AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ 10 ತಿಂಗಳಲ್ಲೇ ಭಾರತದಿಂದ ಸ್ಮಾರ್ಟ್​ಫೋನ್ ರಫ್ತು 1.50 ಲಕ್ಷ ಕೋಟಿ ರೂ ಮೈಲಿಗಲ್ಲು; ಹೊಸ ದಾಖಲೆ

Smartphone exports from India: ಈ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜನವರಿವರೆಗಿನ 10 ತಿಂಗಳಲ್ಲಿ ಭಾರತದಿಂದ 1.55 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್​ಗಳು ರಫ್ತಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸ್ಮಾರ್ಟ್​ಫೋನ್ ರಫ್ತಾಗಿದ್ದು ಲಕ್ಷ ಕೋಟಿ ರೂಗಿಂತಲೂ ಕಡಿಮೆ. ಆ ಇಡೀ ಹಣಕಾಸು ವರ್ಷದಲ್ಲಿ 1.31 ಲಕ್ಷ ಕೋಟಿ ರೂ ಮೊತ್ತದಷ್ಟು ಮಾತ್ರವೇ ಸ್ಮಾರ್ಟ್​ಫೋನ್ ರಫ್ತಾಗಿದ್ದು. ಈ ವರ್ಷ ಒಟ್ಟು ಸ್ಮಾರ್ಟ್​ಫೋನ್ ರಫ್ತು 1.70 ಲಕ್ಷ ಕೋಟಿ ರೂ ಆಸುಪಾಸು ಇರುವ ಸಾಧ್ಯತೆ ಇದೆ.

ಈ ವರ್ಷ 10 ತಿಂಗಳಲ್ಲೇ ಭಾರತದಿಂದ ಸ್ಮಾರ್ಟ್​ಫೋನ್ ರಫ್ತು 1.50 ಲಕ್ಷ ಕೋಟಿ ರೂ ಮೈಲಿಗಲ್ಲು; ಹೊಸ ದಾಖಲೆ
ಐಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 17, 2025 | 1:43 PM

Share

ನವದೆಹಲಿ, ಫೆಬ್ರುವರಿ 17: ಈ ಹಣಕಾಸು ವರ್ಷದ (2024-25) ಮೊದಲ 10 ತಿಂಗಳಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್​ಫೋನ್​ಗಳ ಮೌಲ್ಯ ಒಂದೂವರೆ ಲಕ್ಷ ಕೋಟಿ ರೂ ಗಡಿ ದಾಟಿದೆ. ವರದಿ ಪ್ರಕಾರ ಏಪ್ರಿಲ್​ನಿಂದ ಜನವರಿವರೆಗಿನ ಅವಧಿಯಲ್ಲಿ 1.55 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್​ಗಳು ರಫ್ತಾಗಿವೆ. ಜನವರಿ ತಿಂಗಳಲೊಂದರಲ್ಲೇ 25,000 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್ ರಫ್ತಾಗಿದೆ. ಕಳೆದ ವರ್ಷದ (2024) ಜನವರಿಗೆ ಹೋಲಿಸಿದರೆ ಈ ಬಾರಿ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಶೇ. 140ರಷ್ಟು ಹೆಚ್ಚಳ ಆಗಿದೆ.

2023-24ರ ಹಣಕಾಸು ವರ್ಷದಲ್ಲಿ 1.31 ಲಕ್ಷ ಕೋಟಿ ರೂ ಮೊತ್ತದಷ್ಟು ಸ್ಮಾರ್ಟ್​ಫೋನ್​ಗಳು ಭಾರತದಿಂದ ರಫ್ತಾಗಿದ್ದವು. 2023ರ ಏಪ್ರಿಲ್​ನಿಂದ 2024ರ ಜನವರಿವರೆಗಿನ 10 ತಿಂಗಳಲ್ಲಿ 99,120 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್​ಗಳು ಎಕ್ಸ್​ಪೋರ್ಟ್ ಆಗಿದ್ದವು. ಇದಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ 10 ತಿಂಗಳಲ್ಲಿ ಶೇ. 56ರಷ್ಟು ಹೆಚ್ಚು ರಫ್ತಾಗಿರುವುದು ಗಮನಾರ್ಹ. ಈ ಟ್ರೆಂಡ್ ಹೀಗೇ ಮುಂದುವರಿದರೆ ಈ ವರ್ಷದ ಸ್ಮಾರ್ಟ್​ಫೋನ್ ರಫ್ತು 2 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದರೂ ಅಚ್ಚರಿ ಇಲ್ಲ. ಆದರೆ ಸಚಿವ ಡಾ. ಎ ವೈಷ್ಣವ್ ಅಂದಾಜು ಪ್ರಕಾರ ಈ ಇಡೀ ಹಣಕಾಸು ವರ್ಷದಲ್ಲಿ ಸ್ಮಾರ್ಟ್​ಫೋನ್ ರಫ್ತು 1.70 ಲಕ್ಷ ಕೋಟಿ ರೂ ಅಥವಾ 20 ಬಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು.

ಇದನ್ನೂ ಓದಿ: ಜವಳಿ ಕ್ಷೇತ್ರಕ್ಕೆ 9 ಲಕ್ಷ ಕೋಟಿ ರೂ ರಫ್ತು ಟಾರ್ಗೆಟ್ ಇಟ್ಟ ಪಿಎಂ ಮೋದಿ

ಭಾರತದ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಐಫೋನ್​ನದ್ದು ಸಿಂಹಪಾಲು

ಭಾರತದಿಂದ ರಫ್ತಾಗುತ್ತಿರುವ ಸ್ಮಾರ್ಟ್​ಫೋನ್​ಗಳಲ್ಲಿ ಹೆಚ್ಚಿನವು ಆ್ಯಪಲ್ ಕಂಪನಿಯ ಐಫೋನ್​ಗಳೇ ಆಗಿದೆ. ಈ ಐಫೋನ್ ರಫ್ತಿನಲ್ಲಿ ಫಾಕ್ಸ್​ಕಾನ್ ಕೊಡುಗೆ ಶೇ. 70ರಷ್ಟಿದೆ. ಕೋಲಾರದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದ ಸಾಕಷ್ಟು ಐಫೋನ್​ಗಳು ವಿದೇಶಗಳಿಗೆ ಸರಬರಾಜಾಗುತ್ತಿವೆ.

ಐಫೋನ್ ಬಿಟ್ಟರೆ ಹೆಚ್ಚು ರಫ್ತಾಗುವ ಸ್ಮಾರ್ಟ್​ಫೋನ್ ಸ್ಯಾಮ್ಸುಂಗ್​ನದ್ದಾಗಿದೆ. ಭಾರತದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಸ್ಯಾಮ್ಸುಂಗ್ ಫೋನ್ ಪ್ರಮಾಣ ಶೇ. 20ರಷ್ಟಿದೆ.

ಇದನ್ನೂ ಓದಿ: ಉತ್ತಮ ರಾಜಕೀಯ ಸುಪರ್ದಿಯಲ್ಲಿ ಆರ್ಥಿಕತೆ; ಮಾರುಕಟ್ಟೆಯೂ ಕೂಡ ಚೇತರಿಕೆ ಹಾದಿಯಲ್ಲಿ: ವರದಿ

ದಶಕದ ಹಿಂದೆ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಭಾರತ 67ನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಬಳಸುವ ಸ್ಮಾರ್ಟ್​ಫೋನ್​ಗಳನ್ನು ಬೇರೆ ದೇಶಗಳಿಂದ ತರಿಸಿಕೊಳ್ಳಲಾಗುತ್ತಿತ್ತು. 2020ರಲ್ಲಿ ಪಿಎಲ್​ಐ ಸ್ಕೀಮ್ ಜಾರಿಗೆ ಬಂದ ಬಳಿಕ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಗಣನೀಯ ಏರಿಕೆ ಆಗಿದೆ. ವರ್ಷದಿಂದೊರ್ಷಕ್ಕೆ ರಫ್ತು ಹೆಚ್ಚಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ