Redmi 12 5G: ಭಾರತದಲ್ಲಿ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

Redmi 12 4G: ರೆಡ್ಮಿ 12 4G ಎರಡು ರೂಪಾಂತರಗಳಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಸಂಗ್ರಹಕ್ಕೆ ಕೇವಲ 8,999 ರೂ. ಇದೆ ಅಂತೆಯೆ ಇನ್ನೊಂದು 6GB RAM ಮತ್ತು 128 GB ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿದೆ.

Redmi 12 5G: ಭಾರತದಲ್ಲಿ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
Redmi 12 4G and 5G
Follow us
Vinay Bhat
|

Updated on:Aug 01, 2023 | 3:12 PM

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಆಗಾಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿರುತ್ತದೆ. ಅದರಂತೆ ಇಂದು ಭಾರತದಲ್ಲಿ ರೆಡ್ಮಿ 12 (Redmi 12) ಫೋನನ್ನು ಅನಾವರಣ ಮಾಡಿದೆ. ವಿಶೇಷ ಎಂದರೆ ಈ ಫೋನನ್ನು ಶವೋಮಿ 4G ಮತ್ತು 5G ಎಂಬ ಎರಡು ಆವೃತ್ತಿಯಲ್ಲಿ ಪರಿಚಯಿಸಿದೆ. ಇದು ಅತಿ ಕಡಿಮೆ ಬೆಲೆಗೆ ಲಭ್ಯವಿದ್ದು, ಬಜೆಟ್ ಪ್ರಿಯರನ್ನು ದಂಗಾಗಿಸಿದೆ. ಹಾಗಾದರೆ ರೆಡ್ಮಿ 12 4G ಮತ್ತು 5G (Redmi 12 5G) ಸ್ಮಾರ್ಟ್​ಫೋನ್​ನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ರೆಡ್ಮಿ 12 4G ಎರಡು ರೂಪಾಂತರಗಳಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಸಂಗ್ರಹಕ್ಕೆ ಕೇವಲ 8,999 ರೂ. ಇದೆ ಅಂತೆಯೆ ಇನ್ನೊಂದು 6GB RAM ಮತ್ತು 128 GB ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಆಗಸ್ಟ್ 4 ರಿಂದ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಸಿಗಲಿದೆ.

ಇದನ್ನೂ ಓದಿ
Image
Oppo A78: ಕ್ಯಾಮೆರಾ ಪ್ರಿಯರಿಗೆ ಒಪ್ಪೋದಿಂದ ಮತ್ತೊಂದು ಆಕರ್ಷಕ ಫೋನ್ ಒಪ್ಪೋ A78 ಬಿಡುಗಡೆ: ಬೆಲೆ ಕೇವಲ …
Image
JioBook laptop: ಭಾರತದಲ್ಲಿ ಬಹುನಿರೀಕ್ಷಿತ ಜಿಯೋಬುಕ್ ಲ್ಯಾಪ್​ಟಾಪ್ ಬಿಡುಗಡೆ: ಬೆಲೆ ಕೇವಲ 16,499 ರೂ.
Image
5G in India: ಕೇವಲ 10 ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5ಜಿ ನೆಟ್​ವರ್ಕ್: ವಿಶ್ವದ ಎರಡನೇ ಅತಿದೊಡ್ಡ 5G ಪ್ರದೇಶವಾದ ಭಾರತ
Image
Pebble Revolve: ಪೆಬಲ್ ಕಂಪನಿ ಪರಿಚಯಿಸಿದೆ ಸೂಪರ್ ಸ್ಟೈಲಿಶ್ ಸ್ಮಾರ್ಟ್​ವಾಚ್

ರೆಡ್ಮಿ 12 5G ಸ್ಮಾರ್ಟ್​ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ. ಆಗಿದ್ದರೆ, 6GB + 128GB ರೂಪಾಂತರಕ್ಕೆ 12,499 ರೂ. ಇದೆ. ಅಂತೆಯೆ 8GB + 256 GB ಸ್ಟೋರೇಜ್ ಆಯ್ಕೆಗೆ 1,000 ರೂ. ಬ್ಯಾಂಕ್ ಕೊಡುಗೆಯೊಂದಿಗೆ 14,999 ರೂ. ಗೆ ಖರೀದಿಸಬಹುದು. ಇದು ಕೂಡ ಆಗಸ್ಟ್ 4 ರಿಂದ ಮಧ್ಯಾಹ್ನ 12:00 ರಿಂದ ಮಾರಾಟವಾಗಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ.

Redmi 12 5G: ಶಓಮಿ ರೆಡ್ಮಿ ಹೊಸ ಫೋನ್ ರಿಲೀಸ್​ಗೆ ರೆಡಿ, ಬಜೆಟ್ ಬೆಲೆಗೆ ಲಭ್ಯ

ರೆಡ್ಮಿ 12 4G ಫೀಚರ್ಸ್ ಏನಿದೆ?:

ರೆಡ್ಮಿ 12 4G ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ. ಮೇಲ್ಭಾಗದಲ್ಲಿ, ಕ್ಯಾಮೆರಾ ಲೆನ್ಸ್‌ಗಳನ್ನು ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್‌ ಇದೆ. ಈ ಫೋನ್ MIUI 14 (ಆಂಡ್ರಾಯ್ಡ್ 13 ಆಧಾರಿತ) ನಿಂದ ಚಾಲಿತವಾಗಿದೆ ಮತ್ತು MIUI ಡಯಲರ್‌ನೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ ಇದೆ. ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

ರೆಡ್ಮಿ 12 5G ಫೀಚರ್ಸ್ ಏನಿದೆ?:

ರೆಡ್ಮಿ 12 5G ನಲ್ಲಿ ರೆಡ್ಮಿ 12 4G ಯಂತೆ ಫೀಚರ್​ಗಳಿವೆ. ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಚಿಪ್‌ಸೆಟ್ ಮತ್ತು 5G ತಂತ್ರಜ್ಞಾನ. ರೆಡ್ಮಿ12 5G, ಹೆಸರೇ ಸೂಚಿಸುವಂತೆ, ಈ ಬೆಲೆ ವಿಭಾಗದಲ್ಲಿ ಅಪರೂಪದ 5G ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಬಲಿಷ್ಠವಾದ ಮೊಟ್ಟ ಮೊದಲ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನ ಬಲಯವನ್ನು ಹೊಂದಿದೆ. ಇದು ನಿಮಗೆ ಮೃದುವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಕ್ಯಾಮೆರಾಕ್ಕೆ ಬರುವುದಾದರೆ, ರೆಡ್ಮಿ 12 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಹೊಂದಿದೆ. ಮುಂಭಾಗದ ಕ್ಯಾಮರಾ 8 ಮೆಗಾಪಿಕ್ಸೆಲ್ ಆಗಿದೆ. ಎರಡೂ ಫೋನ್‌ಗಳು 5000 mAh ಬ್ಯಾಟರಿಯನ್ನು ಹೊಂದಿದ್ದು ಅದು ಟೈಪ್ C USB ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Tue, 1 August 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ