ಒಪ್ಪೋ ರೆನೋ 11 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಬಾರಿ ಏನೆಲ್ಲ ಫೀಚರ್ಸ್ ಇರುತ್ತೆ ನೋಡಿ

OPPO Reno 11 series Launch Date: ಒಪ್ಪೋ ರೆನೋ 11 ಸರಣಿ ಅಡಿಯಲ್ಲಿ ಒಟ್ಟು ಎರಡು ಸ್ಮಾರ್ಟ್​ಫೋನ್​ಗಳಿವೆ. ಅದು ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ ಪ್ರೊ ಆಗಿದೆ. ಈ ಎರಡೂ ಫೋನ್​ಗಳು ನವೆಂಬರ್ 23 ರಂದು ಮಧ್ಯಾಹ್ನ 2:00 CST ಕ್ಕೆ (ಸುಮಾರು 11:30 am IST) ಅನಾವರಣಗೊಳ್ಳಲಿದೆ.

ಒಪ್ಪೋ ರೆನೋ 11 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಬಾರಿ ಏನೆಲ್ಲ ಫೀಚರ್ಸ್ ಇರುತ್ತೆ ನೋಡಿ
oppo reno 11 series
Follow us
|

Updated on: Nov 16, 2023 | 6:55 AM

ಒಪ್ಪೋ ಕಂಪನಿಯ ರೆನೋ ಸರಣಿ ಸ್ಮಾರ್ಟ್​ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ಸರಣಿಯಲ್ಲಿ ಮೊಬೈಲ್ ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಸೇಲ್ ಆಗುತ್ತದೆ. ಇದೀಗ ಒಪ್ಪೋ ರೆನೋ ಅಡಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದೇ ನವೆಂಬರ್ 23 ರಂದು ಮಾರುಕಟ್ಟೆಗೆ ಒಪ್ಪೋ ರೆನೋ 11 ಸರಣಿಯು (OPPO Reno 11 series ) ಅಪ್ಪಳಿಸಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿದೆ. ಈ ಫೋನ್‌ಗಳು “SLR-ಮಟ್ಟದ ಫೋಟೋವನ್ನು” ಸೆರೆಹಿಡಿಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸರಣಿಯಲ್ಲಿ ಎಷ್ಟು ಫೋನಿದೆ?, ಫೀಚರ್ಸ್ ಏನಿರಬಹುದು ಎಂಬುದನ್ನು ನೋಡೋಣ.

ಒಪ್ಪೋ ರೆನೋ 11 ಸರಣಿ:

ಒಪ್ಪೋ ರೆನೋ 11 ಸರಣಿ ಅಡಿಯಲ್ಲಿ ಒಟ್ಟು ಎರಡು ಸ್ಮಾರ್ಟ್​ಫೋನ್​ಗಳಿವೆ. ಅದು ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ 11 ಪ್ರೊ ಆಗಿದೆ. ಈ ಎರಡೂ ಫೋನ್​ಗಳು ನವೆಂಬರ್ 23 ರಂದು ಮಧ್ಯಾಹ್ನ 2:00 CST ಕ್ಕೆ (ಸುಮಾರು 11:30 am IST) ಅನಾವರಣಗೊಳ್ಳಲಿದೆ.

ಒಪ್ಪೋ ರೆನೋ 11 ಸರಣಿಯ ನಿರೀಕ್ಷಿತ ಫೀಚರ್ಸ್:

ಒಪ್ಪೋ ರೆನೋ 11 ಸರಣಿ 4 ಬಣ್ಣಗಳಲ್ಲಿ ಬರುವ ಸಾಧ್ಯತೆ ಇದೆ. ಇದು ಫ್ಲೋರೈಟ್ ಬ್ಲೂ, ಮೂನ್‌ಸ್ಟೋನ್ ವೈಟ್, ವೈಡೂರ್ಯ ಮತ್ತು ಅಬ್ಸಿಡಿಯನ್ ಕಪ್ಪು ಬಣ್ಣಗಳಿಂದ ಕೂಡಿದೆ. 11 ಪ್ರೊ ಇದರಲ್ಲಿ ಹಿಂಬದಿಯ ಕ್ಯಾಮೆರಾಗಳು 50MP Sony LYT-700 ಪ್ರಾಥಮಿಕ ಸಂವೇದಕ (OIS ಜೊತೆಗೆ), 8MP ಅಲ್ಟ್ರಾವೈಡ್ ಸ್ನ್ಯಾಪರ್ ಮತ್ತು 2x ಜೂಮ್ ಲೆನ್ಸ್‌ನೊಂದಿಗೆ 32MP IMX709 ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರುತ್ತದೆ. ರೆನೋ 11 ಕೂಡ ಇದೇ ಸಂವೇದಕಗಳನ್ನು ಹೊಂದಿದೆ ಎಂಬ ವದಂತಿಗಳಿವೆ. ಆದರೆ ಪ್ರಾಥಮಿಕ ಕ್ಯಾಮೆರಾ ಸೋನಿ LYT-600 ಸಂವೇದಕವಾಗಿರಬಹುದು.

ಇದನ್ನೂ ಓದಿ
Image
ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಮತ್ತೊಂದು ಉಪಯುಕ್ತ ಫೀಚರ್
Image
ವಾಟ್ಸ್​ಆ್ಯಪ್​​ನಲ್ಲಿ ಬರಲಿದೆ ಹೊಸ ವಾಯ್ಸ್​ ಚಾಟ್ ಫೀಚರ್; ಇಲ್ಲಿದೆ ವಿವರ
Image
ಫೋನನ್ನು ಪವರ್ ಬ್ಯಾಂಕ್​ ಮೂಲಕ ಚಾರ್ಜ್ ಮಾಡುವವರು ಇಲ್ಲೊಮ್ಮೆ ಗಮನಿಸಿ
Image
ಬಹುನಿರೀಕ್ಷಿತ ವಿವೋ X100, ವಿವೋ X100 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ

Tech Tips: ನೀವು ಹಳೆಯ ಸ್ಮಾರ್ಟ್​ಫೋನ್ ಸೇಲ್ ಮಾಡುತ್ತೀರಿ ಎಂದಾದರೆ ಈ ವಿಚಾರ ತಿಳಿದಿರಲಿ

ರೆನೋ 11 ಪ್ರೊ ಮುಂಭಾಗದಲ್ಲಿ ಪಂಚ್ ಹೋಲ್ ಕಟೌಟ್, 1.5 ಕೆ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 2160Hz PWM ದರದೊಂದಿಗೆ OLED ಸ್ಕ್ರೀನ್ ನೀಡಲಾಗಿದೆಯಂರೆ. ಸ್ಟ್ಯಾಂಡರ್ಡ್ ಒಪ್ಪೋ ರೆನೋ 11 ಮಾದರಿಯ ಡಿಸ್ಪ್ಲೇ ಸ್ಪೆಕ್ಸ್ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಒಪ್ಪೋ ರೆನೋ 11 ಪ್ರೊ ಸ್ನಾಪ್​ಡ್ರಾಗನ್ 8+ Gen 1 ಚಿಪ್‌ಸೆಟ್‌ನಿಂದ ರನ್ ಆಗುತ್ತದೆ. ಅತ್ತ ಒಪ್ಪೋ ರೆನೋ 11 ನಲ್ಲಿ ಡೈಮೆನ್ಸಿಟಿ 8200 ಪ್ರೊಸೆಸರ್ ಇರಬಹುದು.

ಒಪ್ಪೋ ರೆನೋ 11 67W ಚಾರ್ಜಿಂಗ್ ವೇಗದೊಂದಿಗೆ 4,800mAh ಬ್ಯಾಟರಿಯನ್ನು ಹೊಂದಿದೆ. ಒಪ್ಪೋ ರೆನೋ ಪ್ರೊ 80W ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್