AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Saving Days Sale: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಈ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 20000 ರೂ. ಡಿಸ್ಕೌಂಟ್

ಐದು ದಿನಗಳ ಕಾಲ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ ಡಿಸ್ಕೌಂಟ್ ಜೊತೆಗೆ ಅನೇಕ ಆಫರ್​ಗಳನ್ನೂ ನೀಡಲಾಗಿದೆ. ಪ್ರಮುಖವಾಗಿ ಮೋಟೋರೊಲಾ ಕಂಪೆನಿಯ ರೇಜರ್ ಫೋಲ್ಡೆಬಲ್‌ ಫೋನ್‌ ಮೇಲೆ 20000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ.

Flipkart Big Saving Days Sale: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಈ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 20000 ರೂ. ಡಿಸ್ಕೌಂಟ್
Moto Razr smartphone
TV9 Web
| Updated By: Vinay Bhat|

Updated on: Aug 05, 2021 | 1:01 PM

Share

ಪ್ರಸಿದ್ಧ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ (Flipkart) ಗ್ರಾಹಕರಿಗೆ ಬಂಪರ್ ಡಿಸ್ಕೌಂಟ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಒಂದರ ಹಿಂದೆ ಒಂದರಂತೆ ಮೇಳವನ್ನು ಆಯೋಜಿಸುತ್ತಿರುವ ಫ್ಲಿಪ್​ಕಾರ್ಟ್ ಸದ್ಯ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಅನ್ನು ಆರಂಭಿಸಿದೆ. ಇದು ಆಗಸ್ಟ್ 5 ಗುರುವಾರದಿಂದ ಶುರುವಾಗಿದ್ದು ಆಗಸ್ಟ್ 9ರ ವರೆಗೂ ನಡೆಯಲಿದೆ. ಈ ಮೇಳದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರಿಸ್‌ಗಳ ಮೇಲೆ ಭರ್ಜರಿ ಶೇ. 80 ರಷ್ಟು ರಿಯಾಯಿತಿ ನೀಡಲಾಗಿದೆ. ಜೊತೆಗೆ ಸ್ಮಾರ್ಟ್​ ಟಿವಿಗಳು ಕೂಡ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ.

ಐದು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಡಿಸ್ಕೌಂಟ್ ಜೊತೆಗೆ ಅನೇಕ ಆಫರ್​ಗಳನ್ನೂ ನೀಡಲಾಗಿದೆ. ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಮೋಟೋರೊಲಾ ಕಂಪೆನಿಯ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 20000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ.

ಮೋಟೋರೊಲಾ ರೇಜರ್ ಫೋನಿನ ಮೂಲಬೆಲೆ 74,999 ರೂ. ಆಗಿದೆ. ಆದರೆ, ಸದ್ಯ ಈ ಸ್ಮಾರ್ಟ್​ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ ಒಟ್ಟು 20,000ರೂ. ಗಳ ಡಿಸ್ಕೌಂಟ್‌ ಪಡೆದು ಕೇವಲ 54,999ರೂ. ಗಳ ಆಫರ್​ನಲ್ಲಿ ಸಿಗುತ್ತಿದೆ. ಇದರ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ…

ಮೋಟೋರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ 876 x 2142 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ OLED ಹೆಚ್‌ಡಿ ಪ್ಲಸ್‌ ಫ್ಲೆಕ್ಸಿಬಲ್ ಸ್ಕ್ರೀನ್‌ ಹೊಂದಿದೆ. ಡಿಸ್‌ಪ್ಲೇ ಅನುಪಾತವು 21:9 ಆಗಿದ್ದು, ಮಡಚುವ ರಚನೆಯಿದೆ. ಹಾಗೆಯೇ ನೋಟಿಫಿಕೇಶನಗಾಗಿ 2.7 ಇಂಚಿನ ಕಿರು ಡಿಸ್‌ಪ್ಲೇ ಹೊಂದಿದ್ದು, 600 x 800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಬಾಹ್ಯ ನೋಟ್ ಹೆಚ್ಚು ಆಕರ್ಷಕವಾಗಿದೆ.

ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಇದೆ. ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಫೋನಿನ ಮಲ್ಟಿಟಾಸ್ಕ್ ಕೆಲಸಗಳಿಗೆ ಪ್ರೊಸೆಸರ್ ಕಾರ್ಯವೈಖರಿ ಸಪೋರ್ಟ್‌ ನೀಡಲಿದೆ.

ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಆ ಕ್ಯಾಮೆರಾವು f/1.7 ಅಪರ್ಚರ್ ನೊಂದಿಗೆ 16 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ನೈಟ್‌ ಮೋಡ್‌ ಆಯ್ಕೆ ಸೇರಿದಂತೆ ಅಗತ್ಯ ಕ್ಯಾಮೆರಾ ಫೀಚರ್ಸ್‌ಗಳನ್ನು ಒದಗಿಸಲಾಗಿದೆ.

ಇನ್ನೂ ಈ ಸ್ಮಾರ್ಟ್‌ಫೋನ್‌ 2510mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.0, ವೈ-ಫೈ 802.11, 4G LTE, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

Smartphone Tips 2: ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಉಳಿತಾಯ ಮತ್ತು ವೇಗ ಹೆಚ್ಚಿಸುವುದು ಹೇಗೆ? ಇಲ್ಲಿವೆ ಕೆಲವು ಸಲಹೆ

Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಖುಷಿ ವಿಚಾರ; ಇನ್ಮುಂದೆ ಸ್ಮಾರ್ಟ್ ಟಿವಿಯಲ್ಲೂ ಸಿಗಲಿದೆ ವಿಡಿಯೋ ಕಾಲ್​ ಸೌಲಭ್ಯ

(Flipkart Big Saving Days Sale Massive price cuts on foldable Moto Razr smartphone during Flipkart sale)