ರಿಯಲ್​ಮಿ 8 5G ಫೋನ್ ಭಾರತದಲ್ಲಿ ಬಿಡುಗಡೆ, ಬೆಲೆ ರೂ. 14,999ರಿಂದ ಆರಂಭ

|

Updated on: Apr 22, 2021 | 8:17 PM

Realme 8 5G phone: ರಿಯಲ್​ಮಿ 8 5G ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಏಪ್ರಿಲ್ 28ನೇ ತಾರೀಕಿನಿಂದ ಮಾರಾಟ ಆರಂಭವಾಗಲಿದೆ. ಈ ಫೋನ್​ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್​ಮಿ 8 5G ಫೋನ್ ಭಾರತದಲ್ಲಿ ಬಿಡುಗಡೆ, ಬೆಲೆ ರೂ. 14,999ರಿಂದ ಆರಂಭ
ರಿಯಲ್​ಮಿ 8 5G ಮೊಬೈಲ್ ಫೋನ್
Follow us on

ರಿಯಲ್​ಮಿ ಕಂಪೆನಿಯು ಹೊಸ 5G ವರ್ಷನ್ ರಿಯಲ್​ಮಿ 8 ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್​ಫೋನ್​ನಿಂದ ಸಂಖ್ಯೆಯ ಸರಣಿಯಲ್ಲಿ (ನಂಬರ್ ಸೀರೀಸ್) ಇದು ಮೊದಲ 5G ಸಾಧನವಾಗಿದೆ. ರಿಯಲ್​ಮಿ 8 5G ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್​ನೊಂದಿಗೆ ಬರುತ್ತದೆ. ಜತೆಗೆ ಹೊಸ ಚಿಪ್​ಸೆಟ್​ನೊಂದಿಗೆ ಬಂದಿರುವ ಮೊದಲ ಸ್ಮಾರ್ಟ್​ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ಹೊಸ ಸ್ಮಾರ್ಟ್​ಫೋನ್ 5G ಕನೆಕ್ಟಿವಿಟಿ ಒದಗಿಸಲಿದ್ದು, ಮಧ್ಯಮ- ರೇಂಜ್​ನ ಸ್ಮಾರ್ಟ್​ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಅಂದ ಹಾಗೆ ಹೊಸ ರಿಯಲ್​ಮಿ 8 5G ಮೊಬೈಲ್ ಫೋನ್ ಎರಡು ಬಗೆಯ ಸಂಗ್ರಹ ಸಾಮರ್ಥ್ಯದೊಂದಿಗೆ ಬರುತ್ತದೆ. 4GB RAM ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯ ಇರುವ ಫೋನ್​ ಬೆಲೆ 14,999 ರೂಪಾಯಿ ಇದೆ. ಇನ್ನು 8GB RAM ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯದ ಫೋನ್​ನ ಬೆಲೆ ರೂ. 16,999 ಇದೆ.

ರಿಯಲ್​ಮಿ 8 5G ಫೋನ್​ನ ಮೊದಲ ಮಾರಾಟವು ಏಪ್ರಿಲ್ 28ನೇ ತಾರೀಕಿನ ಮಧ್ಯಾಹ್ನ 12 ಗಂಟೆಯ ಮೇಲೆ realme.com, flipkart.com ಮತ್ತು ಇತರ ಮುಖ್ಯ ಚಾನೆಲ್​ನಲ್ಲಿಆರಂಭವಾಗುತ್ತದೆ. ಇನ್ನು ಈ ಫೋನ್ ಸೂಪರ್​ಸಾನಿಕ್ ಬ್ಲ್ಯೂ ಮತ್ತು ಸೂಪರ್​ಸಾನಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ ಇದೆ.

ವೈಶಿಷ್ಟ್ಯಗಳು:
ಪ್ರೊಸೆಸರ್
ರಿಯಲ್​ಮಿ 8 5G ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ ಇದ್ದು, ಅದು ಆರ್ಮ್ ಕಾರ್ಟೆಕ್ಸ್- A76 ಕೋರ್​ಗಳೊಂದಿಗೆ ಸೇರಿ ಆಕ್ಟಾಕೋರ್​ ಸಿಪಿಯು ಆಪರೇಟಿಂಗ್ 2.2 GHzವರೆಗೆ ಬರುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 700ಯಿಂದ 7nm ಪ್ರೊಡಕ್ಷನ್ ಪ್ರೊಸೆಸರ್​ನೊಂದಿಗೆ ಬರುತ್ತದೆ. ಇದು 8nm ಪ್ರೊಸೆಸ್​ಗಿಂತ ಶೇಕಡಾ 28ರ ತನಕ ಪವರ್ ಎಫಿಷಿಯೆಂಟ್ ಆಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700ನಲ್ಲಿ ಆರ್ಮ್ Mali- G57 MC2 GPU ಜತೆಗೆ 950MHz ಕ್ಲಾಕ್ ವೇಗ ಇದೆ ಮತ್ತು 90Hz ಹೈ ರಿಫ್ರೆಷ್ ರೇಟ್ ಸ್ಕ್ರೀನ್ ಟೆಕ್ನಾಲಜಿ ಇದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ 5G ಡ್ಯುಯಲ್ ಸಿಮ್​ನೊಂದಿಗೆ ಬರುತ್ತದೆ.

ಬ್ಯಾಟರಿ
ರಿಯಲ್​ಮಿ 8 5G ಫೋನ್ 5000 mAh ಬ್ಯಾಟರಿ ಜತೆ, 18W ಟೈಪ್-ಸಿ ಶೀಘ್ರ ಚಾರ್ಜ್​ನೊಂದಿಗೆ, ಸ್ಮಾರ್ಟ್ 5G ಪವರ್ ಸೇವಿಂಗ್ ಆಯ್ಕೆ ಜತೆಗೆ ಬರುತ್ತದೆ. ಇದರಿಂದ ಸಿಗ್ನಲ್ ಅನ್ನು 4G ಅಥವಾ 5G ಎಂದು ಬದಲಾಯಿಸಿಕೊಳ್ಳಲು ಅನುಕೂಲ ಆಗುತ್ತದೆ. ಕಂಪೆನಿ ಹೇಳುವ ಪ್ರಕಾರ, ಈ ಫೀಚರ್ ಇಲ್ಲದ ಫೋನ್​ಗಳಿಗಿಂತ ಶೇಕಡಾ 30ರಷ್ಟು ಕಡಿಮೆ ಪವರ್ ಇದರಲ್ಲಿ ಬಳಕೆ ಆಗುತ್ತದೆ.

ಡಿಸ್​ಪ್ಲೇ
ರಿಯಲ್​ಮಿ 8 5G ಫೋನ್ 6.5 ಇಂಚು ಡಿಸ್​ಪ್ಲೇ ಜತೆಗೆಗೆ 90Hz ರಿಫ್ರೆಷ್ ಮತ್ತು ಗರಿಷ್ಠ 180Hz ದರದಲ್ಲಿ ಬಂದಿದೆ. ಈ ಫೋನ್ FHD+ ರೆಸಲ್ಯೂಷನ್ ಜತೆಗೆ ಗರಿಷ್ಠ ಬ್ರೈಟ್​ನೆಸ್ 600 nitsನೊಂದಿಗೆ ಬರುತ್ತದೆ.

ಕ್ಯಾಮೆರಾ
ರಿಯಲ್​ಮಿ 8 5G ಫೋನ್ 48MP ಕ್ಯಾಮೆರಾ, B&W ಪೋರ್ಟ್ರೈಟ್ ಲೆನ್ಸ್, ಮತ್ತು ಮ್ಯಾಕ್ರೋ ಲೆನ್ಸ್ ಇದೆ. ಪ್ರಾಥಮಿಕ ಲೆನ್ಸ್ 48MP ಕ್ಯಾಮೆರಾ ಮತ್ತು F 1.8 ಅಪರ್ಚರ್, 80 ಡಿಗ್ರಿ FOV, ಮತ್ತು 6P ಲೆನ್ಸ್ ಇದೆ. B&W ಪೋರ್ಟ್ರೈಟ್ ಲೆನ್ಸ್ ಹೊಸ ಕಲರ್ ಫಿಲ್ಟರ್ ವ್ಯವಸ್ಥೆಯೊಂದಿಗೆ ಬರಲಿದ್ದು, ಫೋನ್​ನಲ್ಲಿ 4 ಸೆಂ.ಮೀ. ಮ್ಯಾಕ್ರೋ ಲೆನ್ಸ್ ಇದೆ. ರಿಯಲ್​ಮಿ 8 5G ಫೋನ್ 16MP ಸೆಲ್ಫಿ ಕ್ಯಾಮೆರಾ ಜತೆಗೆ F2.0 ಅಪರ್ಚರ್​ನೊಂದಿಗೆ ಬರುತ್ತದೆ.

ಇನ್ನು ಫೋನ್​ನ ಪಕ್ಕದಲ್ಲಿ ಫಿಂಗರ್​ಪ್ರಿಂಟ್ ಸ್ಕ್ಯಾನರ್ ಇದ್ದು, ಇದರಿಂದ ಪವರ್ ಬಟನ್ ಮತ್ತು ರೆಕಗ್ನಿಷನ್ ಮಾಡ್ಯುಲ್​ಗಳು ಕಾರ್ಯ ನಿರ್ವಹಿಸುತ್ತವೆ.

ಇದನ್ನೂ ಓದಿ: Realme X7 Series Launch | ಭಾರತದಲ್ಲಿ ಲಾಂಚ್​ ಆದ ರಿಯಲ್​ಮಿ ಎಕ್ಸ್​​7: ಕೇವಲ 35 ನಿಮಿಷಗಳಲ್ಲಿ ಫುಲ್​ ಚಾರ್ಜ್

(Realme 8 5G smartphone launched in India. Price, specification, colour and other details related to this phone is here)