AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme GT 7: ದೇಶಾದ್ಯಂತ ರಿಯಲ್ ಮಿ ಜಿಟಿ 7 ಸೀರಿಸ್ ಬಿಡುಗಡೆ: ಹೈ ಟೆಕ್ನಾಲಜಿ ಫೀಚರ್ಸ್​ಗೆ ಯುವಕರು ಫಿದಾ

ರಿಯಲ್‌ ಮಿ GT 7 ವಿಶ್ವದ ಮೊದಲ 4K ಅಂಡರ್ ವಾಟರ್ ವಿಡಿಯೋ ಮೋಡ್, ಎಐ ಗ್ಲೇರ್ ಅನ್ನು ಒಳಗೊಂಡಿದೆ. ಇದು ಡಾಲ್ಬಿ ವಿಷನ್ ಜೊತೆಗೆ 30fps ನಲ್ಲಿ 8K ಮತ್ತು 120fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಫೋನ್ 6.78 ಅಮೋಲೆಡ್ ಪ್ರೊ-ಎಸ್ಪೋರ್ಟ್ಸ್ ಡಿಸ್ಪ್ಲೇ ನೀಡಲಾಗಿದೆ.

Realme GT 7: ದೇಶಾದ್ಯಂತ ರಿಯಲ್ ಮಿ ಜಿಟಿ 7 ಸೀರಿಸ್ ಬಿಡುಗಡೆ: ಹೈ ಟೆಕ್ನಾಲಜಿ ಫೀಚರ್ಸ್​ಗೆ ಯುವಕರು ಫಿದಾ
Realme Gt 7
Vinay Bhat
|

Updated on: Jun 01, 2025 | 1:03 PM

Share

ಬೆಂಗಳೂರು (ಜೂ. 01): ಜನಪ್ರಿಯ ಸ್ಮಾರ್ಟ್‌ಫೋನ್‌ (Smartphone) ರಿಯಲ್ ಮಿ ತನ್ನ ನೂತನ ರಿಯಲ್‌ ಮಿ ಜಿಟಿ 7 ಸರಣಿಯನ್ನು ದೇಶಾದ್ಯಂತ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದೊಂದಿಗೆ ಕೊ-ಕ್ರಿಯೇಟ್‌ ಮಾಡಲಾದ ರಿಯಲ್ ಮಿ ಜಿಟಿ 7 ಡ್ರೀಮ್ ಎಡಿಷನ್ AMF1 ನೊಂದಿಗೆ ಮೊದಲ ಕೊ-ಬ್ರಾಂಡ್ ಸ್ಮಾರ್ಟ್​ಫೋನ್ ಆಗಿ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ಇದರಲ್ಲಿ ರಿಯಲ್ ಮಿ ಜಿಟಿ 7 ಮತ್ತು ರಿಯಲ್ ಮಿ ಜಿಟಿ 7ಟಿ ಎಂಬ ಎರಡು ಫೋನುಗಳಿವೆ. ಇದು 120W ಅಲ್ಟ್ರಾ ಚಾರ್ಜ್ ನೊಂದಿಗೆ ಜೋಡಿಸಲಾದ 7000mAh ಟೈಟಾನ್ ಬ್ಯಾಟರಿಯನ್ನು ಹೊಂದಿದೆ

ಈ ಸ್ಮಾರ್ಟ್ ಫೋನ್ ಭಾರತದ ಮೊದಲ ಮೀಡಿಯಾಟೆಕ್ ಡೈಮೆನ್ಸಿಟಿ 9400 ಇ ಚಿಪ್ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮಿಂಚಿನ ವೇಗದ, ಮಲ್ಟಿಟಾಸ್ಕಿಂಗ್ ಪವರ್ ಮತ್ತು ಗೇಮಿಂಗ್-ದರ್ಜೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮತ್ತೊಂದು ವಿಶೇಷವೆಂದರೆ ಈ ಸರಣಿಯು, ಎಐ ಪ್ಲಾನರ್​ ಹೊಂದಿದ್ದು, ಸರಳ ಡಬಲ್ ಟ್ಯಾಪ್ ನೊಂದಿಗೆ ದೈನಂದಿನ ಕಾರ್ಯಗಳನ್ನು ರಚಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುವ ಮೊದಲ ಸ್ಮಾರ್ಟ್ ಶೆಡ್ಯೂಲರ್ ಆಗಿದೆ.

ರಿಯಲ್‌ ಮಿ GT 7 ಟ್ರಿಪಲ್ ಕ್ಯಾಮೆರಾ ಯೂನಿಟ್ ಹೊಂದಿದ್ದು, ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX906 ಸೆನ್ಸರ್, 50-ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ OV08D10 ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ರಿಯಲ್‌ಮಿ GT 7T ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX896 ಸೆನ್ಸರ್ ಮತ್ತು 8-ಮೆಗಾಪಿಕ್ಸೆಲ್ OV08D10 ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೇರಿವೆ.

ಇದನ್ನೂ ಓದಿ
Image
ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ಅಥವಾ ಪಿನ್: ಯಾವ ಪಾಸ್ವರ್ಡ್ ಸುರಕ್ಷಿತ?
Image
ಮಳೆ ನೀರು ಮೊಬೈಲ್ ಮೇಲೆ ಬಿದ್ದರೂ ಉಪಯೋಗಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
Image
7000mAh ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 31,999 ರೂ.
Image
ಪ್ರಧಾನಿಯಿಂದ ಬಂಪರ್ ಯೋಜನೆ: ಡೇಟಾ ಉಳಿದಿದ್ದರೆ ಕೈತುಂಬಾ ಹಣ ಸಂಪಾದಿಸಿ

Tech Tips: ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ಅಥವಾ ಪಿನ್: ಯಾವ ಪಾಸ್ವರ್ಡ್ ಹೆಚ್ಚು ಭದ್ರತೆ ಒದಗಿಸುತ್ತದೆ?

ರಿಯಲ್‌ ಮಿ GT 7 ವಿಶ್ವದ ಮೊದಲ 4K ಅಂಡರ್ ವಾಟರ್ ವಿಡಿಯೋ ಮೋಡ್, ಎಐ ಗ್ಲೇರ್ ಅನ್ನು ಒಳಗೊಂಡಿದೆ. ಇದು ಡಾಲ್ಬಿ ವಿಷನ್ ಜೊತೆಗೆ 30fps ನಲ್ಲಿ 8K ಮತ್ತು 120fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಫೋನ್ 6.78 ಅಮೋಲೆಡ್ ಪ್ರೊ-ಎಸ್ಪೋರ್ಟ್ಸ್ ಡಿಸ್​ಪ್ಲೇ ನೀಡಲಾಗಿದೆ.

ರಿಯಲ್‌ ಮಿ ಜಿಟಿ  7 7000 mAh ಬೃಹತ್ ಬ್ಯಾಟರಿ, 120W ಅಲ್ಟ್ರಾ ಚಾರ್ಜರ್ ನೀಡಲಾಗಿದ್ದು, ಇದು ಕೇವಲ 14 ನಿಮಿಷಗಳಲ್ಲಿ 50% ವರೆಗೆ ಮತ್ತು ಕೇವಲ 40 ನಿಮಿಷಗಳಲ್ಲಿ 100% ವರೆಗೆ ಚಾರ್ಚ್‌ ಆಗಲಿದೆ. 8GB+256GB, 12GB+256GB ಮತ್ತು 12GB+512GB ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 34,999 ರೂ. ಗಳಿಂದ ಪ್ರಾರಂಭವಾಗುತ್ತದೆ. ಇದರ 16GB+512GB ರೂಪಾಂತರದ ಬೆಲೆ 49,999 ರೂ. ಗೆ ಲಭ್ಯವಿದೆ. ಮೊದಲ ಮಾರಾಟವು ಜೂನ್ 13, 2025 ರಿಂದ ಪ್ರಾರಂಭವಾಗುತ್ತದೆ.

ಇನ್ನು ರಿಯಲ್‌ ಮಿ ಜಿಟಿ 7T ಮೀಡಿಯಾಟೆಕ್ ಡೈಮೆನ್ಸಿಟಿ 8400-ಮ್ಯಾಕ್ಸ್ ಚಿಪ್ಸೆಟ್, 7000 mAh ಬ್ಯಾಟರಿ, ಐಸ್ಸೆನ್ಸ್ ಗ್ರ್ಯಾಫೀನ್ ಬ್ಯಾಕ್ ಅನ್ನು ಹೊಂದಿದೆ ಮತ್ತು ಇದನ್ನು 8GB+256GB, 12GB+256GB ಮತ್ತು 12GB+512GB ಕಾನ್ಫಿಗರೇಶನ್ ಗಳಲ್ಲಿ ನೀಡಲಾಗುತ್ತದೆ, ಇದು 28,999 ರೂ. ಗಳಿಂದ ಪ್ರಾರಂಭವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ