ರಿಯಲ್​ ಮಿಯಿಂದ ಕೇವಲ 6,990 ರೂ. ಗೆ ಆಕರ್ಷಕ ಹೊಸ ಸ್ಮಾರ್ಟ್​​ಫೋನ್ ರಿಲೀಸ್

| Updated By: Vinay Bhat

Updated on: Jul 10, 2021 | 6:12 PM

ರಿಯಲ್ ಮಿ C11 2021 ಸ್ಮಾರ್ಟ್​ಫೋನ್ 6.5 ಇಂಚಿನ ದೊಡ್ಡ ಡಿಸ್​ಪ್ಲೇ ಹೊಂದಿದೆ. UNISOC’s SC9863A ಆಕ್ಟಾಕೋರ್ ಪ್ರೊಸೆಸರ್​ನ ಬೆಂಬಲ ಪಡೆದಿದೆ.

ರಿಯಲ್​ ಮಿಯಿಂದ ಕೇವಲ 6,990 ರೂ. ಗೆ ಆಕರ್ಷಕ ಹೊಸ ಸ್ಮಾರ್ಟ್​​ಫೋನ್ ರಿಲೀಸ್
Realme C11 2021
Follow us on

ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಚೀನಾ ಮೂಲದ ಪ್ರಸಿದ್ಧ ರಿಯಲ್ ಮಿ ಕಂಪೆನಿ ಸದ್ಯ ತನ್ನ ಸಿ ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ರಿಯಲ್ ಮಿ ಇಂದು ಭಾರತದಲ್ಲಿ ರಿಯಲ್ ಮಿ C11 2021 ಸ್ಮಾರ್ಟ್​ಫೋನನ್ನು ಲಾಂಚ್ ಮಾಡಿದೆ. ಇದು ರಿಯಲ್ ಮಿ C11 ಫೋನಿನ ನೂತನ ಎಡಿಷನ್ ಆಗಿದ್ಬದು, ಜೆಟ್ ಬೆಲೆಯನ್ನು ನಿಗದಿ ಮಾಡಲಾಗಿದೆ.

2GB RAM ಮತ್ತು 32GB ಏಕೈಕ ಸ್ಟೋರೆಜ್ ಆಯ್ಕೆಯಲ್ಲಿ ರಿಯಲ್ ಮಿ C11 2021 ಸ್ಮಾರ್ಟ್​ಫೋನ್ ಖರೀದಿಗೆ ಸಿಗುತ್ತಿದೆ. ಇದರ ಬೆಲೆ 6,990 ರೂ. ಆಗಿದೆ. ಕೂಲ್ ಗ್ರೀನ್ ಮತ್ತು ಕೂಲ್ ಗ್ರೇ ಕಲರ್​ನಲ್ಲಿ ಇದು ಲಭ್ಯವಿದೆ. ರಿಯಲ್​ ಮಿಯ ಅಧಿಕೃತ ವೆಬ್​ಸೈಟ್ ಮತ್ತು ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಕಾಣುತ್ತಿದೆ.

ರಿಯಲ್ ಮಿ C11 ಸ್ಮಾರ್ಟ್​ಫೋನ್ 6.5 ಇಂಚಿನ ದೊಡ್ಡ ಡಿಸ್​ಪ್ಲೇ ಹೊಂದಿದೆ. UNISOC’s SC9863A ಆಕ್ಟಾಕೋರ್ ಪ್ರೊಸೆಸರ್​ನ ಬೆಂಬಲ ಪಡೆದಿದೆ. 8 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದ್ದು, 1080P ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ವಿಶೇಷವಾಗಿ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ರಿಯಲ್ ಮಿ C11 2021 ಆಫರ್: ಫ್ಲಿಪ್​ಕಾರ್ಟ್​ನಲ್ಲಿ ಈ ಫೋನ್ ಬಂಪರ್ ಆಫರ್​ನೊಂದಿಗೆ ಲಭ್ಯವಿದೆ. ಫ್ಲಿಪ್​ಕಾರ್ಟ್​ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಟ್​ ಮೂಲಕ ಖರೀದಿ ಮಾಡಿದರೆ ಶೇ. 5 ರಷ್ಟು ಅನಿಯಮಿತ ಕ್ಯಾಶ್​ಬ್ಯಾಕ್ ಸಿಗಲಿದೆ. ಬ್ಯಾಂಕ್ ಆಫರ್ ಬರೋಡ ಡೆಬಿಟ್ ಕಾರ್ಡ್ ಮೂಲಕ ಮೊದಲ ಬಾರಿ ಖರೀದಿಸಿದರೆ ಶೇ. 10 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಇದರ ಜೊತೆಗೆ ಇನ್ನಷ್ಟು ಅನೇಕ ಆಫರ್​ಗಳಿವೆ. ಐಸಿಐಸಿಐ ಬ್ಯಾಂಕ್​ನ ಅಮೆಕ್ಸ್ ನೆಟ್​ವರ್ಕ್​ ಮೂಲಕ ಈ ಫೋನನ್ನು ಮೊದಲ ಬಾರಿಗೆ ಖರೀದಿ ಮಾಡಿದರೆ ಬರೋಬ್ಬರಿ ಶೇ. 20 ರಷ್ಟು ರಿಯಾಯಿತಿ ದರದಲ್ಲಿ ನಿಮ್ಮದಾಗಿಸಬಹುದು.

ರಿಯಲ್ ಮಿ ಇತ್ತೀಚೆಗಷ್ಟೆ ಮಾರುಕಟ್ಟೆಗೆ Dizo  ಎಂಬ ಹೊಸ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಅಡಿಯಲ್ಲಿ ಡಿಜೊ ವಯರ್​ಲೆಸ್ ಬ್ಲೂಟೂತ್ ಇಯರ್​ಫೋನ್ ಮತ್ತು ಡಿಜೊ ಗೋಪ್ಯಾಡ್ಸ್​ ಡಿ ಟ್ರೂ ವಯರ್​ಲೆಸ್ ಇಯರ್​ಬರ್ಸ್ ಅನ್ನು ಲಾಂಚ್ ಮಾಡಿದೆ.

7000mAh ಬ್ಯಾಟರಿ, 64MP ಕ್ಯಾಮೆರಾ: 30,000 ರೂ. ನ ಈ ಫೋನನ್ನು ಕೇವಲ 4,700 ರೂ. ಗೆ ಖರೀದಿಸಿ

Jio-Airtel-Vi ಗ್ರಾಹಕರಿಗೆ ಬಂಪರ್ ಬೆನಿಫಿಟ್: ಪ್ರತಿದಿನ 2GB ಡೇಟಾ, ಬರೋಬ್ಬರಿ 56 ದಿನ ವ್ಯಾಲಿಡಿಟಿ

Published On - 6:10 pm, Sat, 10 July 21