Kannada News Technology Redmi K50 Ultra reportedly have support for 100W fast charging and Snapdragon 8+ Gen 1 SoC
Redmi K50 Ultra: ಮಾರುಕಟ್ಟೆಗೆ ಬರುತ್ತಿದೆ 100W ಫಾಸ್ಟ್ ಚಾರ್ಜಿಂಗ್ನ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
ಇದೇ ವರ್ಷ ಕಳೆದ ಮಾರ್ಚ್ನಲ್ಲಿ ರೆಡ್ಮಿ K50 (Redmi K50) ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದ್ದ ಶವೋಮಿ, ಇದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಇದರ ಮುಂದಿನ ಆವೃತ್ತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಅದುವೇ ರೆಡ್ಮಿ K50 ಆಲ್ಟ್ರಾ (Redmi K50 Ultra).
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶವೋಮಿ(Xiaomi) ಸಂಸ್ಥೆ ವಿನೂತನ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ. ಮಾರುಕಟ್ಟೆಗೆ ಸದಾ ಏನಾದರು ಹೊಸ ತನವನ್ನು ಪರಿಚಯಿಸುವ ಶವೋಮಿ ಇದೀಗ ವಿಶೇಷವಾಗಿರುವ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಹೊರಟಿದೆ. ಇದೇ ವರ್ಷ ಕಳೆದ ಮಾರ್ಚ್ನಲ್ಲಿ ರೆಡ್ಮಿ K50 (Redmi K50) ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದ್ದ ಶವೋಮಿ, ಇದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಇದರ ಮುಂದಿನ ಆವೃತ್ತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಅದುವೇ ರೆಡ್ಮಿ K50 ಆಲ್ಟ್ರಾ (Redmi K50 Ultra). ಶಾಕಿಂಗ್ ಎಂದರೆ ಈ ಫೋನ್ 100W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದೆಯಂತೆ. ಅಷ್ಟೇ ಅಲ್ಲದೆ ಈ ಸ್ಮಾರ್ಟ್‌ಫೋನ್ ಅತ್ಯಂತ ಬಲಿಷ್ಠವಾದ ಹೊಸ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಬಲವನ್ನು ಪಡೆದುಕೊಂಡಿರಲಿದೆಯಂತೆ. ಕೆಲವೇ ತಿಂಗಳಲ್ಲಿ ಈ ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ.
ರೆಡ್ಮಿ ತನ್ನ K50 ಸರಣಿಯಲ್ಲಿ ರೆಡ್ಮಿ K50 ಮತ್ತು ರೆಡ್ಮಿ K50 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಕಳೆದ ಮಾರ್ಚ್ನಲ್ಲಿ ರಿಲೀಸ್ ಮಾಡಿತ್ತು. ಇದರಲ್ಲಿ ರೆಡ್ಮಿ K50 ಪ್ರೊ ಫೋನ್ 1440 x 3200 ಪಿಕ್ಸೆಲ್ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಸ್ಯಾಮ್‌ಸಂಗ್ ನಿರ್ಮಿತ OLED 2K ಡಿಸ್‌ಪ್ಲೇ ಅನ್ನು ಪಡೆದಿದೆ.
ಇದು ಡಾಲ್ಬಿ ವಿಷನ್, HDR10+ ಬೆಂಬಲ ಮತ್ತು 120Hz. ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್ ಹೊಂದಿದೆ. 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.
ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 100 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ. 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 120W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಪಡೆದಿದೆ.
ಇದನ್ನೂ ಓದಿ
WhatsApp: ವಾಟ್ಸ್ಆ್ಯಪ್ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡಲು ಈ ಟ್ರಿಕ್ ಉಪಯೋಗಿಸಿ
iQOO Neo 6: ಭಾರತಕ್ಕೆ ಬಂದೇ ಬಿಡ್ತು ಐಕ್ಯೂ ನಿಯೋ 6 5G: ಇಷ್ಟು ಕಡಿಮೆ ಬೆಲೆಗೆ ಎಂಥಾ ಸ್ಮಾರ್ಟ್‌ಫೋನ್
Airtel vs Jio: ಏರ್ಟೆಲ್ನಿಂದ ಹೊಸ ಆಲ್-ಇನ್-ಒನ್ ಬ್ರಾಡ್‌ಬ್ಯಾಂಡ್ ಯೋಜನೆ: ಜಿಯೋ-ಏರ್ಟೆಲ್ ಪ್ಲಾನ್ನಲ್ಲಿ ಯಾವುದು ಬೆಸ್ಟ್?
Jio Game Controller: ಜಿಯೋ ಗೇಮ್ ಕಂಟ್ರೋಲರ್ ಬಿಡುಗಡೆ: ಗೇಮಿಂಗ್ ಪ್ರಿಯರು ಫುಲ್ ಫಿದಾ
ಇನ್ನು ರೆಡ್ಮಿ K50 ಫೋನ್ ಅಧಿಕ ಪಿಕ್ಸೆಲ್ ರೆಸಲ್ಯುಶನ್‌ನೊಂದಿಗೆ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 120Hz. ಡಿಸ್‌ಪ್ಲೇಯು 1,200 ನಿಟ್‌ಗಳ ಬ್ರೈಟ್ನೆಸ್ ಪಡೆದಿದೆ.
ಹಾಗೆಯೇ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಜೊತೆಗೆ 12GB ವರೆಗಿನ RAM ಅನ್ನು ಹೊಂದಿದೆ.
ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ 1/1.52-ಇಂಚಿನ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ, ಇದು 20 ಮೆಗಾ ಪಿಕ್ಸೆಲ್ ಸೋನಿ IMX596 ಸಂವೇದಕವನ್ನು ಹೊಂದಿದೆ.
ಈ ಫೋನ್ 5,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 67W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಪಡೆದಿದೆ. ಇವು ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತಿದೆ.