Redmi 12 Series: ಭಾರತದಲ್ಲಿ ದಾಖಲೆ ಬರೆದ ರೆಡ್ಮಿ 12 ಸರಣಿ: ಮಾರಾಟವಾಗಿದ್ದು ಎಷ್ಟು ಸ್ಮಾರ್ಟ್​ಫೋನ್ಸ್ ಗೊತ್ತೇ?

|

Updated on: Nov 18, 2023 | 2:21 PM

Redmi 12 Series Sale: ರೆಡ್ಮಿ 12 ಸರಣಿ 100 ದಿನಗಳಲ್ಲಿ 3 ಮಿಲಿಯನ್ ಯುನಿಟ್ ಮಾರಾಟವಾದ ಬಗ್ಗೆ ಸ್ವತಃ ಶವೋಮಿ ಕಂಪನಿ ತನ್ನ ಅಧಿಕೃತ X (ಟ್ವಿಟ್ಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ತನ್ನ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದೆ. ಈ ಫೋನಿನ ಮಾರಾಟವಾದ ಮೊದಲ ದಿನ ಮೂರು ಲಕ್ಷ ಸೇಲ್‌ ಕಂಡಿತ್ತು.

Redmi 12 Series: ಭಾರತದಲ್ಲಿ ದಾಖಲೆ ಬರೆದ ರೆಡ್ಮಿ 12 ಸರಣಿ: ಮಾರಾಟವಾಗಿದ್ದು ಎಷ್ಟು ಸ್ಮಾರ್ಟ್​ಫೋನ್ಸ್ ಗೊತ್ತೇ?
Redmi 12 Series
Follow us on

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಕೆಲ ತಿಂಗಳ ಹಿಂದೆ ಭಾರತದಲ್ಲಿ ತನ್ನ ರೆಡ್ಮಿ 12 ಸರಣಿಯ ಸ್ಮಾರ್ಟ್​ಫೋನನ್ನು ಅನಾವರಣ ಮಾಡಿತ್ತು. ಇದರಲ್ಲಿ ರೆಡ್ಮಿ 12 4G (Redmi 12 4G) ಮತ್ತು ರೆಡ್ಮಿ 12 5G ಎಂಬ ಎರಡು ಫೋನ್ ಇದೆ. ಇದೀಗ ಈ ಫೋನಿನ ಬಗ್ಗೆ ಶವೋಮಿ ಮಹತ್ವದ ವಿಚಾರ ಹಂಚಿಕೊಂಡಿದೆ. ರೆಡ್ಮಿ 12 ಸರಣಿಯು ಭಾರತದಲ್ಲಿ ಕೇವಲ 100 ದಿನಗಳಲ್ಲಿ ಬರೋಬ್ಬರಿ 3 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ರೆಡ್ಮಿ 12 ಸರಣಿ 100 ದಿನಗಳಲ್ಲಿ 3 ಮಿಲಿಯನ್ ಯುನಿಟ್ ಮಾರಾಟವಾದ ಬಗ್ಗೆ ಸ್ವತಃ ಶವೋಮಿ ಕಂಪನಿ ತನ್ನ ಅಧಿಕೃತ X (ಟ್ವಿಟ್ಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ತನ್ನ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದೆ. ಈ ಫೋನಿನ ಮಾರಾಟವಾದ ಮೊದಲ ದಿನ ಮೂರು ಲಕ್ಷ ಸೇಲ್‌ ಕಂಡಿತ್ತು. ಬಳಿಕ 28 ದಿನಗಳಲ್ಲಿ ಹತ್ತು ಲಕ್ಷ ಯುನಿಟ್ ಮಾರಾಟ ಆಗಿತ್ತು. ಇದೀಗ 100 ದಿನಗಳಲ್ಲಿ 3 ಮಿಲಿಯನ್ ಯುನಿಟ್‌ಗೆ ತಲುಪಿದೆ. ಬಿಡುಗಡೆಯ ಸಮಯದಲ್ಲಿ, ರೆಡ್ಮಿ 12 5G ಸ್ನಾಪ್‌ಡ್ರಾಗನ್ 4 Gen 2 5G ಪ್ರೊಸೆಸರ್‌ನೊಂದಿಗೆ ಬಂದ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿತ್ತು. ಈ ಫೋನಿಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಒಪ್ಪೋ ರೆನೋ 11 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಬಾರಿ ಏನೆಲ್ಲ ಫೀಚರ್ಸ್ ಇರುತ್ತೆ ನೋಡಿ

ಇದನ್ನೂ ಓದಿ
OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ
ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತೀರಾ?
ಬ್ಲಾಕ್ ಫ್ರೈಡೇ ಅಮೆಜಾನ್ ಪ್ರೈಮ್ ಹಗರಣ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದಿರಿ
ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪ್ರಾರಂಭಿಸಿದ ಚೀನಾ

ಬೆಲೆ ಮತ್ತು ಲಭ್ಯತೆ:

ರೆಡ್ಮಿ 12 4G 4GB+128GB ರೂಪಾಂತರಕ್ಕೆ ರೂ 8,999 ಮತ್ತು 6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ. ನೀವು Mi.com, ಫ್ಲಿಪ್​ಕಾರ್ಟ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದು.

5G ಅನುಭವವನ್ನು ಬಯಸುವವರಿಗೆ, ರೆಡ್ಮಿ 12 5G ಫೋನ್ ಖರೀದಿಸಬಹುದು. ಇದರ 4GB+128GB ರೂಪಾಂತರಕ್ಕೆ 10,999 ರೂ., 6GB+128GB ರೂಪಾಂತರಕ್ಕೆ 12,499 ರೂ. ಮತ್ತು 8GB+256GB ರೂಪಾಂತರಕ್ಕೆ 14,999 ರೂ. ನಿಗದಿ ಮಾಡಲಾಗಿದೆ. ಈ ಅದ್ಭುತ ಕೊಡುಗೆಗಳು Mi.com, ಅಮೆಜಾನ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿವೆ.

ಫೀಚರ್ಸ್ ಏನಿದೆ?:

ರೆಡ್ಮಿ 12 4G ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ. ಮೇಲ್ಭಾಗದಲ್ಲಿ, ಕ್ಯಾಮೆರಾ ಲೆನ್ಸ್‌ಗಳನ್ನು ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್‌ ಇದೆ. ಈ ಫೋನ್ MIUI 14 (ಆಂಡ್ರಾಯ್ಡ್ 13 ಆಧಾರಿತ) ನಿಂದ ಚಾಲಿತವಾಗಿದೆ ಮತ್ತು MIUI ಡಯಲರ್‌ನೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ ಇದೆ. ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

ರೆಡ್ಮಿ 12 5G ಫೀಚರ್ಸ್ ಏನಿದೆ?:

ರೆಡ್ಮಿ 12 5G ನಲ್ಲಿ ರೆಡ್ಮಿ 12 4G ಯಂತೆ ಫೀಚರ್​ಗಳಿವೆ. ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಚಿಪ್‌ಸೆಟ್ ಮತ್ತು 5G ತಂತ್ರಜ್ಞಾನ. ರೆಡ್ಮಿ12 5G, ಹೆಸರೇ ಸೂಚಿಸುವಂತೆ, ಈ ಬೆಲೆ ವಿಭಾಗದಲ್ಲಿ ಅಪರೂಪದ 5G ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಬಲಿಷ್ಠವಾದ ಮೊಟ್ಟ ಮೊದಲ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನ ಬಲಯವನ್ನು ಹೊಂದಿದೆ. ಇದು ನಿಮಗೆ ಮೃದುವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಕ್ಯಾಮೆರಾಕ್ಕೆ ಬರುವುದಾದರೆ, ರೆಡ್ಮಿ 12 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಹೊಂದಿದೆ. ಮುಂಭಾಗದ ಕ್ಯಾಮರಾ 8 ಮೆಗಾಪಿಕ್ಸೆಲ್ ಆಗಿದೆ. ಎರಡೂ ಫೋನ್‌ಗಳು 5000 mAh ಬ್ಯಾಟರಿಯನ್ನು ಹೊಂದಿದ್ದು ಅದು ಟೈಪ್ C USB ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ