Tech Tips: ಫೋಟೋ, ವಿಡಿಯೋ ತೆಗೆಯಲು ಸ್ಟೋರೇಜ್ ಸಾಕಾಗುತ್ತಿಲ್ವ?: ಈ ಟ್ರಿಕ್ ಫಾಲೋ ಮಾಡಿ
ನಮ್ಮಲ್ಲಿ ಹಲವರು ಸ್ಮಾರ್ಟ್ಫೋನ್ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ಗಳು, ಫೋಲ್ಡರ್ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ ಅನ್ನು ಕೂಡ ಫುಲ್ ಮಾಡಿಟ್ಟಿರುತ್ತಾರೆ. ಇಂತಹ ಸಮಯದಲ್ಲಿ ನೀವು ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೂ ಕೂಡ ನಿಮಗೆ ಸ್ಪೇಸ್ ಸಾಕಾಗದೆ ಕಿರಿಕಿರಿ ಆಗುವ ಸಂಭವ ಇದೆ.

ಇಂದು ಬಹುತೇಕ ಸ್ಮಾರ್ಟ್ಫೋನ್ಗಳ (Smartphone) ದರ ನಿಗದಿಯಾಗಿರುವುದು ಅದರ ಪ್ರೊಸೆಸರ್ ಹಾಗೂ ಸ್ಟೋರೇಜ್ ಆಯ್ಕೆಯ ಮೇಲೆ. ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಎಲ್ಲ ಆಂಡ್ರಾಯ್ಡ್ (Android) ಮತ್ತು ಐಫೋನ್ಗಳ ಪ್ರೊಸೆಸರ್, RAM ಮತ್ತು ಅಧಿಕ ಸ್ಟೋರೇಜ್ ಸಾಮರ್ಥ್ಯದಿಂದಾಗಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್ಫೋನ್ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ಗಳು, ಫೋಲ್ಡರ್ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ (Phone Storage) ಅನ್ನು ಕೂಡ ಫುಲ್ ಮಾಡಿಟ್ಟಿರುತ್ತಾರೆ. ಇಂತಹ ಸಮಯದಲ್ಲಿ ನೀವು ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೂ ಕೂಡ ನಿಮಗೆ ಸ್ಪೇಸ್ ಸಾಕಾಗದೆ ಕಿರಿಕಿರಿ ಆಗುವ ಸಂಭವ ಇದೆ. ಫೋನ್ ಸ್ಟೋರೇಜ್ ಸ್ಪೇಸ್ ಉಳಿಸಿದಷ್ಟು ನಿಮ್ಮ ಫೋನ್ ಹ್ಯಾಂಗ್ ಆಗುವುದು, ಸ್ಲೋ ಆಗುವುದರಿಂದ ತಪ್ಪಿಸಬಹುದು.
ಹಾಗಾದ್ರೆ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಸಲು ಅನುಸರಿಸಬೇಕಾದ ಕ್ರಮಗಳು ಏನು ಎಂಬುದನ್ನು ನೋಡೋಣ.
ಆನ್ ಲೈನ್ ಫೋಟೋ ಮತ್ತು ವಿಡಿಯೋಗಳನ್ನು ಸೇವ್ ಮಾಡಬೇಡಿ. ಮೊಬೈಲ್ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ಗೆ ಸ್ಥಳಾಂತರಿಸಬಹುದು. ಎಲ್ಲ ಗೂಗಲ್ ಅಕೌಂಟ್ ಜೊತೆ ಬಳಕೆದಾರರಿಗೆ 15GB ಫ್ರೀ ಸ್ಟೋರೇಜ್ ವ್ಯವಸ್ಥೆ ಇರುತ್ತದೆ. ಹಾಗಾಗಿ ನೀವು ಅಲ್ಲಿ ಫೋಟೋ, ವಿಡಿಯೋವನ್ನು ಸೇವ್ ಮಾಡಬಹುದು.
ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರು ಕೂಡ ವಾಟ್ಸ್ಆ್ಯಪ್ ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ವಾಟ್ಸ್ಆ್ಯಪ್ನ ಬಳಕೆಯಿಂದಲೂ ಕೂಡ ನಿಮ್ಮ ಸ್ಟೋರೇಜ್ ಸ್ಪೇಸ್ ಫುಲ್ ಆಗುತ್ತಾ ಬರುತ್ತದೆ. ಆದರಿಂದ ನೀವು ವಾಟ್ಸ್ಆ್ಯಪ್ ಬಳಸುವಾಗ ವಾಟ್ಸ್ಆ್ಯಪ್ ಸ್ಟೋರೇಜ್ ಮ್ಯಾನೇಜರ್ ಬಳಸುವುದು ಉತ್ತಮ. ಇದರಿಂದ ನಿಮ್ಮ ವಾಟ್ಸ್ಆ್ಯಪ್ಗೆ ಬರುವ ಫೋಟೋ, ಫೈಲ್‌ಗಳನ್ನು ಇನ್ಸಟಂಟ್ ಆಗಿ ಡಿಲೀಟ್ ಮಾಡಲು ಅನುಕೂಲವಾಗಲಿದೆ.
ಐಫೋನ್‌ನಿಂದ ವಿವೋ V50 ವರೆಗೆ: ಈ ಸ್ಮಾರ್ಟ್‌ಫೋನ್‌ಗಳು ಮುಂದಿನ ವಾರ ಬಿಡುಗಡೆಯಾಗಲಿವೆ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಿಗ್ ಸೈಜ್ ಪೈಲ್‌ಗಳನ್ನು ಸರ್ಚ್ ಮಾಡಿ ಅವುಗಳನ್ನು ಡಿಲೀಟ್ ಮಾಡಬಹುದು. ನಿಮಗೆ ಅನಗತ್ಯ ಎನಿಸುವ ಬಿಗ್ ಸೈಜ್ ಫೈಲ್‌ಗಳನ್ನು ಡಿಲೀಟ್ ಮಾಡಿದಾಗ ನಿಮಗೆ ಹೆಚ್ಚಿನ ಸ್ಟೋರೇಜ್ ಸ್ಪೇಸ್ ಉಳಿಯಲಿದೆ. 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ನಲ್ಲಿರುವ ಅಪ್ಲಿಕೇಷನ್ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಅದನ್ನು ನೀವು ಫೋನ್ ಸೆಟ್ಟಿಂಗ್ನಲ್ಲಿ ಅಪ್ಲಿಕೇಶನ್ಗೆ ಹೋಗಿ ಸುಲಭವಾಗಿ ತೆಗೆಯಬಹುದು.
ಅನೇಕರು ಮಾಡುವ ಬಹುಮುಖ್ಯ ತಪ್ಪೆಂದರೆ ಮೊಬೈಲ್ನಲ್ಲಿ ಬಳಸದೇ ಇರುವ ಕೆಲವು ಅಪ್ಲಿಕೇಷನ್ಗಳನ್ನು ಇಟ್ಟುಕೊಳ್ಳುವುದು. ಇಂತಹ ಅಪ್ಲಿಕೇಷನ್ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ. ಅಂತೆಯೆ ನೀವು ಓಟಿಟಿ ಆ್ಯಪ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಲ್ಲಿ ಅದರ cache ಕನಿಷ್ಠ ವಾರಕ್ಕೊಮ್ಮೆ ಕ್ಲೀಯರ್ ಮಾಡಿ. ಈ ಮೂಲಕ ಸ್ಟೋರೇಜ್ ಫುಲ್ ಆಗಿದ್ದರೆ ಸ್ಪೇಸ್ ಫ್ರೀ ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ