Kannada News Technology Redmi Note 11 SE Launched Xiaomi sub-brand Redmi has refreshed its Note series with the Redmi Note 11 SE
Redmi Note 11 SE: ಮಾರುಕಟ್ಟೆಗೆ ಧೂಳೆಬ್ಬಿಸಲು ಬಂತು ರೆಡ್ಮಿಯ ಹೊಸ ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
ಭಾರತದಲ್ಲಿ ಹೊಸ ರೆಡ್ಮಿ ನೋಟ್ 11 ಎಸ್ಇ (Redmi Note 11 SE) ಫೋನ್ ಬಿಡುಗಡೆ ಆಗಿದೆ. ಅಂದುಕೊಂಡಂತೆ ಇದೊಂದು ಬಲೆಟ್ ಬೆಲೆ ಸ್ಮಾರ್ಟ್‌ಫೋನ್ ಆಗಿದೆ. ಆದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವುದು ವಿಶೇಷ.
Redmi Note 11SE
Follow us on
ಶವೋಮಿ (Xiaomi) ಕಂಪನಿ ಕೆಲ ಸಮಯದ ಬಳಿಕ ತನ್ನ ರೆಡ್ಮಿಬ್ರ್ಯಾಂಡ್ನೊಂದಿಗೆ ಮತ್ತೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ. ಇಂದು ಭಾರತದಲ್ಲಿ ತನ್ನ ಹೊಸ ಬಹುನಿರೀಕ್ಷಿತ ರೆಡ್ಮಿ ನೋಟ್ 11 ಎಸ್ಇ (Redmi Note 11 SE) ಫೋನನ್ನು ಅನಾವರಣ ಮಾಡಿದೆ. ಅಂದುಕೊಂಡಂತೆ ಇದೊಂದು ಬಲೆಟ್ ಬೆಲೆ ಸ್ಮಾರ್ಟ್‌ಫೋನ್ ಆಗಿದೆ. ಆದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವುದು ವಿಶೇಷ. ರೆಡ್ಮಿ ನೋಟ್ 11 SE ಸ್ಮಾರ್ಟ್ಫೋನ್ನಲ್ಲಿ ಮೀಡಿಯಾಟೆಕ್ ಪ್ರೊಸೆಸರ್ ಅಳವಡಿಸಲಾಗಿದ್ದು, ಬರೋಬ್ಬರಿ 64 ಮೆಗಾಫಿಕ್ಸೆಲ್ನ ವೈಡ್ ಆ್ಯಂಗಲ್ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠವಾದ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೌಲಭ್ಯ ಕೂಡ ಇದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
ರೆಡ್ಮಿ ನೋಟ್ 11 SE ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 6GB RAM + 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 13,499 ರೂ. ನಿಗದಿ ಮಾಡಲಾಗಿದೆ.
ಆಗಸ್ಟ್ 31 ರಿಂದ ಈ ಫೋನ್ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ಎಂಐ.ಕಾಮ್ ಮೂಲಕ ಸೇಲ್ ಕಾಣಲಿದೆ. ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಈ ಸ್ಮಾರ್ಟ್ಫೋನ್ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ.
ಇದು 1,100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಸಿನಿಮಾ ವೀಕ್ಷಣೆ ಮಾಡುವಾಗ, ಗೇಮ್ ಆಡುವಾಗ ವಿಶೇಷ ಅನುಭವ ನೀಡುತ್ತದೆ. ಮೀಡಿಯಾಟೆಕ್ ಹಿಲಿಯೋ G95 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ
ರೆಡ್ಮಿ ನೋಟ್ 11 SE ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮಾಕ್ರೊ ಲೆನ್ಸ್ ಆಗಿದೆ.
ಇವುಗಳ ಜೊತಗೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ಸಾಕಷ್ಟು ಆಯ್ಕೆ ನೀಡಲಾಗಿದ್ದು, ನೈಟ್ ಮೋಡ್, ಎಐ ಬ್ಯೂಟಿಫೈ, ಪೊಟ್ರೈಟ್ ಮೋಡ್ ಸೇರಿದಂತೆ ಅನೇಕ ಫೀಚರ್ಸ್ ಇದೆ.
ಇನ್ನು ಈ ಫೋನ್ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಬೆಂಬಲಿಲ ಪಡೆದುಕೊಂಡಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ಮತ್ತು 5GHz ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.0, ಮತ್ತು ಮಲ್ಟಿಫಂಕ್ಷನಲ್ NFC ಅನ್ನು ಬೆಂಬಲಿಸುತ್ತದೆ. AI ಫೇಸ್ ಅನ್‌ಲಾಕ್ ಫೀಚರ್ ಕೂಡ ನೀಡಲಾಗಿದೆ.