Tech Tips: ಮೊಬೈಲ್ ಡಿಸ್‌ಪ್ಲೇ ಸ್ಟಕ್ ಆದ್ರೆ ನೀವೇ ಸರಿ ಮಾಡೋದು ಹೇಗೆ?, ಇಲ್ಲಿದೆ ಟ್ರಿಕ್ಸ್
Smartphone Tips: ನಿಮ್ಮ ಸ್ಮಾರ್ಟ್ ಫೋನ್‌ನ ಡಿಸ್‌ಪ್ಲೇ ಹಾಳಾದರೆ, ಇತರ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅದನ್ನು ಬಳಸಲು ಸಾಧ್ಯವಿಲ್ಲ. ಮೊಬೈಲ್ ಡಿಸ್ಪ್ಲೇಗಳು ಸಾಮಾನ್ಯವಾಗಿ ಎರಡು ಕಾರಣಗಳಿಂದ ಹಾನಿಗೊಳಗಾಗುತ್ತವೆ. ಒಂದು ಮೊಬೈಲ್‌ಗೆ ಹಾನಿಯಾಗಬಹುದು ಇನ್ನೊಂದು ವೈರಸ್ ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿರುವ ದೋಷ ಕಂಡುಬಂದಾಗ.

ಮೊಬೈಲ್ ಇಂದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇಂದು ನಾವು ನಮ್ಮ ಹೆಚ್ಚಿನ ಕೆಲಸಗಳನ್ನು ಫೋನ್‌ಗಳ ಸಹಾಯದಿಂದ ಮಾಡುತ್ತೇವೆ. ಇದು ಬ್ಯಾಂಕಿಂಗ್‌ನಿಂದ ಹಿಡಿದು ಶಾಪಿಂಗ್‌ವರೆಗೆ ಎಲ್ಲವನ್ನೂ ಮೊಬೈಲ್ ಫೋನ್‌ನ ಸಹಾಯದಿಂದ ಮನೆಯಿಂದಲೇ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಫೋನ್ ಕೆಟ್ಟುಹೋದರೆ, ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ನಿಮ್ಮ ಮೊಬೈಲ್‌ನ ಡಿಸ್‌ಪ್ಲೇ ಫ್ರೀಜ್ ಆದಾಗ ಅಥವಾ ಟಚ್ ಸರಿಯಾಗಿ ಕೆಲಸ ಮಾಡದೆ ಇದ್ದಾಗ ಕೆಟ್ಟ ಕೋಪ ಬರುತ್ತದೆ. ಆದರೆ, ಈ ಸಮಸ್ಯೆಗೆ ನೀವು ಮೊಬೈಲ್ ಅನ್ನು ಸರ್ವಿಸ್ ಸೆಂಟರ್ಗೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಮನೆಯಲ್ಲಿ ನೀವೇ ಸರಿಮಾಡಬಹುದು.
ಫೋನ್‌ನ ಡಿಸ್‌ಪ್ಲೇ ಹಾಳಾದರೆ, ಇತರ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅದನ್ನು ಬಳಸಲು ಸಾಧ್ಯವಿಲ್ಲ. ಮೊಬೈಲ್ ಡಿಸ್ಪ್ಲೇಗಳು ಸಾಮಾನ್ಯವಾಗಿ ಎರಡು ಕಾರಣಗಳಿಂದ ಹಾನಿಗೊಳಗಾಗುತ್ತವೆ. ಒಂದು ಮೊಬೈಲ್‌ಗೆ ಹಾನಿಯಾಗಬಹುದು ಇನ್ನೊಂದು ವೈರಸ್ ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿರುವ ದೋಷ ಕಂಡುಬಂದಾಗ. ಹಾಗೆಯೆ ಕೆಲವು ಬಾರಿ ಫೋನ್ ಅತಿಯಾದ ಶಾಖಕ್ಕೆ ತುತ್ತಾದರೂ ಡಿಸ್‌ಪ್ಲೇ ಹಾಳಾಗುತ್ತದೆ.
ರಿ-ಸ್ಟಾರ್ಟ್ ಮಾಡಿ: ಹಲವು ಬಾರಿ ನಿಮ್ಮ ಮೊಬೈಲ್‌ನ ಡಿಸ್‌ಪ್ಲೇ ಫ್ರೀಜ್ ಆಗುತ್ತದೆ. ವಿಶೇಷವಾಗಿ ನೀವು ಗೇಮ್ಗಳನ್ನು ಆಡುವಾಗ ಇದು ಹೆಚ್ಚಾಗಿ ಸಂಭವಿಸಬಹುದು. ಹೀಗಾದಾಗ ಫೋನ್‌ನಲ್ಲಿರುವ ಬಟನ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ನಿಮ್ಮ ಫೋನ್ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಮೊದಲು ಫೋನ್ ಅನ್ನು ಮರುಪ್ರಾರಂಭಿಸಲು ಪ್ರಯತ್ನಿಸಿ. ಫೋನ್ ಮರುಪ್ರಾರಂಭಿಸದಿದ್ದರೆ, ಅದನ್ನು ರೂಟ್ ಮೋಡ್‌ಗೆ ಇರಿಸಿ. ನಿಮ್ಮ ಫೋನ್ ರೂಟ್ ಮೋಡ್‌ಗೆ ಹೋದಾಗ, ವಾಲ್ಯೂಮ್ ಬಟನ್‌ಗಳೊಂದಿಗೆ ಅದನ್ನು ನಿಯಂತ್ರಿಸುವ ಮೂಲಕ ರಿಸ್ಟಾರ್ಟ್ ಮಾಡಬಹುದು.
ಫೋನ್‌ಗೆ ವಿಶ್ರಾಂತಿ ನೀಡಿ: ಫೋನ್ ಡಿಸ್ಪ್ಲೇಯು ಇದ್ದಕ್ಕಿದ್ದಂತೆ ಸ್ಟಕ್ ಆದರೆ, ಮೊದಲು ಫೋನ್ ಅನ್ನು ಬಿಸಿ ಗಾಳಿ ಅಥವಾ ಬಿಸಿ ವಸ್ತುಗಳು ಸ್ಪರ್ಶಿಸದ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೆ ಇರಿಸಿ. ಅಂದರೆ ತಂಪಾದ ಹಾಗದಲ್ಲಿ ಇಡಿ. ಫೋನ್ ಅನ್ನು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಇಡಬೇಡಿ, 5-10 ನಿಮಿಷಗಳ ನಂತರ ಫೋನ್ ಮತ್ತೆ ಆನ್ ಆಗುತ್ತದೆ.
Tech Tips: ಫೋಟೋ, ವಿಡಿಯೋ ತೆಗೆಯಲು ಸ್ಟೋರೇಜ್ ಸಾಕಾಗುತ್ತಿಲ್ವ?: ಈ ಟ್ರಿಕ್ ಫಾಲೋ ಮಾಡಿ
ಚಾರ್ಜ್ ಮಾಡಿ: ಸ್ವಲ್ಪ ಅಮಯದ ಬಳಿಕವೂ ಫೋನ್ ಆನ್ ಆಗದಿದ್ದರೆ, ಚಾರ್ಜ್ ಮಾಡಿ. ಸ್ವಲ್ಪ ಹೊತ್ತು ಫೋನ್ ಚಾರ್ಜ್ ಮಾಡಿದ ನಂತರ ಅದು ಸ್ವಯಂಚಾಲಿತವಾಗಿ ಆನ್ ಆಗುವ ಸಾಧ್ಯತೆ ಇರುತ್ತದೆ.
ಇದಲ್ಲದೆ, ನಿಮ್ಮ ಫೋನ್‌ನ ಡಿಸ್‌ಪ್ಲೇ ಸ್ಟ್ರಿಕ್ ಆಗಿ ಅದರ ಮೇಲೆ ಲಂಬ ರೇಖೆಗಳು ಕಾಣಿಸಿಕೊಂಡರೆ, ಡಿಸ್‌ಪ್ಲೇ ತುಂಬಾ ಮಸುಕಾಗಿ ಕಾಣಲು ಪ್ರಾರಂಭಿಸಿದರೆ ಎಚ್ಚರಿಕೆ ವಹಿಸಬೇಕು. ಸರಿಯಾದ ಸಮಯದಲ್ಲಿ ಅದನ್ನು ಸರಿಪಡಿಸದಿದ್ದರೆ, ನಿಮ್ಮ ಮೊಬೈಲ್‌ನ ಡಿಸ್‌ಪ್ಲೇ ಕೂಡ ಹಾನಿಗೊಳಗಾಗಬಹುದು. ಫೋನ್‌ನಲ್ಲಿ ದೋಷ ಇದ್ದಾಗ ಈ ಸಮಸ್ಯೆ ಸಾಮಾನ್ಯವಾಗಿ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಂಬ ರೇಖೆ ಕಾಣಿಸಿಕೊಂಡರೆ, ಮೊದಲು ಫೋನ್ ಅನ್ನು ಆಫ್ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಮತ್ತೆ ಆನ್ ಮಾಡಲು ಪ್ರಯತ್ನಿಸಿ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ಫೋನ್ ಅನ್ನು ಮರುಪ್ರಾರಂಭಿಸುವ ಮೂಲಕ ಪರಿಹರಿಸಬಹುದು.
ಇದಲ್ಲದೆ, ಕೆಲವೊಮ್ಮೆ ಮೊಬೈಲ್ ಅನ್ನು ದೀರ್ಘಕಾಲ ಬಳಸಿದ ನಂತರ ಅಥವಾ ಇದ್ದಕ್ಕಿದ್ದಂತೆ, ಫೋನ್ ಡಿಸ್ಪ್ಲೇಯು ಮಿನುಗಲು ಪ್ರಾರಂಭಿಸುತ್ತದೆ. ಈ ಸಮಸ್ಯೆಗೆ ಮೊಬೈಲ್‌ನ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಎರಡಡೂ ಕಾರಣವಾಗಿರಬಹುದು. ನಿಮ್ಮ ಫೋನ್ ಕೂಡ ಇದೇ ರೀತಿಯ ಸಮಸ್ಯೆಯನ್ನು ಹೊಂದಿದ್ದರೆ, ನೀವು OLED ಸೇವರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಈ ಸಮಸ್ಯೆಯನ್ನು ತೊಡೆದುಹಾಕಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Mon, 17 February 25