ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಅಗತ್ಯ ಫೀಚರ್ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಕೇವಲ ಮೆಸೇಜ್, ಫೋಟೋ, ಸ್ಟೇಟಸ್ನಲ್ಲಿ ಹೊಸ ಹೊಸ ಅಪ್ಡೇಟ್ ನೀಡುವುದು ಮಾತ್ರವಲ್ಲದೆ ಇತರೆ ವಲಯಗಳಿಂದಲೂ ಜನರಿಗೆ ಸಹಕಾರಿಯಾಗುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದೆ. ರೈಲ್ವೆ ಪ್ರಯಾಣಿಕರು ಇದೀಗ ವಾಟ್ಸ್ಆ್ಯಪ್ ಮೂಲಕ ಫುಡ್ ಆರ್ಡರ್ (Food Order) ಮಾಡಬಹುದು. ಮಾತ್ರವಲ್ಲದೆ ಆರ್ಡರ್ ಅನ್ನು ಲೈವ್ ಟ್ರ್ಯಾಕಿಂಗ್ ಆಡುವ ಅವಕಾಶದ ಜೊತೆ ತಮ್ಮ ಡೆಲಿವರಿಯನ್ನು ನೇರವಾಗಿ ಸೀಟುಗಳಿಗೆ ಪಡೆಯುವ ಆಯ್ಕೆ ನೀಡಲಾಗಿದೆ.
ಜಿಯೋ ಹ್ಯಾಪ್ಟಿಕ್, ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ರೊವೈಡರ್ ಮತ್ತು ಝೂಪ್ ಐರ್ಸಿಟಿಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಮೂಲಕ ನೀವು ರೈಲಿನಲ್ಲಿ ಪ್ರಯಾಣ ಮಾಡುವಾಗ ಆಹಾರವನ್ನು ಆರ್ಡರ್ ಮಾಡಿ ನೀವು ಕೂತಿದ್ದ ಜಾಗಕ್ಕೆ ತಂದುಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ರೈಲು ನಿಲ್ದಾಣಗಳ ಆಯ್ದ ರೆಸ್ಟೋರೆಂಟ್‌ಗಳಲ್ಲಿ ಪ್ರಯಾಣಿಕರು ತಮ್ಮ PNR ಸಂಖ್ಯೆಯನ್ನು ನಮೋದಿಸಿ ಆಹಾರವನ್ನು ಆರ್ಡರ್ ಮಾಡಬಹುದು.
ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ನೆಟ್‌ವರ್ಕ್ ಸಂಪರ್ಕದ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈಲು ಪ್ರಯಾಣದ ಸಂದರ್ಭ ಉತ್ತಮ ಗುಣಮಟ್ಟದ ಆಹಾರ ಕಲ್ಪಿಸಲು ಸಹಾಯ ಮಾಡುತ್ತದೆ. ನೀವು +91 7042062070 ನಂಬರ್ ನೊಂದಿಗೆ ವಾಟ್ಸ್ಆ್ಯಪ್ನಲ್ಲಿ ಜೂಪ್ನೊಂದಿಗೆ ಚಾಟ್ ಮಾಡಬಹುದು. ಆಹಾರ ಮಾರ್ಡರ್ ಮಾಡುವ ಕ್ರಮ ಇಲ್ಲಿದೆ.