ಮೊದಲೆಲ್ಲ ತಿಂಗಳಿಗೆ ಮೂರರಿಂದ ನಾಲ್ಕು ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿದ್ದ ಶವೋಮಿ ಕಂಪನಿ ಈಗ ಇವುಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆ ಮಾಡಿದೆ. ಎಡೆಬಿಡದೆ ಮಾರುಕಟ್ಟೆಯಲ್ಲಿ ಮೊಬೈಲ್ಗಳು ರಿಲೀಸ್ ಆಗುತ್ತಿರುವುದರಿಂದ ಅವುಗಳಿಗಿಂತ ವಿಶೇಷವಾದ ಫೋನನ್ನು ತಯಾರಿಸುವಲ್ಲಿ ಶವೋಮಿ ಬ್ಯುಸಿಯಾಗಿದೆ. ಇದೀಗ ಕೆಲ ದಿನಗಳ ಬಳಿಕ ಶವೋಮಿ (Xiaomi) ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಾಗಿದೆ. ಕಳೆದ ತಿಂಗಳು ದೇಶದಲ್ಲಿ ರೆಡ್ಮಿ ನೋಟ್ 11 SE ಫೋನ್ ಅನಾವರಣಗೊಳಿಸಿದ್ದ ಕಂಪನಿ ಇದೀಗ ಭಾರತದಲ್ಲಿ ರೆಡ್ಮಿ ಎ1 (Redmi A1) ಎಂಬ ಹೊಸ ಮೊಬೈಲ್ ಅನ್ನು ರಿಲೀಸ್ ಮಾಡಲು ಮುಂದಾಗಿದೆ.
ಫ್ಲಾಟ್ ಎಡ್ಜ್ ಡಿಸೈನ್ ಹೊಂದಿರುವ ಈ ರೆಡ್ಮಿ A1 ಸ್ಮಾರ್ಟ್‌ಫೋನ್ ಇದೇ ಸೆಪ್ಟಂಬರ್ 6 ರಂದು ಮಧ್ಯಾಹ್ಹ 12 ಗಂಟೆಗೆ ಭಾರತದಲ್ಲಿ ಬಿಡುಗಡೆ ಆಗಲಿದೆ. ವಾಟರ್ಡ್ರಾಪ್ ನಾಚ್ ಡಿಸ್ ಪ್ಲೇ ಈ ಫೋನ್ ಹೊಂದಿದ್ದು ಬಲಿಷ್ಠವಾದ ಬ್ಯಾಟರಿ, ಆಕರ್ಷಕ ಕ್ಯಾಮೆರಾ ನೀಡಲಾಗಿದೆಯಂತೆ. ಇದೊಂದು ಬಜೆಟ್ ಫೋನಾಗಿದ್ದರೂ ಪವರ್ಫುಲ್ ಪ್ರೊಸೆಸರ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಂಪನಿ ಈ ಫೋನಿನ ಫೀಚರ್ಸ್ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಕೆಲ ವಿಶೇಷತೆಗಳು ಸೋರಿಕೆಯಾಗಿವೆ.
Join us for the global debut of #RedmiA1, the first from the all-new #MadeInIndia #Redmi smartphone series!#LifeBanaoA1 this #DiwaliWithMi!
⏩Blazing-fast Internet
? Digital payments
?Clean software
?Premium leather textureLaunch on Sep 6, 12 noon: https://t.co/NV0ncp9aOK pic.twitter.com/H6Tm8TG0GI
— Redmi India (@RedmiIndia) September 2, 2022
ರೆಡ್ಮಿ A1 ಸ್ಮಾರ್ಟ್‌ಫೋನ್ ಭಾರತದಲ್ಲಿ 6GB RAM + 128GBಸ್ಟೋರೇಜ್ ಆಯ್ಕೆಗಳಿಂದ ರಿಲೀಸ್ ಆಗುವುದು ಖಚಿತವಾಗಿದೆ. ಬಿಳಿ ಮತ್ತು ಹಸಿರು ಬಣ್ಣಗಗಳ ಆಯ್ಕೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಐಪಿಎಲ್ ಎಲ್ಸಿಡಿ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. 90Hz ರಿಫ್ರೆಶ್ ರೇಟ್ ನೀಡಲಾಗಿದೆ.
ಈ ಫೋನ್ನಲ್ಲಿ ಮೀಡಿಯಾಟೆಕ್ ಹೀಲಿಯೊ A22 ಚಿಪ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ರೆಡ್ಮಿ A1 ಸ್ಮಾರ್ಟ್‌ಫೋನ್ ಕ್ವಾಡ್ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 2 ಡೆಪ್ತ್ ಸೆನ್ಸಾರ್‌ನಿಂದ ಕೂಡಿದೆ. ಇವುಗಳ ಜೊತಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದದು, ಇದಕ್ಕೆ ತಕ್ಕಂತೆ 18W ವೇಗದ ಚಾರ್ಜಿಂಗ್ ಬೆಂಬಲ ನೀಡಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.0, ಮತ್ತು ಮಲ್ಟಿಫಂಕ್ಷನಲ್ NFC ಅನ್ನು ಬೆಂಬಲಿಸುತ್ತದೆ. ಇದರ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಶವೋಮಿ ಬಹಳ ಸಮಯದ ನಂತರ ಭಾರತದಲ್ಲಿ 10,000 ರೂ. ಒಳಗೆ ಈ ಫೋನನ್ನು ಲಾಂಚ್ ಮಾಡಲಿದೆ ಎಂಬ ಮಾತಿದೆ.