ProDiscover: ಭವಿಷ್ಯದ ಅಪರಾಧ ಶೃಂಗಸಭೆ 2025: ಗಮನ ಸೆಳೆದ ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್​ನ ಫ್ಲೆಕ್ಸ್​ಕೀ

Future Crime Summit 2025: ದೇಶದ ರಾಜಧಾನಿ ನಗರಿಯಲ್ಲಿ ಫೆಬ್ರುವರಿ 14ರಂದು ಮುಕ್ತಾಯಗೊಂಡ ಫ್ಯೂಚರ್ ಕ್ರೈಮ್ ಸಮಿಟ್ 2025 ಸಮಾವೇಶದಲ್ಲಿ ProDiscover ಸಂಸ್ಥೆಗೆ ಅವಾರ್ಡ್ ಆಫ್ ಎಕ್ಸಲೆನ್ಸ್ ಸಿಕ್ಕಿತು. ದೇಶದ ಟಾಙ್ ಸೈಬರ್ ಸೆಕ್ಯೂರಿಟಿ ತಜ್ಞರು, ಡಿಫೆನ್ಸ್ ಸಿಬ್ಬಂದಿ, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಮೊದಲಾದವರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್​ನಿಂದ ಫ್ಲೆಕ್ಸ್​ಕೀ ಎನ್ನುವ ಸಾಧನವನ್ನು ಪ್ರದರ್ಶಿಸಲಾಯಿತು.

ProDiscover: ಭವಿಷ್ಯದ ಅಪರಾಧ ಶೃಂಗಸಭೆ 2025: ಗಮನ ಸೆಳೆದ ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್​ನ ಫ್ಲೆಕ್ಸ್​ಕೀ
ಪ್ರೋಡಿಸ್ಕವರ್ ಫ್ಲೆಕ್ಸ್ ಕೀ,

Updated on: Feb 17, 2025 | 3:16 PM

ನವದೆಹಲಿ, ಫೆಬ್ರುವರಿ 17: ಇಲ್ಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್​ನಲ್ಲಿ ಇತ್ತೀಚೆಗೆ ನಡೆದ ದಿ ಫ್ಯೂಚರ್ ಕ್ರೈಮ್ ಸಮಿಟ್ 2025 ಸಮಾವೇಶ ಈ ಕ್ಷೇತ್ರದ ತಜ್ಞರು, ಗಣ್ಯರು ಒಂದು ವೇದಿಕೆಗೆ ತಂದಿತು. ತಂತ್ರಜ್ಞಾನ ದುರ್ಬಳಕೆಯಿಂದ ಎಸಗಲಾಗುವ ಅಪರಾಧಗಳನ್ನು ನಿಗ್ರಹಿಸುವ ಸಾಧನಗಳನ್ನು ಮತ್ತು ವಿಧಾನಗಳನ್ನು ಅನ್ವೇಷಿಸಲು ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (ಎಫ್​ಸಿಆರ್​ಎಫ್) ಈ ಶೃಂಗಸಭೆ ಆಯೋಜಿಸಿತ್ತು. ಎರಡು ದಿನಗಳ ಈ ಸಮಾವೇಶದಲ್ಲಿ ದೇಶದ ಅಗ್ರಮಾನ್ಯ ಸೈಬರ್​ಸೆಕ್ಯೂರಿಟಿ ಪರಿಣಿತರು, ಕಾನೂನು ಜಾರಿ ಸಂಸ್ಥೆಗಳು, ರಕ್ಷಣಾ ಸಿಬ್ಬಂದಿ, ಸೈಬರ್ ವಕೀಲರು, ಗುಪ್ತಚರ ಅಧಿಕಾರಿಗಳು, ಉದ್ಯಮ ನಾಯಕರು, ಹಿರಿಯ ಎಕ್ಸಿಕ್ಯೂಟಿವ್​ಗಳು ಮೊದಲಾದವರು ಪಾಲ್ಗೊಂಡಿದ್ದರು. ಭವಿಷ್ಯದಲ್ಲಿ ಎದುರಾಗಬಹುದಾದ ಡಿಜಿಟಲ್ ಅಪಾಯಗಳು, ಅವುಗಳನ್ನು ನಿಗ್ರಹಿಸಲು ಅಗತ್ಯವಾದ ವಿಧಿ ವಿಜ್ಞಾನ ಆವಿಷ್ಕಾರಗಳು ಇತ್ಯಾದಿಯ ಕುರಿತು ಈ ಸಮಾವೇಶದಲ್ಲಿ ಚರ್ಚೆಗಳಾದವು.

ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್​ನ ಫ್ಲೆಕ್ಸ್​ಕೀ ಎನ್ನುವ ಸಾಧನವು ಈ ಸಮಿಟ್​ನಲ್ಲಿ ಹೈಲೈಟ್​ಗಳಲ್ಲಿ ಒಂದೆನಿಸಿತು. ನೆಟ್ವರ್ಕ್ ಆಧಾರಿತ ಲೈಸೆನ್ಸ್ ಮ್ಯಾನೇಜ್ಮೆಂಟ್​ಗೆ ಇದು ಸಹಾಯವಾಗುತ್ತದೆ. ಫೋರೆನ್ಸಿಕ್ ತನಿಖೆ ಬಲಪಡಿಸಲು ಮತ್ತು ಕಾರ್ಯಾತ್ಮಕ ಕ್ಷಮತೆ ಹೆಚ್ಚಿಸಲೂ ಈ ಫ್ಲೆಕ್ಸ್​ಕೀ ಸಹಾಯವಾಗಬಲ್ಲುದು ಎನ್ನಲಾಗಿದೆ.

ಇದನ್ನೂ ಓದಿ: Google Pay: ಗೂಗಲ್ ಪೇನಲ್ಲಿ ಅದ್ಭುತವಾದ AI ವೈಶಿಷ್ಟ್ಯ: ನಿಮ್ಮ ಧ್ವನಿ ಮೂಲಕವೇ UPI ಪಾವತಿ ಮಾಡಬಹುದು

ಈ ವಿಧಿವಿಜ್ಞಾನ ಕ್ಷೇತ್ರದಲ್ಲಿ 23 ವರ್ಷಗಳಿಂದ ಇರುವ ಪ್ರೋಡಿಸ್ಕವರ್ ಸಂಸ್ಥೆ, ಈ ಸಮಿಟ್​ನಲ್ಲಿ ಸಮಗ್ರ ಫೋರೆನ್ಸಿಕ್ ಟೂಲ್​ಕಿಟ್ ಅನ್ನು ಪರಿಚಯಿಸಿತು. ಡಿಸ್ಕ್ ಇಮೇಜಿಂಗ್, ಲೈವ್ ಮೆಮೊರಿ ಅನಾಲಿಸಿಸ್, ಡಾಟಾ ರಿಕವರಿ, ಅಡ್ವಾನ್ಸ್ಡ್ ರಿಪೋರ್ಟಿಂಗ್ ಇತ್ಯಾದಿ ಸೇವೆಗಳು ಈ ಟೂಲ್​ಕಿಟ್​ನಲ್ಲಿ ಲಭ್ಯ ಇವೆ. ಫ್ಲೆಕ್ಸ್​ಕೀ ಸಾಧನವು ಫೋರೆನ್ಸಿಕ್ ವರ್ಕ್​ಫ್ಲೋನಲ್ಲಿ ಗಮನಾರ್ಹ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದು ಸಮಿಟ್​ನಲ್ಲಿ ಪಾಲ್ಗೊಂಡಿದ್ದವರ ಅನಿಸಿಕೆಯಾಗಿತ್ತು.

ನೀತಿ ಆಯೋಗ್​ನ ಡಾ. ವಿ. ಕೆ. ಸಾರಸ್ವತ್, ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಲೆ| ಜನರಲ್ ಎಂ.ಯು. ನಾಯರ್, ಎನ್​ಸಿಆರ್​ಬಿಯ ಅಲೋಕ್ ರಂಜನ್, ಮಾಜಿ ಐಬಿ ನಿರ್ದೇಶಕ ರಾಜೀವ್ ಜೈನ್ ಮೊದಲಾದವರು ಈ ಶೃಂಗಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಸೈಬರ್ ಫೋರೆನ್ಸಿಕ್ಸ್, ಡಿಜಿಟಲ್ ಥ್ರೆಟ್, ತಂತ್ರಜ್ಞಾನ ಕಾನೂನು ಇತ್ಯಾದಿ ವಿಚಾರದಲ್ಲಿ ತನಿಖಾ ವಿಧಾನಗಳು ಹೇಗಿರಬೇಕು, ಸೈಬರ್ ಸೆಕ್ಯೂರಿಟಿ ತಂತ್ರಗಳು ಹೇಗಿರಬೇಕು ಎನ್ನುವ ಕುರಿತು ವಿಚಾರ ವಿನಿಮಯ, ಸಮಾಲೋಚನೆಗಳು ಆದವು.

ಇದನ್ನೂ ಓದಿ: ಈ ವರ್ಷ 10 ತಿಂಗಳಲ್ಲೇ ಭಾರತದಿಂದ ಸ್ಮಾರ್ಟ್​ಫೋನ್ ರಫ್ತು 1.50 ಲಕ್ಷ ಕೋಟಿ ರೂ ಮೈಲಿಗಲ್ಲು; ಹೊಸ ದಾಖಲೆ

ಇದೇ ವೇಳೆ, ಪ್ರೋಡಿಸ್ಕವರ್ ಸಂಸ್ಥೆಗೆ ಫೋರೆನ್ಸಿಕ್ ಟೆಕ್ನಾಲಜಿ ಕ್ಷೇತ್ರದಲ್ಲಿ 23 ವರ್ಷಗಳಿಂದ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಎಕ್ಸಲೆನ್ಸ್ ಅವಾರ್ಡ್ ನೀಡಲಾಯಿತು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ