ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಪೋಕೋ ಸಂಸ್ಥೆ ಇದೀಗ ಹೊಸ ಫೋನ್ ಲಾಂಚ್ ಮಾಡಲು ಸಿದ್ದತೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ದೇಶದಲ್ಲಿ ಹೊಸ ಪೋಕೋ X6 ನಿಯೋ (Poco X6 Neo) ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್ ನಿಯೋ ಬ್ರ್ಯಾಂಡಿಂಗ್‌ನೊಂದಿಗೆ ಬಿಡುಗಡೆಯಾಗುವ 2024 ರ ಮೊದಲ ಫೋನ್ ಆಗಿರುತ್ತದೆ. ಈ ಸ್ಮಾರ್ಟ್‌ಫೋನ್ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ ಮತ್ತು Gen Z ಬಳಕೆದಾರರನ್ನು ಗುರಿಯಾಗಿಸಿ ಅನಾವರಣ ಮಾಡುತ್ತಿದೆ. ಪೋಕೋ X6 ನಿಯೋ ಫೋನಿನ ಬೆಲೆ ಮತ್ತು ಫೀಚರ್ಸ್ ಏನಿರಬಹುದು ಎಂಬುದನ್ನು ನೋಡೋಣ.
ಮೂಲದ ಪ್ರಕಾರ, ಕಂಪನಿಯು ಮುಂದಿನ ವಾರದ ವೇಳೆಗೆ ಭಾರತದಲ್ಲಿ ಪೋಕೋ X6 ನಿಯೋ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಲಿದೆ. ಇದರ ಬೆಲೆ 16 ಸಾವಿರಕ್ಕಿಂತ ಕಡಿಮೆ ಇರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಬಹು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ.
ನೀವು ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಚಾರ್ಜ್ ಮಾಡುತ್ತಿದ್ದೀರಾ?: ಆರ್‌ಬಿಐ ಎಚ್ಚರಿಕೆ
POCO X6 Neo first look!
India🇮🇳 launch by next week✅
Priced💵 under ₹16k✅Expected Specs:
– Dimensity 6080 | LPDDR4X + UFS 2.2
– 6.67″ OLED, FHD+, 120Hz, 1000nit, 10bit
– 108MP + 2MP
– 16MP
– 5000mAh, 33W#POCOX6Neo #POCO https://t.co/r3zbngm3tA pic.twitter.com/raWXtaVQ3D— Sudhanshu Ambhore (@Sudhanshu1414) March 4, 2024
ಪೋಕೋ X6 ನಿಯೋ ಫೋಟೋಗಳು ಆನ್ಲೈನ್ನಲ್ಲಿ ಸೋರಿಕೆ ಆಗಿದೆ. ಇದರ ಬ್ಯಾಕ್ ಪ್ಯಾನಲ್ ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಆರೆಂಜ್ ಬಣ್ಣದ ಆಯ್ಕೆಯಲ್ಲಿ ಫೋನ್ ಲಭ್ಯವಿರುತ್ತದೆ. ಫೋನ್‌ನ ಎಡಭಾಗದಲ್ಲಿ ಪೋಕೋ ಬ್ರ್ಯಾಂಡಿಂಗ್ ಜೊತೆಗೆ ಕ್ಯಾಮೆರಾ ಮಾಡ್ಯೂಲ್ ಮೇಲ್ಭಾಗದಲ್ಲಿ ನೀಡಲಾಗಿದೆ. ಫೋನ್‌ನ ಫೀಚರ್ಗಳು ಇತ್ತೀಚೆಗೆ ಬಿಡುಗಡೆಯಾದ ರೆಡ್ಮಿ ನೋಟ್ 13R ಪ್ರೊ ಮಾದರಿಯಂತೆಯೇ ಇದೆ. ಪೋಕೋ X6 ನಿಯೋ ಎಲ್ಇಡಿ ಫ್ಲ್ಯಾಷ್ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ಫೋಟೋ ದೃಢಪಡಿಸಿದೆ. ವಾಲ್ಯೂಮ್ ಕಂಟ್ರೋಲರ್ ಮತ್ತು ಪವರ್ ಆನ್/ಆಫ್ ಬಟನ್ ಎಡಭಾಗದಲ್ಲಿದೆ.
ಪೋಕೋ X6 ನಿಯೋ ಫೋನ್ ರೆಡ್ಮಿ ನೋಟ್ 13R ಪ್ರೊ ನಂತೆಯೇ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿರಬಹುದು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಇದು ಪೋಕೋ X6 ನಿಯೋ ಹೆಸರಿನಲ್ಲಿ ಲಾಂಚ್ ಆಗಲಿದೆಯಂತೆ.
ಪ್ರೀಮಿಯಂ ಡಿಸೈನ್ನ ವಿವೋ V29e ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ: ಕೂಡಲೇ ಖರೀದಿಸಿ
ಪೋಕೋ X6 ನಿಯೋ 6.67-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿರಬಹುದು. 120Hz ನ ರಿಫ್ರೆಶ್ ದರ, 1080×2400 ಪಿಕ್ಸೆಲ್ಗಳ ರೆಸಲ್ಯೂಶನ್ ಇದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ಹೊಂದಿದೆ. ಈ ಫೋನ್ 12GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಇದರ ಜೊತೆಗೆ ಈ ಸ್ಮಾರ್ಟ್ಫೋನ್ನಲ್ಲಿ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ