5G in India: ಕೇವಲ 10 ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5ಜಿ ನೆಟ್​ವರ್ಕ್: ವಿಶ್ವದ ಎರಡನೇ ಅತಿದೊಡ್ಡ 5G ಪ್ರದೇಶವಾದ ಭಾರತ

ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್​ವರ್ಕ್ ಹೊಂದಿದ ಪ್ರದೇಶವಾಗಿದೆ.

5G in India: ಕೇವಲ 10 ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5ಜಿ ನೆಟ್​ವರ್ಕ್: ವಿಶ್ವದ ಎರಡನೇ ಅತಿದೊಡ್ಡ 5G ಪ್ರದೇಶವಾದ ಭಾರತ
5G Network
Follow us
Vinay Bhat
|

Updated on:Aug 01, 2023 | 12:32 PM

ಈಗಿನ ಕಾಲಕ್ಕೆ ತಕ್ಕಂತೆ ಭಾರತವನ್ನು ‘ಡಿಜಿಟಲ್ ಇಂಡಿಯಾ’ (Digital India) ಆಗಿ ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದರು. ಅದರಂತೆ ಭಾರತ ಇಂದು ಸಂಪೂರ್ಣವಾಗಿ ‘ಡಿಜಿಟಲ್ ಇಂಡಿಯಾ’ ಆಗುತ್ತಿದೆ. ಡಿಜಿಟಲೀಕರಣದಿಂದ ಹಿಡಿದು ಹಣಕಾಸು ವಹಿವಾಟಿನವರೆಗೆ ವಿವಿಧ ಕ್ಷೇತ್ರಗಳಲ್ಲಿ ಆನ್​ಲೈನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ನೆಟ್​ವರ್ಕ್ (5G Network) ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್​ವರ್ಕ್ ಹೊಂದಿದ ಪ್ರದೇಶವಾಗಿದೆ.

ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”5 ತಿಂಗಳಲ್ಲಿ 1 ಲಕ್ಷ 5 ಜಿ ನೆಟ್​ವರ್ಕ್​ ಅನ್ನು ರಚಿಸಲಾಗಿದೆ, 8 ತಿಂಗಳಲ್ಲಿ 2 ಲಕ್ಷ ನೆಟ್​ವರ್ಕ್​ ಮತ್ತು 10 ತಿಂಗಳಲ್ಲಿ 3 ಲಕ್ಷ ನೆಟ್​ವರ್ಕ್​ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್‌ಗಳನ್ನು ಸ್ಥಾಪಿಸಲಾಗಿದೆ,” ಎಂದು ಅಶ್ವಿನಿ ವೈಷ್ಣವ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
Image
Pebble Revolve: ಪೆಬಲ್ ಕಂಪನಿ ಪರಿಚಯಿಸಿದೆ ಸೂಪರ್ ಸ್ಟೈಲಿಶ್ ಸ್ಮಾರ್ಟ್​ವಾಚ್
Image
Redmi 12 5G: ಶಓಮಿ ರೆಡ್ಮಿ ಹೊಸ ಫೋನ್ ರಿಲೀಸ್​ಗೆ ರೆಡಿ, ಬಜೆಟ್ ಬೆಲೆಗೆ ಲಭ್ಯ
Image
Great Freedom Festival: ಮತ್ತೆ ಬಂದಿದೆ ಅಮೆಜಾನ್ ವಿಶೇಷ ಆಫರ್ ಮತ್ತು ಡಿಸ್ಕೌಂಟ್ ಸೇಲ್!!
Image
Moto G14 vs Redmi 12 5G: ಮೋಟೋ G14 vs ರೆಡ್ಮಿ 12 5G: ಇಂದು ಒಂದೇ ದಿನ ಬಿಡುಗಡೆ ಆಗಲಿದೆ ಎರಡು ಸ್ಮಾರ್ಟ್​ಫೋನ್ಸ್

Oppo F21 Pro: ಫ್ಲಿಪ್​ಕಾರ್ಟ್​ನಲ್ಲಿ ಮೆಗಾ ಡಿಸ್ಕೌಂಟ್ ಆಫರ್ ಒಪ್ಪೊ F21 Pro ಫೋನ್

”5G ಸೈಟ್‌ಗಳನ್ನು ನಿರ್ಮಿಸಲು ಕೇಂದ್ರವು ಅನೇಕ ಯೋಜನೆಗಳನ್ನು ರೂಪಿಸಿದೆ. ಭಾರತವು 5G ನೆಟ್‌ವರ್ಕ್‌ಗೆ ವೇಗವಾಗಿ ಸಂಪರ್ಕ ಹೊಂದುತ್ತಿದೆ,” ಎಂದು ಕೇಂದ್ರ ರಾಜ್ಯ ಸಚಿವ ದೇವ್‌ಸಿನ್ಹ್ ಚೌಹಾಣ್ ಹೇಳಿದ್ದಾರೆ.

ಕಳೆದು ತಿಂಗಳು, ಸಂವಹನ ಖಾತೆಯ ರಾಜ್ಯ ಸಚಿವ ದೇವ್‌ಸಿನ್ಹ್ ಚೌಹಾಣ್, ”ಭಾರತವು 5G ಗೆ ಯುಗದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದರು. 9 ತಿಂಗಳಲ್ಲಿ 2.70 ಲಕ್ಷ 5ಜಿ ಸೈಟ್‌ಗಳನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಶೀಘ್ರದಲ್ಲೇ 6 ಜಿ ತಂತ್ರಜ್ಞಾನವನ್ನು ಕೂಡ ಆದಷ್ಟು ಬೇಗ ಪರಿಚಯಿಸುತ್ತೇವೆ,” ಎಂದು ಹೇಳಿದ್ದರು.

ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್​ನಿಂದಲೂ ತಯಾರಿ:

ಜಿಯೋ ಮತ್ತು ಏರ್‌ಟೆಲ್‌ನಂತೆ, ಶೀಘ್ರದಲ್ಲೇ ಸರ್ಕಾರಿ ಕಂಪನಿ ಬಿಎಸ್​ಎನ್​ಎಲ್ ಕೂಡ ತನ್ನ 5G ಸಂಪರ್ಕ ನೀಡಲು ಮುಂದಾಗಿದೆ. ಇತ್ತೀಚೆಗೆ BSNL ತನ್ನ ಬಳಕೆದಾರರಿಗೆ 4G ಸೇವೆಯ ಪ್ರಯೋಜನವನ್ನು ನೀಡಿದೆ. ಸೆಪ್ಟೆಂಬರ್ 2023 ರ ವೇಳೆಗೆ, BSNL ನ 4G ಸೇವೆಯು ದೇಶಾದ್ಯಂತ ಪ್ರಾರಂಭವಾಗಲಿದೆ. ಇದರೊಂದಿಗೆ ಸರ್ಕಾರ ಟೆಲಿಕಾಂ ಕಂಪನಿಗೆ 5G ಸೇವೆಯನ್ನು ಪ್ರಾರಂಭಿಸಲು ಮುಂದಿನ ವರ್ಷದ ವರೆಗೆ ಸಮಯ ನೀಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Tue, 1 August 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ