AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Utility: ಶುರುವಾಯ್ತು ಬೇಸಿಗೆ ಕಾಲ: ಎಸಿ ಬಳಸುವಾಗ ಕರೆಂಟ್ ಬಿಲ್ ಕಡಿಮೆ ಮಾಡಲು ಇಲ್ಲಿದೆ ಟ್ರಿಕ್

ನೀವು ಬೇಸಿಗೆಯ ಸೆಖೆಯಿಂದ ಪಾರಾಗಲು ಹವಾನಿಯಂತ್ರಣವನ್ನು ಬಳಸುವುದಾದರೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಎಸಿ ಬಿಲ್ ತೆರಬೇಕಾಗುತ್ತದೆ ಎಂಬ ಭಯ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ವಿದ್ಯುತ್ ಉಳಿಸಲು ನಾವು ನಿಮಗೆ 5 ಸರಳ ಸಲಹೆಗಳು ಇಲ್ಲಿವೆ. ಏರ್ ಕಂಡಿಷನರ್ ಬಳಸುವಾಗ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ನೀವು ಈ ಸಲಹೆಗಳನ್ನು ಪ್ರಯತ್ನಿಸಬಹುದು.

Tech Utility: ಶುರುವಾಯ್ತು ಬೇಸಿಗೆ ಕಾಲ: ಎಸಿ ಬಳಸುವಾಗ ಕರೆಂಟ್ ಬಿಲ್ ಕಡಿಮೆ ಮಾಡಲು ಇಲ್ಲಿದೆ ಟ್ರಿಕ್
Ac Current Bill
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 18, 2025 | 11:48 AM

Share

ಬೇಸಿಗೆ ಕಾಲ ಶುರುವಾಗುತ್ತಿದೆ. ಧಗೆಯಿಂದ ರಕ್ಷಿಸಿಕೊಳ್ಳಲು ಕೆಲವರು ಕೂಲರ್‌ಗಳನ್ನು ಬಳಸುತ್ತಾರೆ ಮತ್ತು ಕೆಲವರು ಎಸಿ ಬಳಸುತ್ತಾರೆ. ಕೆಲವರು ಹೊಸ ಎಸಿಗಳನ್ನು ಖರೀದಿಸಲು ಪ್ರಾರಂಭಿಸಿದರೆ, ಇನ್ನು ಕೆಲವರು ಹಳೆಯ ಎಸಿಗಳನ್ನು ಸರ್ವೀಸ್ ಮಾಡಲು ಮತ್ತು ರಿಪೇರಿ ಮಾಡಲು ಪ್ರಾರಂಭಿಸಿದ್ದಾರೆ. ಈ ಎಲೆಕ್ಟ್ರಿಕ್ ವಸ್ತುಗಳು ಅದರಲ್ಲೂ ವಿಶೇಷವಾಗಿ ಏರ್ ಕಂಡೀಷನರ್ (AC) ನಿಮ್ಮ ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಎಸಿಗಳನ್ನು ಹಳೆಯ ತಲೆಮಾರುಗಳಿಗೆ ಹೋಲಿಸಿದರೆ ಕಡಿಮೆ ಕರೆಂಟ್ ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ, ರಾತ್ರಿ-ಹಗಲು ಎಸಿ ಆನ್ ಮಾಡುವುದರಿಂದ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ. ಬೇಸಿಗೆಯಲ್ಲಿ ಎಸಿ ಬಳಸುವುದರಿಂದ ಕರೆಂಟ್ ಬಿಲ್ ಹೆಚ್ಚಾಗದಂತೆ ಎಚ್ಚರ ವಹಿಸುವ ಸರಳ ಉಪಾಯ ಇಲ್ಲಿದೆ.

ನೀವು ಬೇಸಿಗೆಯ ಸೆಖೆಯಿಂದ ಪಾರಾಗಲು ಹವಾನಿಯಂತ್ರಣವನ್ನು ಬಳಸುವುದಾದರೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಎಸಿ ಬಿಲ್ ತೆರಬೇಕಾಗುತ್ತದೆ ಎಂಬ ಭಯ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ವಿದ್ಯುತ್ ಉಳಿಸಲು ನಾವು ನಿಮಗೆ 5 ಸರಳ ಸಲಹೆಗಳು ಇಲ್ಲಿವೆ. ಏರ್ ಕಂಡಿಷನರ್ ಬಳಸುವಾಗ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ನೀವು ಈ ಸಲಹೆಗಳನ್ನು ಪ್ರಯತ್ನಿಸಬಹುದು.

  1. ಸರಿಯಾದ ತಾಪಮಾನವನ್ನು ಆರಿಸಿ: ಎಸಿ ಬಳಸುವಾಗ ಜನರು ಸಾಮಾನ್ಯವಾಗಿ AC ತಾಪಮಾನವನ್ನು 16 ಡಿಗ್ರಿ ಸೆಲ್ಸಿಯಸ್‌ಗೆ ಹೊಂದಿಸುತ್ತಾರೆ. ಇದು ಉತ್ತಮ ಕೂಲಿಂಗ್ ಅನ್ನು ನೀಡುತ್ತದೆ ಎಂದು ಭಾವಿಸುತ್ತಾರೆ. ಆದರೆ, ಅದು ಹಾಗಲ್ಲ. ನೀವು ಕನಿಷ್ಟ ತಾಪಮಾನದಲ್ಲಿ AC ಅನ್ನು ಎಂದಿಗೂ ಹೊಂದಿಸಬಾರದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, ಮಾನವ ದೇಹಕ್ಕೆ ಸೂಕ್ತವಾದ ತಾಪಮಾನವು 24. ಈ ತಾಪಮಾನಕ್ಕೆ ಎಸಿಯನ್ನು ಅಡ್ಜಸ್ಟ್​ ಮಾಡಿದರೆ ಕರೆಂಟ್ ಕಡಿಮೆ ಸಾಕಾಗುತ್ತದೆ.
  2. ಪವರ್ ಬಟನ್ ಆಫ್ ಮಾಡಿ: ಎಸಿ ಸೇರಿದಂತೆ ಎಲೆಕ್ಟ್ರಿಕ್ ಉಪಕರಣವು ಬಳಕೆಯಲ್ಲಿಲ್ಲದಿದ್ದಾಗ ಯಾವಾಗಲೂ ಪವರ್ ಸ್ವಿಚ್ ಆಫ್ ಮಾಡಬೇಕು. ಹೆಚ್ಚಿನ ಜನರು ರಿಮೋಟ್‌ನಲ್ಲಿ ಮಾತ್ರ AC ಅನ್ನು ಸ್ವಿಚ್ ಆಫ್ ಮಾಡುತ್ತಾರೆ. ಆದರೆ ಈ ರೀತಿಯಾಗ ಕಂಪ್ರೆಸರ್ ಅನ್ನು ‘ಐಡಲ್ ಲೋಡ್’ ಗೆ ಹೊಂದಿಸಿದಾಗ ಬಹಳಷ್ಟು ವಿದ್ಯುತ್ ವ್ಯರ್ಥವಾಗುತ್ತದೆ.
  3. ಅತಿಯಾಗಿ ಎಸಿ ಬಳಸುವುದನ್ನು ತಪ್ಪಿಸಲು ಟೈಮರ್ ಬಳಸಿ: ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಲು ಒಂದು ಸ್ಮಾರ್ಟ್ ಮಾರ್ಗವೆಂದರೆ ನಿಮ್ಮ ಎಸಿಯಲ್ಲಿ ಟೈಮರ್ ಹೊಂದಿಸುವುದು. ಅದನ್ನು ಇಡೀ ದಿನ ಬಳಸುವ ಬದಲು ನಿಮಗೆ ಅಗತ್ಯವಿದ್ದಾಗ ಬಳಸಿ. ಟೈಮರ್ ಅನ್ನು 2-3 ಗಂಟೆಗಳ ಕಾಲ ಹೊಂದಿಸುವುದು ಯಾವಾಗಲೂ ಒಳ್ಳೆಯದು. ಇದು ಹವಾನಿಯಂತ್ರಣವನ್ನು ಅತಿಯಾಗಿ ಬಳಸುವುದನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯುತ್ ಬಿಲ್ ಕಡಿತಗೊಳಿಸುತ್ತದೆ.
  4. ಎಸಿಯನ್ನು ನಿಯಮಿತವಾಗಿ ಸರ್ವಿಸ್ ಮಾಡಿಸಿ: ನಿಮ್ಮ ಎಸಿ ಸರ್ವಿಸ್ ಮಾಡಿಸುತ್ತಿರುವುದು ಯಾವಾಗಲೂ ಒಳ್ಳೆಯದು. ಏಕೆಂದರೆ ಅದು ತಿಂಗಳುಗಳವರೆಗೆ ಬಳಕೆಯಲ್ಲಿಲ್ಲವೆಂದರೆ ಧೂಳು ಅಥವಾ ಇತರ ಕಣಗಳು ಯಂತ್ರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
  5. ಪ್ರತಿ ಬಾಗಿಲು ಮತ್ತು ಕಿಟಕಿಯನ್ನು ಸರಿಯಾಗಿ ಲಾಕ್ ಮಾಡಿ: ಎಸಿ ಬಳಸುವಾಗ ಯಾವುದೇ ಕಿಟಕಿಯ ಬಾಗಿಲು ಓಪನ್ ಇಲ್ಲದಂತೆ ಎಚ್ಚರ ವಹಿಸಿ. ನೀವು ಏರ್ ಕಂಡಿಷನರ್ ಅನ್ನು ಆನ್ ಮಾಡುವ ಮೊದಲು, ಕೋಣೆಯ ಪ್ರತಿಯೊಂದು ಕಿಟಕಿ, ಬಾಗಿಲು ಮುಚ್ಚಲು ಮರೆಯಬೇಡಿ. ಇದು ಕೋಣೆಯನ್ನು ತ್ವರಿತವಾಗಿ ತಂಪಾಗಿಸಲು ಸಹಾಯ ಮಾಡುತ್ತದೆ ಮತ್ತು ತಿಂಗಳ ಕೊನೆಯಲ್ಲಿ ನಿಮ್ಮ ವಿದ್ಯುತ್ ಬಿಲ್ ಅನ್ನು ಸಹ ಉಳಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!