Oppo A78: ಕ್ಯಾಮೆರಾ ಪ್ರಿಯರಿಗೆ ಒಪ್ಪೋದಿಂದ ಮತ್ತೊಂದು ಆಕರ್ಷಕ ಫೋನ್ ಒಪ್ಪೋ A78 ಬಿಡುಗಡೆ: ಬೆಲೆ ಕೇವಲ …
ಭಾರತದಲ್ಲಿ ಒಪ್ಪೋ A78 ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 8GB + 128GB RAM ವೇರಿಯೆಂಟ್ಗೆ 17,499 ರೂ. ನಿಗದಿ ಮಾಡಲಾಗಿದೆ.
ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಈಗೀಗ ಬಜೆಟ್ ಪ್ರಿಯರಿಗಾಗಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡುತ್ತಿದೆ. ಅತಿ ಕಡಿಮೆ ಬೆಲೆಗೆ ಅದ್ಭುತ ಕ್ಯಾಮೆರಾ ಆಯ್ಕೆ ಇರುವ ಫೋನ್ ಅನ್ನು ಹೆಚ್ಚೆಚ್ಚು ಅನಾವರಣ ಮಾಡುತ್ತಿರುವ ಒಪ್ಪೋ ಇದೀಗ ಭಾರತದಲ್ಲಿ ನೂತನವಾದ ಒಪ್ಪೋ A78 (Oppo A78) ಎಂಬ ಮೊಬೈಲ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ಕೂಡ ಅತ್ಯುತ್ತಮವಾದ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಬಲಿಷ್ಠ ಪ್ರೊಸೆಸರ್, ಬ್ಯಾಟರಿ ಆಯ್ಕೆ ಕೂಡ ಇದೆ. ಹಾಗಾದರೆ, ಈ ಸ್ಮಾರ್ಟ್ಫೋನ್ನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಒಪ್ಪೋ A78 ಬೆಲೆ ಎಷ್ಟು?:
ಭಾರತದಲ್ಲಿ ಒಪ್ಪೋ A78 ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 8GB + 128GB RAM ವೇರಿಯೆಂಟ್ಗೆ 17,499 ರೂ. ನಿಗದಿ ಮಾಡಲಾಗಿದೆ. ಇದು ಆಕ್ವಾ ಗ್ರೀನ್ ಮತ್ತು ಮಿಸ್ಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಕಂಪನಿಯ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.
? Unveiling the power-packed OPPO A78 at an incredible price of just Rs 17,499! ?
Immerse yourself in seamless visuals⚡️, charge like never before with 67W SUPERVOOC TM? and enjoy a smooth experience?✨#OPPOA78 #EndlessEntertainment
Know More: https://t.co/j0DeX3xW4Q pic.twitter.com/lGsvpWszKE
— OPPO India (@OPPOIndia) August 1, 2023
Great Freedom Festival: ಮತ್ತೆ ಬಂದಿದೆ ಅಮೆಜಾನ್ ವಿಶೇಷ ಆಫರ್ ಮತ್ತು ಡಿಸ್ಕೌಂಟ್ ಸೇಲ್!!
ಒಪ್ಪೋ A78 ಫೀಚರ್ಸ್ ಏಣಿದೆ?:
ಹೊಸದಾಗಿ ಬಿಡುಗಡೆಯಾದ ಒಪ್ಪೋ A78 ಡ್ಯುಯಲ್-ಸಿಮ್ (ನ್ಯಾನೋ) ಸ್ಮಾರ್ಟ್‌ಫೋನ್ ಆಗಿದ್ದು, ಇದು ಕಂಪನಿಯ ColorOS 13.1 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್‌ನ ಅನಿರ್ದಿಷ್ಟ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.42-ಇಂಚಿನ ಪೂರ್ಣ-HD+ (1,080 x 2,400 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 680 SoC ನಿಂದ Adreno 610 GPU ಜೊತೆಗೆ 8GB LPDDR4X RAM ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಒಪ್ಪೋ A78 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದು 77-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು f/1.8 ಅಪರ್ಚರ್ ಆಯ್ಕೆ ಹೊಂದಿದೆ. ಜೊತೆಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ 89-ಡಿಗ್ರಿ ಫೀಲ್ಡ್ ಆಫ್ ವ್ಯೂನಲ್ಲಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಒಪ್ಪೋ 128GB ಅಂತರ್ಗತ UFS 2.2 ಸಂಗ್ರಹಣೆಯನ್ನು ಹೊಂದಿದೆ, ಇದನ್ನು MicroSD ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದು. ಇದು 4G LTE, Wi-Fi, ಬ್ಲೂಟೂತ್ 5, GPS ಮತ್ತು A-GPS ಸಂಪರ್ಕವನ್ನು ಬೆಂಬಲಿಸುತ್ತದೆ. 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸಪೋರ್ಟ್ ಮಾಡುತ್ತದೆ. ಇದು 67W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ