ಪೋಕೋ M6 ಪ್ರೊ 5G ಭರ್ಜರಿ ಮಾರಾಟ: ದಿಢೀರ್ ಆಗಿ ಹೊಸ ರೂಪಾಂತರ ಬಿಡುಗಡೆ

|

Updated on: Sep 17, 2023 | 10:04 AM

POCO M6 Pro 4GB+128GB variant has been launched: ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್​ನ ನೂತನ ರೂಪಾಂತರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 11,999 ರೂ. ನಿಗದಿ ಮಾಡಲಾಗಿದೆ. ಈ ಹಿಂದೆ 4GB RAM + 64GB ಮತ್ತು 6GB RAM + 128GB ರೂಪಾಂತರಗಳು ಬಿಡುಗಡೆ ಆಗಿತ್ತು.

ಪೋಕೋ M6 ಪ್ರೊ 5G ಭರ್ಜರಿ ಮಾರಾಟ: ದಿಢೀರ್ ಆಗಿ ಹೊಸ ರೂಪಾಂತರ ಬಿಡುಗಡೆ
poco m6 pro 5g
Follow us on

ಪೋಕೋ ಸಂಸ್ಥೆಯ ಸ್ಮಾರ್ಟ್​ಫೋನ್​​ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಬಜೆಟ್ ಬೆಲೆಗೆ ಆಕರ್ಷಕ ಫೀಚರ್​ಗಳ ಫೋನನ್ನು ಪರಿಚಯಿಸುತ್ತಿರುವ ಪೋಕೋ, ಕಳೆದ ತಿಂಗಳು ದೇಶದಲ್ಲಿ ಹೊಸ ಪೋಕೋ M6 ಪ್ರೊ (Poco M6 Pro 5G) ಎಂಬ 5ಜಿ ಫೋನನ್ನು ಅನಾವರಣ ಮಾಡಿತ್ತು. ಇದು ರೆಡ್ಮಿ ನೋಟ್ 12R ನ ಮರುಬ್ರಾಂಡ್ ಆಗಿದೆ. ಬಿಡುಗಡೆ ಆದ ಸಮಯದಲ್ಲಿ ಈ ಸ್ಮಾರ್ಟ್​ಫೋನ್ ಕೇವಲ ಎರಡು RAM/ಸ್ಟೋರೇಜ್ ಮಾದರಿಗಳಲ್ಲಿ ಮಾತ್ರ ನೀಡಲಾಗಿತ್ತು. ಇದೀಗ ಈ ಫೋನಿಗೆ ಭರ್ಜರಿ ಬೇಡಿಕೆ ಇರುವ ಕಾರಣ 4GB + 128GB ರೂಪಾಂತರವನ್ನು ಪರಿಚಯಿಸಿದೆ.

ಭಾರತದಲ್ಲಿ ಪೋಕೋ M6 ಪ್ರೊ 5G ಬೆಲೆ, ಮಾರಾಟ:

ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್​ನ ನೂತನ ರೂಪಾಂತರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 11,999 ರೂ. ನಿಗದಿ ಮಾಡಲಾಗಿದೆ. ಈ ಹಿಂದೆ 4GB RAM + 64GB ಮತ್ತು 6GB RAM + 128GB ರೂಪಾಂತರಗಳು ಬಿಡುಗಡೆ ಆಗಿತ್ತು. ಇವುಗಳ ಬೆಲೆ ಕ್ರಮವಾಗಿ 10,999 ಮತ್ತು 12,999 ರೂ. ಆಗಿದೆ. ಹೊಸ ರೂಪಾಂತರವು ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಈ ಫೋನ್ ಅನ್ನು ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಪೋಕೋ M6 ಪ್ರೊ 5G ಫೀಚರ್ಸ್:

ಡಿಸ್‌ಪ್ಲೇ: ಪೋಕೋ M6 ಪ್ರೊ 5G ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ
ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಸುವ ಆ್ಯಪ್‌ಗಳು ಯಾವುವು ಗೊತ್ತೇ?
ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತೇ?
ಐಫೋನ್ 15 ಸರಣಿ ಪ್ರೀ ಬುಕಿಂಗ್ ಆರಂಭ: ಆಫರ್​ಗಳ ಸುರಿಮಳೆ ಗೈದ ಆ್ಯಪಲ್
ಬರುತ್ತಿದೆ ಭಾರತದ ​ಫೋನ್: ರೋಚಕತೆ ಸೃಷ್ಟಿಸಿದ ಲಾವಾ ಬ್ಲೇಜ್ ಪ್ರೊ 5G

BMW ಡಿಸೈನ್‌ವರ್ಕ್ಸ್‌ನೊಂದಿಗೆ ಬಿಡುಗಡೆ ಆಯಿತು ಹೊಸ ಇನ್ಫಿನಿಕ್ಸ್ ನೋಟ್ 30 VIP ರೇಸಿಂಗ್ ಆವೃತ್ತಿ

ಪ್ರೊಸೆಸರ್: ಈ ಫೋನ್ Adreno GPU ಜೊತೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

RAM ಮತ್ತು ಸಂಗ್ರಹಣೆ: 4GB + 64GB, 4GB RAM + 128GB ಮತ್ತು 6GB + 128GB. 1TB ವರೆಗೆ ಸಂಗ್ರಹಣೆ ವಿಸ್ತರಣೆಗಾಗಿ ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದೆ.

ಕ್ಯಾಮೆರಾಗಳು: ಪೋಕೋ M6 ಪ್ರೊ 5G ಫೋನ್ 50MP ಪ್ರಾಥಮಿಕ ಸಂವೇದಕವನ್ನು ಮತ್ತು ಹಿಂಭಾಗದಲ್ಲಿ 2MP ಡೆಪ್ತ್ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಈ ಸ್ಮಾರ್ಟ್​ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ MIUI 14 ಕಸ್ಟಮ್ ಸ್ಕಿನ್ ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP53 ರೇಟಿಂಗ್ ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ