Poco X5 5G: ದೇಶದ ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಎಂಟ್ರಿ ಪೋಕೊ ಫೋನ್

ಪೋಕೊ ಹೊಸ ಎಕ್ಸ್ ಸರಣಿಯ ಸ್ಮಾರ್ಟ್​ಫೋನ್ ಪೈಕಿ ಹೊಸದಾಗಿ ಪರಿಚಯಿಸಲ್ಪಟ್ಟಿರುವ X5 5G ಫೋನ್ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಮಾರ್ಚ್ 14ರಂದು ಭಾರತದ ಗ್ಯಾಜೆಟ್ ಲೋಕಕ್ಕೆ ನೂತನ ಸ್ಮಾರ್ಟ್​ಫೋನ್ ಬಿಡುಗಡೆಯಾಗುತ್ತಿದೆ. ಈ ಕುರಿತು ಪೋಕೊ, ಟ್ವಿಟರ್​​ನಲ್ಲಿ ವಿವರ ನೀಡಿದೆ.

Poco X5 5G: ದೇಶದ ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಎಂಟ್ರಿ ಪೋಕೊ ಫೋನ್
ಪೋಕೊ X5 5G
ಕಿರಣ್​ ಐಜಿ

Updated on: Mar 09, 2023 | 6:12 PM

ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಪೋಕೊ ಹೊಸ ಎಕ್ಸ್ ಸರಣಿಯ ಸ್ಮಾರ್ಟ್​ಫೋನ್ ಪೈಕಿ ಹೊಸದಾಗಿ ಪರಿಚಯಿಸಲು ಸಜ್ಜಾಗಿದೆ. ಮಾರ್ಚ್ 14ರಂದು ಭಾರತದ ಗ್ಯಾಜೆಟ್ ಲೋಕಕ್ಕೆ ನೂತನ ಸ್ಮಾರ್ಟ್​ಫೋನ್ ಬಿಡುಗಡೆಯಾಗುತ್ತಿದೆ. ಈ ಕುರಿತು ಪೋಕೊ, ಟ್ವಿಟರ್​​ನಲ್ಲಿ ವಿವರ ನೀಡಿದೆ. ಎಕ್ಸ್ ಸರಣಿಯ ನೂತನ ಫೋನ್ ಕುರಿತು ಜನರಲ್ಲಿ ಕುತೂಹಲ ಉಂಟಾಗಿದೆ. ಪೋಕೊ, ಶಓಮಿ ಗ್ರೂಪ್​ನಿಂದ ಬೇರ್ಪಟ್ಟ ಬಳಿಕ ಪ್ರತ್ಯೇಕ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿದೆ. ಶಓಮಿ ಮತ್ತು ರೆಡ್ಮಿ ಫೋನ್​ಗಳಿಗೆ ಸರಿಸಾಟಿಯಾಗಿ, ಮಾರುಕಟ್ಟೆಯಲ್ಲಿ ಪೋಕೊ ಪೈಪೋಟಿ ನೀಡುತ್ತಿದೆ. ಪೋಕೊ ನೂತನ ಸ್ಮಾರ್ಟ್​ಫೋನ್​ನ ವಿವರ ಇಲ್ಲಿದೆ.

ಪೋಕೊ X5 5G

ಪೋಕೊ ನೂತನ ಎಕ್ಸ್ ಸರಣಿಯ ಸ್ಮಾರ್ಟ್​ಫೋನ್ X5 5G ಪರಿಚಯಿಸಲ್ಪಡುತ್ತಿದೆ. ಮಾರ್ಚ್ 14ರಂದು ಭಾರತದಲ್ಲಿ ಹೊಸ ಪೋಕೊ X5 5G ಬಿಡುಗಡೆಯಾಗುತ್ತಿದೆ. ಈ ಕುರಿತು ಕಂಪನಿ ವಿವರ ನೀಡಿದೆ. ನೂತನ ಪೋಕೊ X5 5G ಸ್ಮಾರ್ಟ್​ಫೋನ್​ನಲ್ಲಿ 6.67 ಇಂಚಿನ ಫುಲ್​ಎಚ್​ಡಿ+ ಡಿಸ್​ಪ್ಲೇ ಇದೆ. ಜತೆಗೆ, 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಹಿತ 8+2 ಮೆಗಾಪಿಕ್ಸೆಲ್​ನ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪೋಕೋ X5 5G ಸ್ಮಾರ್ಟ್​ಫೋನ್​ನಲ್ಲಿದೆ.

ಪೋಕೊ X5 5G ಬೆಲೆ ಮತ್ತು ಲಭ್ಯತೆ

ಫ್ಲಿಪ್​ಕಾರ್ಟ್ ಮೂಲಕ ಹೊಸ ಪೋಕೊ X5 5G ಸ್ಮಾರ್ಟ್​ಫೋನ್ ಲಭ್ಯವಾಗಲಿದೆ. 8 GB RAM +256 GB ಆವೃತ್ತಿಯಲ್ಲಿ ಪೋಕೊ ಫೋನ್ ದೊರೆಯಲಿದ್ದು, ಸ್ನ್ಯಾಪ್​ಡ್ರ್ಯಾಗನ್ 695 ಪ್ರೊಸೆಸರ್ ಬಳಕೆ ಮಾಡಲಾಗಿದೆ. ಭಾರತದಲ್ಲಿ ಅಂದಾಜು ₹20,000 ಬೆಲೆ ನಿಗದಿಪಡಿಸುವ ಸಾಧ್ಯತೆಯಿದೆ.

Published On - 6:12 pm, Thu, 9 March 23

ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Loading...
Unable to load recommendations.
Follow Us