Realme Narzo 50i Prime: ರಿಯಲ್‌ ಮಿ ನಾರ್ಜೋ 50i ಪ್ರೈಮ್ ಫಸ್ಟ್ ಸೇಲ್: ಬಂಪರ್ ಆಫರ್ ಕೂಡ ಲಭ್ಯ

| Updated By: Vinay Bhat

Updated on: Sep 24, 2022 | 6:01 AM

Amazon Great Indian Festival Sale: ರಿಯಲ್‌ ಮಿ ಕಂಪನಿ ಭಾರತದಲ್ಲಿ ಕಳೆದ ವಾರ ಬಿಡುಗಡೆ ಮಾಡಿದ ರಿಯಲ್‌ ಮಿ ನಾರ್ಜೊ 50ಐ ಪ್ರೈಮ್‌ (Realme Narzo 50i Prime) ಫೋನಿನ ಸೇಲ್ ಆರಂಭಿಸಿದೆ.

Realme Narzo 50i Prime: ರಿಯಲ್‌ ಮಿ ನಾರ್ಜೋ 50i ಪ್ರೈಮ್ ಫಸ್ಟ್ ಸೇಲ್: ಬಂಪರ್ ಆಫರ್ ಕೂಡ ಲಭ್ಯ
Realme Narzo 50i Prime
Follow us on

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್‌ ಮಿ (Realme) ಕಂಪನಿ 2022ರಲ್ಲಂತು ಅತ್ಯುತ್ತಮ ಮೊಬೈಲ್​​ಗಳನ್ನು ಪರಿಚಯಿಸಿದೆ. ಈಗಾಗಲೇ ಸಾಲು ಸಾಲು ರಿಯಲ್ ಮಿ ಸ್ಮಾರ್ಟ್​ಫೋನ್​ಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇದರ ನಡುವೆ ಕಂಪನಿ ಭಾರತದಲ್ಲಿ ಕಳೆದ ವಾರ ಬಿಡುಗಡೆ ಮಾಡಿದ ರಿಯಲ್‌ ಮಿ ನಾರ್ಜೊ 50ಐ ಪ್ರೈಮ್‌ (Realme Narzo 50i Prime) ಫೋನಿನ ಸೇಲ್ ಆರಂಭಿಸಿದೆ. ಪ್ರಸಿದ್ಧ ಇ ಕಾಮರ್ಸ್‌ ತಾಣ ಅಮೆಜಾನ್ ಆಯೋಜಿಸಿರುವ ಗ್ರೇಟ್‌ ಇಂಡಿಯನ್‌ ಸೇಲ್‌ ಹಾಗೂ ಅಧಿಕೃತ ರಿಯಲ್‌ ಮಿ ತಾಣದ ಮೂಲಕ ಮೊದಲ ಈ ಫೋನ್ ಖರೀದಿಗೆ ಸಿಗುತ್ತಿದೆ.

ಬೆಲೆ ಎಷ್ಟು?:

ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದು 3GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 4GB RAM ಮತ್ತು 64GB ರೂಪಾಂತರದದ ಬೆಲೆ 8,999 ರೂ. ಆಗಿದೆ.

ಇದನ್ನೂ ಓದಿ
Flipkart: ಬಿಗ್ ಬಿಲಿಯನ್​ಡೇಸ್​ನಲ್ಲಿ ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್​​ ಸ್ಮಾರ್ಟ್​​ಫೋನ್​ಗಳು ಇಲ್ಲಿವೆ
Vivo Y16: ಬಜೆಟ್ ಪ್ರಿಯರು ಫುಲ್ ಫಿದಾ: ಭಾರತದಲ್ಲಿ ಹೊಸ ವಿವೋ Y16 ಸ್ಮಾರ್ಟ್‌ಫೋನ್‌ ಬಿಡುಗಡೆ
TECNO POVA Neo 5G smartphone: ಮಾರುಕಟ್ಟೆಗೆ ಇಂದು ಅಗ್ಗದ ಬೆಲೆಯಲ್ಲಿ ಲಗ್ಗೆ ಇಡಲಿದೆ ಹೊಸ ಮೊಬೈಲ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ
Flipkart-Amazon: ಇಂದಿನಿಂದ ಅಮೆಜಾನ್-ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ದೊಡ್ಡ ಸೇಲ್: ಗ್ರಾಹಕರಿಗೆ ಆಫರ್​ಗಳ ಸುರಿಮಳೆ

ಏನು ವಿಶೇಷತೆ?:

ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ನೀಡಲಾಗಿದೆ. ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಯುನಿಸೆಕ್ T612 ಪ್ರೊಸೆಸರ್​ನಲ್ಲಿ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ ಮಿ R ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 10W ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11, ಬ್ಲೂಟೂತ್ 5.0, GPS/ A-GPS, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.