೇನಿದೆ ಎಂಬುದನ್ನು ನೋಡುವುದಾದರೆ, ಇದು 720×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಎಲ್‌ಸಿಡಿ ಡಾಟ್ ಡ್ರಾಪ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತದಿಂದ ಕೂಡಿದ್ದು, 269 ppi ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದಿದೆ.

ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ನಿಂದ ಆವೃತ್ತವಾಗಿದೆ. ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಇದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಫೇಸ್ ಅನ್ಲಾಕ್ ಬೆಂಬಲಿಸುವ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಪೋಕೋ ಸಿ3 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದು ಪ್ಲಸ್ ಪಾಯಿಂಟ್. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ v.5, ಹಾಟ್‌ಸ್ಪಾಟ್‌, ವೈಫೈ ಸೇರಿದಂತೆ ಪ್ರಮುಖ ಆಯ್ಕೆಗಳಿಂದ ಕೂಡಿದೆ.

7000mAh ಬ್ಯಾಟರಿ, 64MP ಕ್ಯಾಮೆರಾ: ಸ್ಯಾಮ್​ಸಂಗ್​ನ ಈ ​ಫೊನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಖರೀದಿಸಬಹುದೇ?

Flipkart Big Saving Days Sale: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಈ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 20000 ರೂ. ಡಿಸ್ಕೌಂಟ್

(Poco C3 has crossed 2 Million sales in India what the special in it price specs)