ಭಾರತದಲ್ಲಿ ಕಡಿಮೆ ಬೆಲೆಗೆ ಮತ್ತೊಂದು 5G ಸ್ಮಾರ್ಟ್​ಫೋನ್ ಲಾಂಚ್: ಕೇವಲ 10,999 ರೂ.

|

Updated on: Aug 05, 2023 | 2:49 PM

POCO M6 Pro 5G: ಕಡಿಮೆ ಬೆಲೆ ಆಗಿದ್ದರೂ ಇದರಲ್ಲಿ ಆಕರ್ಷಕ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಆಯ್ಕೆ ನೀಡಲಾಗಿದೆ. ಪೋಕೋ M6 ಪ್ರೊ 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕಡಿಮೆ ಬೆಲೆಗೆ ಮತ್ತೊಂದು 5G ಸ್ಮಾರ್ಟ್​ಫೋನ್ ಲಾಂಚ್: ಕೇವಲ 10,999 ರೂ.
POCO M6 Pro 5G
Follow us on

ಭಾರತದಲ್ಲಿ 5G ಯುಗ ಆರಂಭವಾದ ಬಳಿಕ 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್​ಫೋನ್​ಗಳ ಬಿಡುಗಡೆ ಸಂಖ್ಯೆ ಏರುತ್ತಿದೆ. ವಿಶೇಷ ಎಂದರೆ ಕೆಲ 5G ಸ್ಮಾರ್ಟ್​ಫೋನ್​ಗಳು (Smartphones) ಅತಿ ಕಡಿಮೆ ಬೆಲೆಗೆ ರಿಲೀಸ್ ಆಗುತ್ತಿದೆ. ಅಂತಹದೆ ಸಾಲಿಗೆ ಇದೀಗ ಪೋಕೋ ಸಂಸ್ಥೆ ಕೂಡ ಸೇರಿದೆ. ಪೋಕೋ (POCO) ಇಂದು ದೇಶದಲ್ಲಿ ಹೊಸ ಪೋಕೋ M6 ಪ್ರೊ 5G (POCO M6 Pro 5G) ಫೋನನ್ನು ಲಾಂಚ್ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಲಭ್ಯವಿರುವ 5ಜಿ ಫೋನುಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಿದೆ. ಕಡಿಮೆ ಬೆಲೆ ಆಗಿದ್ದರೂ ಇದರಲ್ಲಿ ಆಕರ್ಷಕ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಆಯ್ಕೆ ನೀಡಲಾಗಿದೆ. ಪೋಕೋ M6 ಪ್ರೊ 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ವೇರಿಯೆಂಟ್​ಗೆ 10,999 ರೂ. ಇದೆ. ಅಂತೆಯೆ ಇದರ 6GB RAM ಮತ್ತು 128GB ರೂಪಾಂತರದ ಬೆಲೆ 12,999 ರೂ. ಆಗಿದೆ. ಪೋಕೋ M6 ಪ್ರೊ 5G ಫೋನ್ ಆಗಸ್ಟ್ 9 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್ ಕಾಣಲಿದೆ. ಇದು ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿದೆ.

ಇದನ್ನೂ ಓದಿ
ಭಾರತಕ್ಕೆ ಬರುತ್ತಿದೆ ಟೆಕ್ನೋ ಪೋವಾ 5 ಸರಣಿ: ಈ ಫೋನಿನ ಬ್ಯಾಕ್ ಪ್ಯಾನಲ್ ಹೇಗಿದೆ ನೋಡಿ
ಅತಿ ಕಡಿಮೆ ಬೆಲೆಯ ಜಿಯೋಬುಕ್ ಲ್ಯಾಪ್​ಟಾಪ್ ಇಂದಿನಿಂದ ಖರೀದಿಗೆ ಲಭ್ಯ: ಏನೆಲ್ಲ ಫೀಚರ್ಸ್ ಇದೆ ನೋಡಿ
Realme 11 5G: ರಿಯಲ್​ಮಿ ಪರಿಚಯಿಸಿದೆ ಮತ್ತೊಂದು ಸೂಪರ್ ಸ್ಟೈಲಿಶ್ ಕ್ಯಾಮೆರಾ ಫೋನ್
Infinix GT 10 Pro: 8GB RAM + 256GB ಸ್ಟೋರೇಜ್ ಆವೃತ್ತಿಗೆ ₹19,999 ಇನ್ಫಿನಿಕ್ಸ್ ಫೋನ್

ಹೊಸ ವೇರಿಯೆಂಟ್​ನಲ್ಲಿ ಸ್ವದೇಶಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್‌ 5G ಬಿಡುಗಡೆ: ಬೆಲೆ ಕೇವಲ …

ಡಿಸ್ ಪ್ಲೇ: ಪೋಕೋ M6 ಪ್ರೊ 5G ಫೋನ್ 6.79-ಇಂಚಿನ FHD+ ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಇದರ ಮೇಲೆ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೂ ಇದೆ.

ಪ್ರೊಸೆಸರ್: ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 2 ಚಿಪ್ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ.

RAM ಮತ್ತು ಸಂಗ್ರಹಣೆ: ಪೋಕೋ M6 ಪ್ರೊ 5G ಯಲ್ಲಿ ಒಟ್ಟು ಎರಡು ರೂಪಾಂತರಗಳಿವೆ – 4GB + 64GB, 6GB + 128GB. 1TB ವರೆಗೆ ಸಂಗ್ರಹಣೆ ವಿಸ್ತರಣೆಗಾಗಿ ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದೆ.

ಕ್ಯಾಮೆರಾಗಳು: ಪೋಕೋ M6 ಪ್ರೊ 5G ಫೋನ್ 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ ಮತ್ತು LED ಫ್ಲ್ಯಾಷ್‌ನೊಂದಿಗೆ ಹಿಂಭಾಗದಲ್ಲಿ 2MP ಆಲ್ಟ್ರಾ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 8MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಈ ಸ್ಮಾರ್ಟ್​ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಸಾಫ್ಟ್‌ವೇರ್: ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ MIUI 14 ಅನ್ನು ರನ್ ಮಾಡುತ್ತದೆ. ಪೋಕೋ ಎರಡು ಪ್ರಮುಖ ಆಂಡ್ರಾಯ್ಡ್ ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳ ಭರವಸೆ ನೀಡಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP53 ರೇಟಿಂಗ್‌ನೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ