Redmi 12C: ಬೆಸ್ಟ್​ ಫೋನ್ ಬೆಸ್ಟ್ ಬಜೆಟ್ ದರ ಶಓಮಿ ರೆಡ್ಮಿ 12C

ಶಓಮಿ ರೆಡ್ಮಿ 12C ಬಿಡುಗಡೆಯಾಗಿದೆ. ದೇಶದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬಜೆಟ್ ದರಕ್ಕೆ ಹೆಚ್ಚಿನ ಫೀಚರ್ಸ್ ಇರುವ ಫೋನ್ ಒದಗಿಸುವ ಉದ್ದೇಶವನ್ನು ಶಓಮಿ ಹೊಂದಿದೆ.

Redmi 12C: ಬೆಸ್ಟ್​ ಫೋನ್ ಬೆಸ್ಟ್ ಬಜೆಟ್ ದರ ಶಓಮಿ ರೆಡ್ಮಿ 12C
|

Updated on: Apr 02, 2023 | 9:00 AM

ಶಓಮಿ, ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಮತ್ತೆ ನಂಬರ್ ವನ್ ಸ್ಥಾನಕ್ಕೇರಲು ಯತ್ನಿಸುತ್ತಿದೆ. ಅದರಲ್ಲೂ, ಏಷ್ಯಾದ ಅತಿದೊಡ್ಡ ಸ್ಮಾರ್ಟ್​ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಮಾರಾಟ ದಾಖಲೆ ಸ್ಥಾಪಿಸುವುದು ಶಓಮಿ ಗುರಿಯಾಗಿದೆ. ನೂತನ ಫೋನ್ ಸರಣಿಯಲ್ಲಿ ಶಓಮಿ ರೆಡ್ಮಿ 12C ಬಿಡುಗಡೆಯಾಗಿದೆ. ದೇಶದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬಜೆಟ್ ದರಕ್ಕೆ ಹೆಚ್ಚಿನ ಫೀಚರ್ಸ್ ಇರುವ ಫೋನ್ ಒದಗಿಸುವ ಉದ್ದೇಶವನ್ನು ಶಓಮಿ ಹೊಂದಿದೆ. ಶಓಮಿ ರೆಡ್ಮಿ 12C ಸ್ಮಾರ್ಟ್​ಫೋನ್ ಬೆಲೆ ಮತ್ತು ಇತರ ವೈಶಿಷ್ಟ್ಯಗಳ ವಿಡಿಯೊ ಇಲ್ಲಿದೆ. 6.71 ಇಂಚಿನ HD+ LCD ಡಿಸ್​ಪ್ಲೇ ಹೊಂದಿದೆ ಶಓಮಿ ಫೋನ್.
ಏಪ್ರಿಲ್ 6ರಿಂದ ಶಓಮಿ ರೆಡ್ಮಿ 12C ಸ್ಮಾರ್ಟ್​ಫೋನ್ ಖರೀದಿಗೆ ದೊರೆಯಲಿದೆ. ಮ್ಯಾಟ್ ಬ್ಲ್ಯಾಕ್, ಮಿಂಟ್ ಗ್ರೀನ್, ರಾಯಲ್ ಬ್ಲೂ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣಗಳ ಆಯ್ಕೆಯಿದ್ದು, 4GB RAM ಮತ್ತು 64GB ಸ್ಟೋರೇಜ್ ಆವೃತ್ತಿಗೆ ₹8,999 ದರ ನಿಗದಿಪಡಿಸಲಾಗಿದೆ. 6GB RAM + 128GB ಸ್ಟೋರೇಜ್ ಆವೃತ್ತಿಗೆ ₹10,999 ದರವಿದೆ.

Follow us