Tech Tips: ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಹಣ ಗಳಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ

Online Job: ಮನೆಯಲ್ಲೇ ಕುಳಿತು ಹಣ ಸಂಪಾದಿಸಲು ಇಂದು ಒಂದಲ್ಲ ಎರಡಲ್ಲ ಅನೇಕ ಉತ್ತಮ ಮಾರ್ಗಗಳಿವೆ. ಹಾಗಾದರೆ ಆನ್​ಲೈನ್​​ನಲ್ಲಿ ಸುಲಭವಾಗಿ ಹಣ ಮಾಡಲು ಯಾವುದೆಲ್ಲ ಮಾರ್ಗಗಳಿವೆ ಎಂಬುದನ್ನು ನೋಡೋಣ.

Tech Tips: ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಹಣ ಗಳಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ
ಪ್ರಾತಿನಿಧಿಕ ಚಿತ್ರ
Follow us
Vinay Bhat
|

Updated on: Mar 03, 2023 | 7:45 PM

ಇಂದಿನ ಡಿಜಿಟಲ್ (Digital) ಯುಗದಲ್ಲಿ ದುಡ್ಡಿಗಾಗಿ ಅಥವಾ ಕೆಲಸಕ್ಕಾಗಿ ಊರೂರು ಅಲೆಯಬೇಕಿಲ್ಲ. ಯಾರದ್ದೋ ಕೈ-ಕಾಲು ಹಿಡಿಯಬೇಕಿಲ್ಲ. ಯಾಕೆಂದರೆ ಮನೆಯಲ್ಲೇ ಕುಳಿತು ಹಣ (Money) ಸಂಪಾದಿಸಬಹುದು. ಇದಕ್ಕೆ ಒಂದಲ್ಲ ಎರಡಲ್ಲ ಅನೇಕ ಉತ್ತಮ ಮಾರ್ಗಗಳಿವೆ. ಮುಖ್ಯವಾಗಿ ಯುವಕರು ಶೀಘ್ರವಾಗಿ ಹಣ ಗಳಿಸುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತಾರೆ. ಇದಕ್ಕೆ ಇಂಟರ್ನೆಟ್ (Intermet) ಎಂಬ ಮಾಧ್ಯಮವು ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ. ಹಾಗಾದರೆ ಮನೆಯಲ್ಲೇ ಕುಳಿತು ಆನ್​ಲೈನ್​​ನಲ್ಲಿ ಸುಲಭವಾಗಿ ಹಣ ಮಾಡಲು ಯಾವುದೆಲ್ಲ ಮಾರ್ಗಗಳಿವೆ ಎಂಬುದನ್ನು ನೋಡೋಣ.

ಇಂದು ಫೋಟೋಗ್ರಫಿ ಎಂಬುದು ದೊಡ್ಡ ಮಟ್ಟದಲ್ಲಿ ಕಾಣಿಸಿಗೊಳ್ಳುತ್ತಿದೆ. ಕೇವಲ ಡಿಎಸ್​ಎಲ್​ಆರ್ ಕ್ಯಾಮೆರಾದಿಂದ ಮಾತ್ರವಲ್ಲ ಈಗೀಗ ಆಕರ್ಷಕ ಕ್ಯಾಮೆರಾಗಳ ಸ್ಮಾರ್ಟ್​ಫೋನ್ ಬರುತ್ತಿರುವುದರಿಂದ ಮೊಬೈಲ್ ಫೋಟೋಗ್ರಫಿ ಕೂಡ ಜನಪ್ರಿಯತೆ ಪಡೆದುಕೊಂಡಿದೆ. ನಿಮ್ಮಲ್ಲಿ ಛಾಯಾಗ್ರಹಣದ ಕೌಶಲ್ಯವಿದ್ದರೆ ಸುಲಭವಾಗಿ ಮನೆಯಿಂದಲೇ ಹಣ ಮಾಡಬಹುದು. ನೀವು ಪ್ರಕೃತಿ, ಪ್ರಾಣಿಗಳು ಮತ್ತು ನಿಮ್ಮ ಸುತ್ತಲಿನ ವಸ್ತುಗಳ ಸೃಜನಶೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಇದಕ್ಕಾಗಿ, Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ತಾಣಗಳಲ್ಲಿ ಫೋಟೋಗಳಿಗೆ ಪರವಾನಗಿ ನೀಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.

ಆನ್​ಲೈನ್ ಮೂಲಕ ಟ್ಯೂಶನ್ ನೀಡುವವರಿಗೆ ಈಗ ಹೆಚ್ಚಿನ ಬೇಡಿಕೆ ಇದೆ. ಇದು ಕೊರೊನಾ ಬಂದ ಮೇಲಂತು ಹೆಚ್ಚಾಗಿದೆ. ಒಂದು ವೇಳೆ ನಿಮ್ಮಲ್ಲಿ ಕಲಿಸುವ ಪ್ರತಿಭೆಯಿದ್ದು, ಇನ್ನೊಬ್ಬರಿಗೆ ನೆರವಾಗಬಯಸಿದರೆ ಇ-ಶಿಕ್ಷಣ ನಿಮಗೆ ಉತ್ತಮ ಸಂಭಾವನೆಯನ್ನು ತಂದು ಕೊಡಬಲ್ಲುದು. ಇ-ಟ್ಯೂಶನ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬೈಜುಸ್ (BYJU’S) ಸಂಸ್ಥೆ ಬಗ್ಗೆ ನೀವು ಕೇಳಿರುತ್ತಿರಿ. ಇದಕ್ಕಾಗಿ ನಿಮಗೆ ಒಂದು ವಿಷಯದಲ್ಲಿ ಪರಿಣಿತಿ ಹಾಗೂ ವಾರದಲ್ಲಿ ಕೆಲವು ಗಂಟೆಗಳಾದರೂ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ ಅಷ್ಟೇ. ಟ್ಯೂಟರ್ ವೀಸಾ, ಇ-ಟ್ಯೂಟರ್, ಸ್ಮಾರ್ಟ್ ಥಿಂಕಿಂಗ್, ಟ್ಯೂಟರ್. ಕಾಂ ಮೊದಲಾದ ತಾಣಗಳಲ್ಲಿ ನೀವು ನಿಮ್ಮ ಪರಿಣಿತಿಯನ್ನು ವಿವರಿಸಿ ದಾಖಲಿಸಿಕೊಳ್ಳಬೇಕು.

ಇದನ್ನೂ ಓದಿ
Image
Apple: ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ: ಇನ್ನುಂದೆ ರಾಜ್ಯದಲ್ಲೇ ತಯಾರಾಗುತ್ತೆ ಐಫೋನ್​ಗಳು
Image
Huawei Nova 10 SE: 108MP ಕ್ಯಾಮೆರಾ ಫೋನ್ ಸಾಲಿಗೆ ಮತ್ತೊಂದು ಸೇರ್ಪಡೆ: ಯಾವ ಸ್ಮಾರ್ಟ್​ಫೋನ್?, ಬೆಲೆ ಎಷ್ಟು?
Image
Moto G73 5G: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ ಮೋಟೋ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಇದರ ಫೀಚರ್ಸ್ ನೋಡಿ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಸೂಪರ್ ಫಾಸ್ಟ್ ಆಗ್ಬೇಕಾ?: ಮೊದಲು ಈ ಕೆಲಸ ಮಾಡಿ

Realme GT 3: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿಶ್ವದ ಅತಿ ವೇಗದ ಚಾರ್ಜಿಂಗ್ ಫೋನ್ ರಿಯಲ್‌ ಮಿ GT 3: ಬೆಲೆ ಎಷ್ಟು ಗೊತ್ತೇ?

ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಕ್ರಿಯೇಟರ್ ನವರಿಗೆ ಸಾಕಷ್ಟು ಬೇಡಿಕೆ ಇದೆ. ಜನರು ಮನೆಯಲ್ಲಿ ಕುಳಿತು ಬರಹಗಾರರಾಗುವ ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಇದನ್ನು ಫ್ರೀ ಲಾನ್ಸ್ ಮೂಲಕವೂ ಮಾಡಬಹುದು. ಭಾಷೆಯ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದು, ಸೃಜನಶೀಲತೆಯಿದ್ದರೆ ಈ ಕೆಲಸವನ್ನು ಆರಂಭಿಸಬಹುದು. ಪ್ರತಿ ಪದಕ್ಕೆ ಇಂದು ರೂಪಾಯಿಯಿಂದ ಮೂರು ರೂ. ವರೆಗೆ ಸಂಪಾದಿಸಬಹುದು. ಸ್ಪೆಷಲ್ ಕಮಟೆಂಟ್​ಗಳಿಗೆ ಪ್ರತಿ ಪದಕ್ಕೆ ರೂ 8-10 ಗಳಿಸಬಹುದು. ಹಣ ಗಳಿಸಲು ಇರುವ ಸುಲಭ ಮಾರ್ಗದಲ್ಲಿ ಇದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

ಎಲ್ಲರಿಗೂ ತಿಳಿದಿರುವಂತೆ ನಾವೆಲ್ಲರೂ ಟೈಮ್​ ಪಾಸ್​ ಮಾಡಲು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್ ಉಪಯೋಗ ಮಾಡುತ್ತೇವೆ. ಆದರೆ, ಈ ಇನ್​ಸ್ಟಾಗ್ರಾಮ್​ನಿಂದ ಸಂಪಾದನೆ ಕೂಡ ಮಾಡಬಹುದು ಎಂದರೆ ನಂಬಲೇಬೇಕು. ಇನ್​ಸ್ಟಾಗ್ರಾಮ್​ನಲ್ಲಿ ಅಧಿಕ ಫಾಲೋವರ್​​ಗಳನ್ನು ಹೊಂದಿ, ಇನ್‌ಸ್ಟಾದಲ್ಲೇ ಜನಪ್ರಿಯತೆ ಗಳಿಸಿರುವವರು ಒಂದು ಪೋಸ್ಟ್‌ಗೆ 5 -15 ಸಾವಿರ ಹಣವನ್ನು ಪಡೆಯಬಹುದು. ಇನ್‌ಸ್ಟಾಗ್ರಾಂನಲ್ಲೇ ಆದಾಯ ಪಡೆಯುವವರು ಸ್ಪಾನ್ಸರ್‌ ಪೋಸ್ಟ್ ಮೂಲಕವು ಹಣ ಗಳಿಸುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಿಂದ ಕೋಟಿ ಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ.

ಪ್ರಸಿದ್ಧ ಇ ಕಾಮರ್ಸ್ ತಾಣಗಳ ಮೂಲಕ ಕೂಡ ನೀವು ಮನೆಯಲ್ಲೇ ಕುಳಿತು ಹಣ ಎನಿಸಬಹುದು. ಅತ್ಯಂತ ವಿಶ್ವಾಸಾರ್ಹ ಆನ್‌ಲೈನ್ ಗಳಿಕೆಯ ಸೈಟ್‌ಗಳಲ್ಲಿ ಅಮೆಜಾನ್ ಅಗ್ರಸ್ಥಾನದಲ್ಲಿದೆ. ಮಾರಾಟ ಮಾಡಲು ಮತ್ತು ಖರೀದಿಗೆ ವಸ್ತುಗಳನ್ನು ಆಯ್ಕೆ ಮಾಡಲು ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುತ್ತಾರೆ. ಪ್ರತಿ ತಿಂಗಳು ಇಲ್ಲಿ ಲಕ್ಷಾಂತರ ಖರೀದಿದಾರರು ನಿಮ್ಮ ಪ್ರಾಡಕ್ಟ್​ ಅನ್ನು ವೀಕ್ಷಿಸಬಹುದು. ಇಲ್ಲಿ ನಿಮ್ಮ ಉತ್ಪನ್ನ ಹೆಚ್ಚು ಮಾರಾಟವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಒಳ್ಳೆಯ ಪ್ರಮಾಣದ ಕಮಿಷನ್ ಕೂಡ ಪಡೆಯಬಹುದು.

ಇನ್ನು ಆನ್​ಲೈನ್​ನಲ್ಲಿ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ರಚಸಿ ಹಣ ಸಂಪಾದನೆ ಮಾಡಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲಿ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದ ಬಗ್ಗೆ ಬರೆಯುತ್ತಿರೋ ಅದನ್ನು ಓದುವ ಜನರು ಬೇಕಷ್ಟೆ. ಹೀಗಾಗಿ ಜನರಿಗೆ ಯಾವ ವಿಷಯದ ಕುರಿತು ಹೆಚ್ಚು ಆಸಕ್ತಿ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ ನಿಮ್ಮನ್ನು ಆರಿಸಿಕೊಂಡು ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್