Kannada News Technology Realme Narzo 50 Pro 5G Can I buy this MediaTek Dimensity 920 processor 5000mAh Battery smartphone?
ಇದೀಗ ಸೇಲ್ ಕಾಣುತ್ತಿದೆ ರಿಯಲ್ ಮಿ ನಾರ್ಜೊ 50 ಪ್ರೊ 5G: ಈ ಹೊಸ ಫೋನ್ ಹೇಗಿದೆ?, ಖರೀದಿಸಬಹುದೆ?
ರಿಯಲ್ ಮಿ ನಾರ್ಜೊ 50 ಪ್ರೊ 5G (Realme Narzo 50 Pro 5G) ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಇದು ಬಜೆಟ್ ಫೋನ್ ಆಗಿದ್ದರೂ ಇದರಲ್ಲಿರುವ ಫೀಚರ್ ಆಕರ್ಷಕವಾಗಿದೆ.
Realme Narzo 50 Pro 5G
Follow us on
ಕಳೆದ ಕೆಲವು ತಿಂಗಳುಗಳಿಂದ ರಿಯಲ್ ಮಿ (Realme) ಕಂಪನಿ ಭಾರತದಲ್ಲಿ ಸರಾಗವಾಗಿ ಒಂದರ ಹಿಂದೆ ಒಂದು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ವಿಭಿನ್ನ ಪ್ರಕಾರಗಳ ಮೊಬೈಲ್ ಅನ್ನು ಪರಿಯಿಸುವ ರಿಯಲ್ ಮಿ ಇತ್ತೀಚೆಗಷ್ಟೆ 150W ಫಾಸ್ಟ್ ಚಾರ್ಜರ್ನ ರಿಯಲ್ ಮಿ ಜಿಟಿ ನಿಯೋ 3 (Realme GT Neo 3) ಯನ್ನು ಅನಾವರಣ ಮಾಡಿತ್ತು. ಇದರ ಜೊತೆಗೆ ಬಜೆಟ್ ಬೆಲೆಯ ರಿಯಲ್ ಮಿ ನಾರ್ಜೊ 50 5G ಮತ್ತು ರಿಯಲ್ ಮಿ ನಾರ್ಜೊ 50 ಪ್ರೊ 5G ಸ್ಮಾರ್ಟ್‌ಫೋನ್ ಅನ್ನು ಕೂಡ ಲಾಂಚ್ ಮಾಡಿತ್ತು. ಇದರಲ್ಲಿ ರಿಯಲ್ ಮಿ ನಾರ್ಜೊ 50 ಪ್ರೊ 5G (Realme Narzo 50 Pro 5G) ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಿದೆ. ಇದು ಬಜೆಟ್ ಫೋನ್ ಆಗಿದ್ದರೂ ಇದರಲ್ಲಿರುವ ಫೀಚರ್ ಆಕರ್ಷಕವಾಗಿದೆ.
ರಿಯಲ್ ಮಿ ನಾರ್ಜೊ 50 ಪ್ರೊ 5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 360Hz ಟಚ್ ಸ್ಯಾಂಪ್ಲಿಂಗ್ ದರ ಪಡೆದಿದೆ.
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್ ಪವರ್ ಚಾಲಿತವಾಗಿದ್ದು, ಇದು 8GB ಯ RAM, 5GB ವರ್ಚುವಲ್ RAM ಮತ್ತು 128GB ಯ ಸ್ಟೋರೇಜ್ ಸ್ಥಳದೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗೆಯೇ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ.
ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಒಳಗೊಂಡಿದೆ. 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ರಿಯಲ್ ಮಿ ನಾರ್ಜೊ 50 ಪ್ರೊ ಫೋನ್ 5,000mAh ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 33W ಡಾರ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಇದನ್ನೂ ಓದಿ
ಈ ಫೋನಿನ 6 GB + 128 GB ಬೇಸ್ ವೇರಿಯಂಟ್ ದರವು 19,999 ರೂ. ಆಗಿದೆ. ಅದೇ ರೀತಿ 8 GB + 128 GB ವೇರಿಯಂಟ್ ಬೆಲೆ 21,999 ರೂ. ಆಗಿದೆ. HDFC ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂ. ಗಳ ರಿಯಾಯಿತಿ ಸಿಗಲಿದೆ.
ಖರೀದಿಸಬಹುದೇ?: ಇದು ಬಜೆಟ್ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ದೊಡ್ಡ ಮಟ್ಟದ ಗೇಮಿಂಗ್ ಆಡಲು ಸಾಧ್ಯವಿಲ್ಲದಿದ್ದರೂ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ಬಲಿಷ್ಠವಾಗಿದೆ. ಕ್ಯಾಮೆರಾ ಡಿಸೆಂಟ್ ಆಗಿದ್ದು ಉತ್ತಮ ಬ್ಯಾಟರಿ ಹಾಗೂ ಚಾರ್ಜರ್ ನೀಡಲಾಗಿದೆ. ಒಟ್ಟಾರೆ ನಿಮ್ಮ ಡೈಲಿ ಯೂಸೇಜ್ಗೆ ಇದೊಂದು ಹೇಳಿ ಮಾಡಿಸಿದ ಫೋನ್ ಆಗಿದೆ.