ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ಫೊನ್ಗಳನ್ನು ಪರಿಚಯಿಸಿ ಸೈ ಎನಿಸಸಿಕೊಂಡಿರುವ ರಿಯಲ್ ಮಿ ಕಂಪೆನಿ ಇದೀಗ ಭಾರತದಲ್ಲಿ ಹೊಸ ರಿಯಲ್ ಮಿ ಸಿ21ವೈ (Realme C21Y) ಫೋನನ್ನು ಅನಾವರಣ ಮಾಡಿದೆ. ಬಲಿಷ್ಠ 5000mAh ಬ್ಯಾಟರಿ ಸಾಮರ್ಥ್ಯ, ತ್ರಿವಳಿ ಕ್ಯಾಮೆರಾ ಸೇರಿದಂತೆ ಅತ್ಯುತ್ತಮ ಫೀಚರ್ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಅತಿ ಕಡಿಮೆ ಬೆಲೆಗೆ ಲಭ್ಯವಿದ್ದು, ಇಂದು ಮಧ್ಯಾಹ್ನ 12:30ಕ್ಕೆ ಬಿಡುಗಡೆ ಆಗಿದೆ.
ಒಟ್ಟು ಎರಡು ಆಯ್ಕೆಯಲ್ಲಿ ರಿಯಲ್ ಮಿ C21Y ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. 3GB RAM ಮತ್ತು 32GB ಸ್ಟೋರೆಜ್ ಆಯ್ಕೆಯ ಫೋನಿಗೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. 4GB RAM ಮತ್ತು 64GB ಸ್ಟೋರೆಜ್ ಆಯ್ಕೆಗೆ 9,999 ರೂ. ಇದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಸೇರಿದಂತೆ ರಿಯಲ್ ಮಿಯ ಅಧಿಕೃತ ವೆಬ್ಸೈಟ್ ಮತ್ತು ಆಯ್ದ ಆಫ್ಲೈನ್ ಸ್ಟೋರ್ಗಳಲ್ಲಿ ಈ ಫೋನ್ ಆಗಸ್ಟ್ 30 ರಿಂದ ಮಾರಾಟವಾಗುತ್ತಿದೆ.
Making a grand entry, the #realmeC21Y has arrived!
✅5000mAh Massive Battery
✅16.5cm (6.5″) Large Display
✅Instant Fingerprint Sensor
✅13MP AI Triple Camera
& much more!Starting at ₹8,999.
First Sale at 12 PM on 30th August. https://t.co/WFXzcS07l4 pic.twitter.com/nY5JHRelbM— realme (@realmeIndia) August 23, 2021
Realme C21Y ಸ್ಮಾರ್ಟ್‌ಫೋನ್ 1600×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾಕೋರ್ ಯುನಿಸೆಕ್ T610 SoC ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 11 ಬೆಂಬಲ ಪಡೆದುಕೊಂಡಿದೆ.
ಇನ್ನೂ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಎರಡನೇ ಮತ್ತು ಮೂರನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆ. ವಿಶೇಷವಾಗಿ ಕ್ಯಾಮೆರಾದಲ್ಲಿ ಸ್ಲೋ ಮೋಷನ್, ಸೂಪರ್ ನೈಟ್ ಮೋಡ್, ಕ್ರೋಮ್ ಬೂಸ್ಟ್ ಸೇರಿದಂತೆ 1080p ವಿಡಿಯೋ ರೆಕಾರ್ಡಿಂಗ್ ಆಯ್ಕೆ ನೀಡಲಾಗಿದೆ.
5,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇದರೊಂದಿಗೆ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0 ಮತ್ತು 256GB ವರೆಗಿನ ಮೈಕ್ರೊ ಎಸ್ಡಿ ಕಾರ್ಡ್ ಅಳವಡಿಸಬಹುದಾಗಿದೆ.
ಭಾರತದಲ್ಲಿ ರಿಲೀಸ್ ಆಗಿದ್ದರೂ ಖರೀದಿಗೆ ಸಿಗುತ್ತಿಲ್ಲ ಮೋಟೋ ಎಡ್ಜ್ 20 ಸರಣಿ: ಕಾರಣ ತಿಳಿಸಿದ ಕಂಪೆನಿ
Mi 11T Pro: ಸ್ನಾಪ್ಡ್ರಾಗನ್ 888, 120W ಫಾಸ್ಟ್ ಚಾರ್ಜ್: ಶವೋಮಿಯಿಂದ ಹೊಸ ಪವರ್ಫುಲ್ ಸ್ಮಾರ್ಟ್‌ಫೋನ್!
(Realme C21Y entry-level new smartphone launched in India Price specs and other details here)