ProDiscover: ಭವಿಷ್ಯದ ಅಪರಾಧ ಶೃಂಗಸಭೆ 2025: ಗಮನ ಸೆಳೆದ ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್ನ ಫ್ಲೆಕ್ಸ್ಕೀ
Future Crime Summit 2025: ದೇಶದ ರಾಜಧಾನಿ ನಗರಿಯಲ್ಲಿ ಫೆಬ್ರುವರಿ 14ರಂದು ಮುಕ್ತಾಯಗೊಂಡ ಫ್ಯೂಚರ್ ಕ್ರೈಮ್ ಸಮಿಟ್ 2025 ಸಮಾವೇಶದಲ್ಲಿ ProDiscover ಸಂಸ್ಥೆಗೆ ಅವಾರ್ಡ್ ಆಫ್ ಎಕ್ಸಲೆನ್ಸ್ ಸಿಕ್ಕಿತು. ದೇಶದ ಟಾಙ್ ಸೈಬರ್ ಸೆಕ್ಯೂರಿಟಿ ತಜ್ಞರು, ಡಿಫೆನ್ಸ್ ಸಿಬ್ಬಂದಿ, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಮೊದಲಾದವರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್ನಿಂದ ಫ್ಲೆಕ್ಸ್ಕೀ ಎನ್ನುವ ಸಾಧನವನ್ನು ಪ್ರದರ್ಶಿಸಲಾಯಿತು.

ನವದೆಹಲಿ, ಫೆಬ್ರುವರಿ 17: ಇಲ್ಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ ದಿ ಫ್ಯೂಚರ್ ಕ್ರೈಮ್ ಸಮಿಟ್ 2025 ಸಮಾವೇಶ ಈ ಕ್ಷೇತ್ರದ ತಜ್ಞರು, ಗಣ್ಯರು ಒಂದು ವೇದಿಕೆಗೆ ತಂದಿತು. ತಂತ್ರಜ್ಞಾನ ದುರ್ಬಳಕೆಯಿಂದ ಎಸಗಲಾಗುವ ಅಪರಾಧಗಳನ್ನು ನಿಗ್ರಹಿಸುವ ಸಾಧನಗಳನ್ನು ಮತ್ತು ವಿಧಾನಗಳನ್ನು ಅನ್ವೇಷಿಸಲು ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (ಎಫ್ಸಿಆರ್ಎಫ್) ಈ ಶೃಂಗಸಭೆ ಆಯೋಜಿಸಿತ್ತು. ಎರಡು ದಿನಗಳ ಈ ಸಮಾವೇಶದಲ್ಲಿ ದೇಶದ ಅಗ್ರಮಾನ್ಯ ಸೈಬರ್ಸೆಕ್ಯೂರಿಟಿ ಪರಿಣಿತರು, ಕಾನೂನು ಜಾರಿ ಸಂಸ್ಥೆಗಳು, ರಕ್ಷಣಾ ಸಿಬ್ಬಂದಿ, ಸೈಬರ್ ವಕೀಲರು, ಗುಪ್ತಚರ ಅಧಿಕಾರಿಗಳು, ಉದ್ಯಮ ನಾಯಕರು, ಹಿರಿಯ ಎಕ್ಸಿಕ್ಯೂಟಿವ್ಗಳು ಮೊದಲಾದವರು ಪಾಲ್ಗೊಂಡಿದ್ದರು. ಭವಿಷ್ಯದಲ್ಲಿ ಎದುರಾಗಬಹುದಾದ ಡಿಜಿಟಲ್ ಅಪಾಯಗಳು, ಅವುಗಳನ್ನು ನಿಗ್ರಹಿಸಲು ಅಗತ್ಯವಾದ ವಿಧಿ ವಿಜ್ಞಾನ ಆವಿಷ್ಕಾರಗಳು ಇತ್ಯಾದಿಯ ಕುರಿತು ಈ ಸಮಾವೇಶದಲ್ಲಿ ಚರ್ಚೆಗಳಾದವು.
ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್ನ ಫ್ಲೆಕ್ಸ್ಕೀ ಎನ್ನುವ ಸಾಧನವು ಈ ಸಮಿಟ್ನಲ್ಲಿ ಹೈಲೈಟ್ಗಳಲ್ಲಿ ಒಂದೆನಿಸಿತು. ನೆಟ್ವರ್ಕ್ ಆಧಾರಿತ ಲೈಸೆನ್ಸ್ ಮ್ಯಾನೇಜ್ಮೆಂಟ್ಗೆ ಇದು ಸಹಾಯವಾಗುತ್ತದೆ. ಫೋರೆನ್ಸಿಕ್ ತನಿಖೆ ಬಲಪಡಿಸಲು ಮತ್ತು ಕಾರ್ಯಾತ್ಮಕ ಕ್ಷಮತೆ ಹೆಚ್ಚಿಸಲೂ ಈ ಫ್ಲೆಕ್ಸ್ಕೀ ಸಹಾಯವಾಗಬಲ್ಲುದು ಎನ್ನಲಾಗಿದೆ.
ಇದನ್ನೂ ಓದಿ: Google Pay: ಗೂಗಲ್ ಪೇನಲ್ಲಿ ಅದ್ಭುತವಾದ AI ವೈಶಿಷ್ಟ್ಯ: ನಿಮ್ಮ ಧ್ವನಿ ಮೂಲಕವೇ UPI ಪಾವತಿ ಮಾಡಬಹುದು
ಈ ವಿಧಿವಿಜ್ಞಾನ ಕ್ಷೇತ್ರದಲ್ಲಿ 23 ವರ್ಷಗಳಿಂದ ಇರುವ ಪ್ರೋಡಿಸ್ಕವರ್ ಸಂಸ್ಥೆ, ಈ ಸಮಿಟ್ನಲ್ಲಿ ಸಮಗ್ರ ಫೋರೆನ್ಸಿಕ್ ಟೂಲ್ಕಿಟ್ ಅನ್ನು ಪರಿಚಯಿಸಿತು. ಡಿಸ್ಕ್ ಇಮೇಜಿಂಗ್, ಲೈವ್ ಮೆಮೊರಿ ಅನಾಲಿಸಿಸ್, ಡಾಟಾ ರಿಕವರಿ, ಅಡ್ವಾನ್ಸ್ಡ್ ರಿಪೋರ್ಟಿಂಗ್ ಇತ್ಯಾದಿ ಸೇವೆಗಳು ಈ ಟೂಲ್ಕಿಟ್ನಲ್ಲಿ ಲಭ್ಯ ಇವೆ. ಫ್ಲೆಕ್ಸ್ಕೀ ಸಾಧನವು ಫೋರೆನ್ಸಿಕ್ ವರ್ಕ್ಫ್ಲೋನಲ್ಲಿ ಗಮನಾರ್ಹ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದು ಸಮಿಟ್ನಲ್ಲಿ ಪಾಲ್ಗೊಂಡಿದ್ದವರ ಅನಿಸಿಕೆಯಾಗಿತ್ತು.
ನೀತಿ ಆಯೋಗ್ನ ಡಾ. ವಿ. ಕೆ. ಸಾರಸ್ವತ್, ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಲೆ| ಜನರಲ್ ಎಂ.ಯು. ನಾಯರ್, ಎನ್ಸಿಆರ್ಬಿಯ ಅಲೋಕ್ ರಂಜನ್, ಮಾಜಿ ಐಬಿ ನಿರ್ದೇಶಕ ರಾಜೀವ್ ಜೈನ್ ಮೊದಲಾದವರು ಈ ಶೃಂಗಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಸೈಬರ್ ಫೋರೆನ್ಸಿಕ್ಸ್, ಡಿಜಿಟಲ್ ಥ್ರೆಟ್, ತಂತ್ರಜ್ಞಾನ ಕಾನೂನು ಇತ್ಯಾದಿ ವಿಚಾರದಲ್ಲಿ ತನಿಖಾ ವಿಧಾನಗಳು ಹೇಗಿರಬೇಕು, ಸೈಬರ್ ಸೆಕ್ಯೂರಿಟಿ ತಂತ್ರಗಳು ಹೇಗಿರಬೇಕು ಎನ್ನುವ ಕುರಿತು ವಿಚಾರ ವಿನಿಮಯ, ಸಮಾಲೋಚನೆಗಳು ಆದವು.
ಇದನ್ನೂ ಓದಿ: ಈ ವರ್ಷ 10 ತಿಂಗಳಲ್ಲೇ ಭಾರತದಿಂದ ಸ್ಮಾರ್ಟ್ಫೋನ್ ರಫ್ತು 1.50 ಲಕ್ಷ ಕೋಟಿ ರೂ ಮೈಲಿಗಲ್ಲು; ಹೊಸ ದಾಖಲೆ
ಇದೇ ವೇಳೆ, ಪ್ರೋಡಿಸ್ಕವರ್ ಸಂಸ್ಥೆಗೆ ಫೋರೆನ್ಸಿಕ್ ಟೆಕ್ನಾಲಜಿ ಕ್ಷೇತ್ರದಲ್ಲಿ 23 ವರ್ಷಗಳಿಂದ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಎಕ್ಸಲೆನ್ಸ್ ಅವಾರ್ಡ್ ನೀಡಲಾಯಿತು.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ