POCO C55: ಕೇವಲ 8,999 ರೂ.: ಕಳೆದ ವಾರ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್

|

Updated on: Mar 04, 2023 | 7:05 PM

ಕಳೆದ ವಾರವಷ್ಟೆ ಪೋಕೋ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಸಿ55 (POCO C55) ಫೋನನ್ನು ರಿಲೀಸ್ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್​ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀಗಿರುವಾಹ ಬಿಡುಗಡೆ ಆದ ಒಂದೇ ವಾರಕ್ಕೆ ಈ ಫೋನ್ ಆಕರ್ಷಕ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ.

POCO C55: ಕೇವಲ 8,999 ರೂ.: ಕಳೆದ ವಾರ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
poco c55
Follow us on

ಭಾರತದಲ್ಲಿ ಬಜೆಟ್ ಬೆಲೆಯ ಫೋನ್​ಗಳ (Budget Phone) ಬಿಡುಗಡೆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಯಾಮ್​ಸಂಗ್, ರಿಯಲ್ ಮಿ, ಶವೋಮಿ (Xiaomi) ಸಂಸ್ಥೆ ಈ ಸಾಲಿನಲ್ಲಿ ಮುಂದಿದೆ. ಇತ್ತೀಚೆಗಷ್ಟೆ ಪೋಕೋ ಸಂಸ್ಥೆ ಕೂಡ ಭಾರತೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಆಕರ್ಷಕ ಮೊಬೈಲ್ ಅನ್ನು ಅನಾವರಣ ಮಾಡಿತ್ತು. ಕಳೆದ ವಾರವಷ್ಟೆ ಪೋಕೋ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಸಿ55 (POCO C55) ಫೋನನ್ನು ರಿಲೀಸ್ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್​ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀಗಿರುವಾಹ ಬಿಡುಗಡೆ ಆದ ಒಂದೇ ವಾರಕ್ಕೆ ಈ ಫೋನ್ ಆಕರ್ಷಕ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ.

ಬೆಲೆ ಎಷ್ಟು-ಏನು ಆಫರ್?:

ಪೋಕೋ C55 ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದರ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 11,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM + 128GB ಸ್ಟೋರೇಜ್ ಆಯ್ಕೆಗೆ 13,999 ರೂ. ಇದೆ. ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಫೋನ್ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಫೋನ್ ಮೇಲೆ ಶೇ. 25 ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, 8,999 ರೂ. ಮತ್ತು 10,999 ರೂ. ಗೆ ಪೋಕೋ C55 ಸ್ಮಾರ್ಟ್​ಫೋನ್ ಖರೀದಿಸಬಹುದು. 8,450 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ. ಈ ಫೋನ್ ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಸಿಗುತ್ತಿದೆ.

ಇದನ್ನೂ ಓದಿ
Amazon, Flipkart Holi sale 2023: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೋಳಿ ಸೇಲ್: ಅನೇಕ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್
OnePlus Nord CE 3: ಅದ್ಭುತ ಕ್ಯಾಮೆರಾ, ಭರ್ಜರಿ ಫೀಚರ್ಸ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಒನ್​ಪ್ಲಸ್ ನಾರ್ಡ್ CE 3
Tech Tips: ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ
Tech Tips: ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಹಣ ಗಳಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ

Apple: ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ: ಇನ್ನುಂದೆ ರಾಜ್ಯದಲ್ಲೇ ತಯಾರಾಗುತ್ತೆ ಐಫೋನ್​ಗಳು

ಏನು ಫೀಚರ್ಸ್?:

ಈ ಸ್ಮಾರ್ಟ್​ಫೋನ್ 720*1650 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.71 ಇಂಚಿನ ಹೆಚ್‌ಡಿ ಪ್ಲಸ್‌ ರೆಸಲೂಷನ್​ನ ಎಲ್​ಸಿಡಿ ಡಿಸ್‌ ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಫೋನಿನ ಡಿಸೈನ್ ಅದ್ಭುತವಾಗಿದ್ದು ಗ್ರಾಹಕರು ಫಿದಾ ಆಗುವುದು ಗ್ಯಾರೆಂಟಿ. ಅಂತೆಯೆ ಮೀಡಿಯಾಟೆಕ್ ಹೀಲಿಯೊ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ 12 ನ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಪೋಕೋ C55 ಸ್ಮಾರ್ಟ್​ಫೋನ್ ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ f/1.8 ಅಪಾರ್ಚರ್ ಲೆನ್ಸ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾ ಪೊರ್ಟ್ರೈಟ್ ಮೋಡ್, ನೈಡ್ ಮೋಡ್, ಹೆಚ್​ಡಿಆರ್ ಸಪೋರ್ಟ್ ಪಡೆದಿದೆ.

ಈ ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿರುವುದು ಅನುಮಾನ. 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು ಫಿಂಗರ್​ಪ್ರಿಂಟ್ ಸ್ಕ್ಯಾನರ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ