ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಿಕಾ ಕಂಪೆನಿ ರಿಯಲ್ ಮಿ (Realme) ತನ್ನ ಐದು ಫೋನುಗಳ ಬೆಲೆಯನ್ನು ದಿಢೀರ್ ಹೆಚ್ಚಿಸಿದೆ. ರಿಯಲ್ ಮಿ 8, ರಿಯಲ್ ಮಿ 8 5G, ರಿಯಲ್ ಮಿ ಸಿ11 (2021), ರಿಯಲ್ ಮಿ ಸಿ21 ಮತ್ತು ರಿಯಲ್ ಮಿ ಸಿ25ಎಸ್ ಸ್ಮಾರ್ಟ್ಫೊನ್ಗಳ ಬೆಲೆಯಲ್ಲಿ 1,500 ರೂ. ವರೆಗೆ ಹೆಚ್ಚಳ ಮಾಡಿದೆ. ಈಗೀಗ ಕಡಿಮೆ ಬೆಲೆಗೆ ಆಕರ್ಷಕ ಫೋನುಗಳನ್ನು ಬಿಡುಗಡೆ ಮಾಡುತ್ತಿರುವ ರಿಯಲ್ ಮಿ ಕಂಪೆನಿ ಭಾರತದ ನೆಚ್ಚಿನ ಬ್ರ್ಯಾಂಡ್ ಕೂಡ ಆಗಿದೆ. ಹೀಗಾಗಿ ದೇಶದಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ ಫೋನುಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.
ರಿಯಲ್ ಮಿ 8:
ರಿಯಲ್ ಮಿ 8 ಸ್ಮಾರ್ಟ್ಫೋನಿನ 4GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯ ಫೊನಿನ ಬೆಲೆ 14,499 ರೂ. ಯಿಂದ 15,999 ರೂ. ಹೆಚ್ಚಿಸಲಾಗಿದೆ. 6GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 16,999 ರೂ. ಹಾಗೂ 8GB RAM ಮತ್ತು 128GB ಸ್ಟೋರೆಜ್ಗೆ 17,999 ರೂ. ನಿಗದಿ ಮಾಡಲಾಗಿದೆ.
ರಿಯಲ್ ಮಿ 8 5G:
ರಿಯಲ್ ಮಿ 8 5G ಸ್ಮಾರ್ಟ್ಫೋನಿನ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯ ಫೊನಿನ ಬೆಲೆ 13,999 ರೂ. ಯಿಂದ 15,499 ರೂ. ಹೆಚ್ಚಿಸಲಾಗಿದೆ. 4GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 16,499 ರೂ. ಹಾಗೂ 8GB RAM ಮತ್ತು 128GB ಸ್ಟೋರೆಜ್ಗೆ 18,499 ರೂ. ನಿಗದಿ ಮಾಡಲಾಗಿದೆ.
ರಿಯಲ್ ಮಿ C21 ಮತ್ತು ರಿಯಲ್ ಮಿ C21 (2021):
ರಿಯಲ್ ಮಿ C21 ಮತ್ತು ರಿಯಲ್ ಮಿ C21 (2021) ಸ್ಮಾರ್ಟ್ಫೋನ್ ಬೆಲೆಯಲ್ಲಿ 500 ರೂ. ಹೆಚ್ಚಿಸಲಾಗಿದೆ. ಇದರ ಪ್ರಕಾರ ಈ ಫೋನಿನ 3GB RAM ಮತ್ತು 32GB ಸ್ಟೋರೆಜ್ ಸಾಮರ್ಥ್ಯ ಫೊನಿನ ಬೆಲೆ 8,499 ರೂ. ಯಿಂದ 8,999 ರೂ. ಹೆಚ್ಚಿಸಲಾಗಿದೆ. 4GB RAM ಮತ್ತು 64GB ಸ್ಟೋರೆಜ್ ಆಯ್ಕೆಗೆ 9,499 ರೂ. ಯಿಂದ 9,999 ರೂ. ಅಧಿಕ ಮಾಡಲಾಗಿದೆ.
ರಿಯಲ್ ಮಿ C25s:
ರಿಯಲ್ ಮಿ C25s ಸ್ಮಾರ್ಟ್ಫೋನಿನ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯ ಫೊನಿನ ಬೆಲೆ 10,499 ರೂ. ಯಿಂದ 10,999 ರೂ. ಹೆಚ್ಚಿಸಲಾಗಿದೆ. 4GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 11,999 ರೂ. ನಿಗದಿ ಮಾಡಲಾಗಿದೆ.
WhatsApp ಬಳಕೆದಾರರೇ ಎಚ್ಚರ: ಈ ಒಂದು ಸೆಟ್ಟಿಂಗ್ಸ್ ಬದಲಿಸದಿದ್ರೆ ನಿಮ್ಮ ಖಾತೆ ಕೂಡ ಹ್ಯಾಕ್ ಆಗುತ್ತೆ
Phonepe: ಫೋನ್ ಪೇ ಯಲ್ಲಿ ನಿಮ್ಮ ಯುಪಿಐ ಪಿನ್ ಬದಲಾಯಿಸಲು ಈ ಕ್ರಮ ಅನುಸರಿಸಿ
(Realme 8 Realme 8 5G Realme C11 2021 Realme C21 Realme C25s Price in India Increased by Up to Rs 1500)