ಮಾರುಕಟ್ಟೆಗೆ ದಿಢೀರ್ ಎಂಟ್ರಿಕೊಟ್ಟ ಹೊಸ ರಿಯಲ್ ಮಿ 12X ಸ್ಮಾರ್ಟ್​ಫೋನ್: ಬೆಲೆ ಎಷ್ಟು?

|

Updated on: Mar 22, 2024 | 2:01 PM

Realme 12X Smartphone Launched: ರಿಯಲ್ ಮಿ 12X ಸ್ಮಾರ್ಟ್​ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ಅನ್ನು ಹೊಂದಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ. ರಿಯಲ್ ಮಿ 12ಎಕ್ಸ್ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಮಾರುಕಟ್ಟೆಗೆ ದಿಢೀರ್ ಎಂಟ್ರಿಕೊಟ್ಟ ಹೊಸ ರಿಯಲ್ ಮಿ 12X ಸ್ಮಾರ್ಟ್​ಫೋನ್: ಬೆಲೆ ಎಷ್ಟು?
Realme 12X
Follow us on

ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ 12 ಸರಣಿಯ ಅಡಿಯಲ್ಲಿ ಹೊಸ ರಿಯಲ್ ಮಿ 12X (Realme 12X) ಸ್ಮಾರ್ಟ್​ಫೋನ್ ಅನ್ನು ಚೀನಾದಲ್ಲಿ ಅನಾವರಣಗೊಳಿಸಿದೆ. ಈ ಫೋನ್ ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ಅನ್ನು ನೀಡಲಾಗಿದೆ. 15W ವೈರ್ಡ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಕೂಡ ಇದೆ. ಮುಂದಿನ ದಿನಗಳಲ್ಲಿ ಈ ಫೋನ್ ಭಾರತಕ್ಕೂ ಕಾಲಿಡಲಿದೆ. ರಿಯಲ್ ಮಿ 12ಎಕ್ಸ್ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ರಿಯಲ್ ಮಿ 12X ಬೆಲೆ:

ರಿಯಲ್ ಮಿ 12X ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ ಮೂಲ 12GB RAM + 256GB ಸ್ಟೋರೇಜ್ ರೂಪಾಂತರಕ್ಕಾಗಿ CNY 1,399 (ಭಾರತದಲ್ಲಿ ಸುಮಾರು ರೂ. 16,000 ಇರಬಹುದು). ಅಂತೆಯೆ ಈ ಫೋನ್ 12GB + 512GB ಮಾದರಿಯಲ್ಲಿ ಬರುತ್ತದೆ, ಇದರ ಬೆಲೆ CNY 1,599 (ಸುಮಾರು ರೂ. 18,000). ಇದು ಪ್ರಸ್ತುತ ಚೀನಾದಲ್ಲಿ ಕಪ್ಪು ಮತ್ತು ನೀಲಿ ಬರ್ಡ್ ಶೇಡ್‌ಗಳಲ್ಲಿ ಮಾರಾಟಕ್ಕಿದೆ.

ಸದ್ದಿಲ್ಲದೆ ಬಿಡುಗಡೆ ಆಯಿತು ಒನ್​ಪ್ಲಸ್​ನ ಹೊಸ ಏಸ್ 3V ​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?

ರಿಯಲ್ ಮಿ 12X ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೊ) ರಿಯಲ್ ಮಿ 12X ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5.0 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) LCD ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 625 nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಯಿಂದ ಚಾಲಿತವಾಗಿದೆ, ಜೊತೆಗೆ 12GB RAM ಇರುತ್ತದೆ. ಡೈನಾಮಿಕ್ RAM ವೈಶಿಷ್ಟ್ಯದೊಂದಿಗೆ, ಲಭ್ಯವಿರುವ ಮೆಮೊರಿಯನ್ನು 24GB ವರೆಗೆ ವಿಸ್ತರಿಸಬಹುದು.

ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯದ ರಿಯಲ್ ಮಿ ನಾರ್ಜೊ 70 ಪ್ರೊ ಇಂದಿನಿಂದ ಖರೀದಿಗೆ ಲಭ್ಯ

ಕ್ಯಾಮೆರಾ ವಿಚಾರಕ್ಕೆ ಬಂದರೆ, ರಿಯಲ್ ಮಿ 12X 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ, ಇದು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಒಳಗೊಂಡಿದೆ. ಈ ಫೋನ್ 512GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ. 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ