ಬಜೆಟ್ ಪ್ರಿಯರ ಬೆಸ್ಟ್​ ಫೋನ್ ರೆಡ್ಮಿ 13C ಸ್ಮಾರ್ಟ್​ಫೋನ್ ಮಾರಾಟ ಭಾರತದಲ್ಲಿ ಆರಂಭ

|

Updated on: Dec 13, 2023 | 6:55 AM

Redmi 13C 4G first sale in India: ರೆಡ್ಮಿ 13C ಸ್ಮಾರ್ಟ್​ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 128GB ಗೆ ರೂ. 8999. ಈ ಫೋನ್ ಇದೀಗ Mi.com, ಅಮೆಜಾನ್ ಮತ್ತು ಶವೋಮಿಯ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ. 1,000 ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.

ಬಜೆಟ್ ಪ್ರಿಯರ ಬೆಸ್ಟ್​ ಫೋನ್ ರೆಡ್ಮಿ 13C ಸ್ಮಾರ್ಟ್​ಫೋನ್ ಮಾರಾಟ ಭಾರತದಲ್ಲಿ ಆರಂಭ
Redmi 13C 4G
Follow us on

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಸಬ್​ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ವರ್ಷಾಂತ್ಯದ ವೇಳೆಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಬಜೆಟ್ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಅದರಂತೆ ಕಳೆದ ವಾರ ಭಾರತದಲ್ಲಿ ರೆಡ್ಮಿ 13C 4G ಬಿಡುಗಡೆ ಆಗಿತ್ತು. ಈ ಹ್ಯಾಂಡ್‌ಸೆಟ್ ರೆಡ್ಮಿ 12C ಯ ಉತ್ತರಾಧಿಕಾರಿಯಾಗಿ. ದೊಡ್ಡ ಡಿಸ್ ಪ್ಲೇ, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿರುವ ಈ ಫೋನ್ ಇದೀಗ ದೇಶದಲ್ಲಿ ಮಾರಾಟ ಕಾಣುತ್ತಿದೆ.

ಭಾರತದಲ್ಲಿ ರೆಡ್ಮಿ 13C 4G ಬೆಲೆ:

ರೆಡ್ಮಿ 13C ಸ್ಮಾರ್ಟ್​ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 128GB ಗೆ ರೂ. 8999, 6GB + 128GB ಗೆ ರೂ. 9,999 ಮತ್ತು 8GB + 256GB ಮಾದರಿಗೆ ರೂ. 11,499 ನಿಗದಿ ಮಾಡಲಾಗಿದೆ. ಈ ಫೋನ್ Mi.com, ಅಮೆಜಾನ್ ಮತ್ತು ಶವೋಮಿಯ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ. 1,000 ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಕಪ್ಪು, ಹಸಿರು ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್

ಇದನ್ನೂ ಓದಿ
ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ 12 5G ​ಫೋನ್ ಬಿಡುಗಡೆ: ಬೆಲೆ?
120W ಫಾಸ್ಟ್ ಚಾರ್ಜರ್, ಸೋನಿ ಕ್ಯಾಮೆರಾ: ವಿವೋ X100 ಸರಣಿ ಬಿಡುಗಡೆಗೆ ದಿನಾ
ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?
ಆ್ಯಪಲ್​ನಿಂದ ಇಬ್ಬರು ಪ್ರಮುಖ ತಂತ್ರಜ್ಞರ ನಿರ್ಗಮನ; ಸಂಸ್ಥೆಗೆ ಆಘಾತ

ರೆಡ್ಮಿ 13C 4G ಫೀಚರ್ಸ್:

ಡಿಸ್‌ಪ್ಲೇ: 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ ಡಿಸ್‌ಪ್ಲೇ, 1600 × 720 ಪಿಕ್ಸೆಲ್‌ಗಳ ರೆಸಲ್ಯೂಶನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ, 600nits ಗರಿಷ್ಠ ಬ್ರೈಟ್​ನೆಸ್ ಇದರ ಪ್ರಮುಖ ಹೈಲೇಟ್ಸ್.

ಪ್ರೊಸೆಸರ್: ಮೀಡಿಯಾಟೆಕ್ ಹಿಲಿಯೊ G85 SoC ಜೊತೆಗೆ Mali G52 GPUನೊಂದಿಗೆ ಬರುತ್ತದೆ.

RAM/ಸಂಗ್ರಹಣೆ: 8GB ವರೆಗೆ LPDDR4 RAM ಮತ್ತು 256GB UFS 2.2 ಸಂಗ್ರಹಣೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಕ್ಯಾಮೆರಾಗಳು: ಟ್ರಿಪಲ್ ಕ್ಯಾಮೆರಾಗಳಿಂದ ಕೂಡಿದ್ದು 50MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು ಆಕ್ಸಿಲರಿ ಲೆನ್ಸ್ ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 8MP ಶೂಟರ್​ನಲ್ಲಿದೆ.

OS: ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ರನ್ ಆಗುತ್ತದೆ.

ಬ್ಯಾಟರಿ: 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ.

ಸಂಪರ್ಕ: 5G/ 4G, ಡ್ಯುಯಲ್-ಸಿಮ್, ವೈಫೈ 802.11, ಬ್ಲೂಟೂತ್ 5.3, 3.5mm ಆಡಿಯೋ ಜ್ಯಾಕ್ ಮತ್ತು GPS, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ