Disney+ Hotstar: ಐಪಿಎಲ್​ಗೂ ಮುನ್ನ ರಿಚಾರ್ಜ್ ದರ ಹೆಚ್ಚಿಸಿದ ಡಿಸ್ನಿ + ಹಾಟ್‌ಸ್ಟಾರ್

IPL 2021: ಮೂರು ಹೊಸ ರಿಚಾರ್ಜ್​ ಯೋಜನೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಈ ಹೊಸ ಯೋಜನೆಗಳು ಎಲ್ಲಾ ಹೊಸ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಡಿಸ್ನಿ + ಹಾಟ್‌ಸ್ಟಾರ್ ರಿಚಾರ್ಜ್​ ಪ್ಲ್ಯಾನ್​ಗಳು ಈ ಕೆಳಗಿನಂತಿವೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 23, 2021 | 7:47 PM

ಜನಪ್ರಿಯ OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಹೊಸ ರಿಚಾರ್ಜ್​ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ಸೆಪ್ಟೆಂಬರ್​ 1 ರಿಂದ ಈ ರಿಚಾರ್ಜ್​ ಯೋಜನೆಗಳು ಚಾಲನೆಗೆ ಬರಲಿದೆ. ಸೆಪ್ಟೆಂಬರ್ 19 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಆರಂಭವಾಗುತ್ತಿದ್ದು, ಇದೇ ಕಾರಣದಿಂದ ಡಿಸ್ನಿ+ಹಾಟ್​ಸ್ಟಾರ್ ತನ್ನ ರಿಚಾರ್ಜ್​ ಪ್ಲ್ಯಾನ್​ಗಳನ್ನು ಬದಲಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

1 / 5
ಏಕೆಂದರೆ ಈ ಹಿಂದೆ 399 ರೂ. ರಿಚಾರ್ಜ್​ ಪ್ಲ್ಯಾನ್​ನಲ್ಲಿ​ ಐಪಿಎಲ್​ ಲೈವ್ ವೀಕ್ಷಿಸಬಹುದಾಗಿತ್ತು. ಆದರೀಗ 399 ರೂ. ಪ್ಲ್ಯಾನ್​ ಅನ್ನು  ಡಿಸ್ನಿ + ಹಾಟ್‌ಸ್ಟಾರ್ ನಿಲ್ಲಿಸಿದ್ದು, ಅದರ ಬದಲಿಗೆ ಮೂರು ಹೊಸ ರಿಚಾರ್ಜ್​ ಯೋಜನೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಈ ಹೊಸ ಯೋಜನೆಗಳು ಎಲ್ಲಾ ಹೊಸ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.   ಡಿಸ್ನಿ + ಹಾಟ್‌ಸ್ಟಾರ್ ರಿಚಾರ್ಜ್​ ಪ್ಲ್ಯಾನ್​ಗಳು ಈ ಕೆಳಗಿನಂತಿವೆ.

2 / 5
499 ರೂ. ಯೋಜನೆ: ಪ್ರಸ್ತುತ   ಡಿಸ್ನಿ + ಹಾಟ್‌ಸ್ಟಾರ್​ನ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅಂದರೆ 499 ರೂ. ಈ ಪ್ಲ್ಯಾನ್​ ರಿಚಾರ್ಜ್​ ಮಾಡಿದ್ರೆ ನೀವು HD ಸ್ಟ್ರೀಮಿಂಗ್ ಗುಣಮಟ್ಟದಲ್ಲಿ ಮಾತ್ರ ಲೈವ್ ಹಾಗೂ ಮನರಂಜನಾ ವಿಡಿಯೋಗಳನ್ನು ವೀಕ್ಷಿಸಬಹುದು. ಅಲ್ಲದೆ ಇದು ಮೊಬೈಲ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ.

3 / 5
899 ರೂ. ಯೋಜನೆ: ಈ ರಿಚಾರ್ಜ್​ ಪ್ಲ್ಯಾನ್​ನಲ್ಲಿ ಎರಡು ಲಾಗಿನ್ ಲಭ್ಯವಿರಲಿದೆ. ಅಂದರೆ HD ಕಂಟೆಂಟ್ ಸ್ಟ್ರೀಮಿಂಗ್ ಅನ್ನು ಎರಡು ಡಿವೈಸ್​ನಲ್ಲಿ ಏಕಕಾಲಕ್ಕೆ ಲೈವ್ ಅಥವಾ ಡಿಸ್ನಿ-ಹಾಟ್​ಸ್ಟಾರ್​ನ ಇನ್ನಿತರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅದು ಟ್ಯಾಬ್ಲೆಟ್, ಟಿವಿ ಅಥವಾ ಮೊಬೈಲ್ ಆಗಿರಬಹುದು. ಉಳಿದಂತೆ ಈ ಹಿಂದಿನ ಪ್ಲ್ಯಾನ್​ನಂತೆ ಯಾವುದೇ ವ್ಯತ್ಯಾಸವಿಲ್ಲ.

4 / 5
1499 ರೂ. ಯೋಜನೆ: ಈ ಯೋಜನೆಯಲ್ಲಿ ಗ್ರಾಹಕರು 4K ಗುಣಮಟ್ಟದ ವಿಡಿಯೋಗಳನ್ನು ವೀಕ್ಷಿಸಬಹುದು. ಅಂದರೆ ಈ ರಿಚಾರ್ಜ್​ ಪ್ಲ್ಯಾನ್​ ಹಾಕಿಸಿಕೊಂಡರೆ ವಿಡಿಯೋ ಗುಣಮಟ್ಟ ಮತ್ತಷ್ಟು ಉತ್ತಮವಾಗಿರುತ್ತದೆ. ಹಾಗೆಯೇ ಬಳಕೆದಾರರು ಏಕಕಾಲದಲ್ಲಿ ನಾಲ್ಕು ಡಿವೈಸ್​ನಲ್ಲಿ ಸ್ಟ್ರೀಮ್ ಮಾಡಬಹುದು. ಬಳಕೆದಾರರ ಸಂಖ್ಯೆ ನಾಲ್ಕು ಮೀರಿದರೆ ಒಂದು ಖಾತೆ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತದೆ.

5 / 5
Follow us