Redmi Note 11SE
ಶವೋಮಿ (Xiaomi) ಕಂಪನಿ ತನ್ನ ಎಂಐ (Mi) ಬ್ರ್ಯಾಂಡ್ ಅಡಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದು ಸ್ಥಗಿತಗೊಳಿಸಿದ ನಂತರ ರೆಡ್ಮಿ ಬ್ರ್ಯಾಂಡ್ನಡಿಯಲ್ಲಿ ಆಕರ್ಷಕ ಫೋನ್ಗನ್ನು ಪರಿಚಯಿಸುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಹೊಸ ಮೊಬೈಲ್ ಸೇರ್ಪಡೆಯಾಗಿದೆ. ಅದುವೇ ರೆಡ್ಮಿ ನೋಟ್ 11 ಎಸ್ಇ (Redmi Note 11SE). ಹೌದು, ಈ ಹೊಸ ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಕೆಲವೇ ತಿಂಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಕೂಡ ನೀಡಲಾಗಿದೆ. ಉಳಿದಂತೆ ಇದರ ಬೆಲೆ ಎಷ್ಟು?, ಇತರೆ ಫೀಚರ್ಗಳು ಏನೆಲ್ಲ ಇವೆ ಎಂಬುದನ್ನು ನೋಡೋಣ.
- ರೆಡ್ಮಿ ನೋಟ್ 11SE ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB RAM + 12GB ಸ್ಟೋರೇಜ್ ಮಾದರಿಗೆ CNY 1,099, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 13,000 ರೂ. ಎನ್ನಬಹುದು.
- ಅಂತೆಯೆ 8GB RAM + 128GB ಸ್ಟೋರೇಜ್ ಮಾದರಿಗೆ CNY 1,399 (ಭಾರತದಲ್ಲಿ ಅಂದಾಜು 16,000 ರೂ.) ಆಗಿದೆ. ಈ ಸ್ಮಾರ್ಟ್‌ಫೋನ್ ಡೀಪ್ ಸ್ಪೇಸ್ ಬ್ಲೂ ಮತ್ತು ಶ್ಯಾಡೋ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈಗಾಗಲೇ ಶವೋಮಿಯ ಚೀನಾ ಸೈಟ್‌ನಲ್ಲಿ ಫ್ರೀ-ಆರ್ಡರ್ ಮಾಡಲು ಲಭ್ಯವಿದ್ದು ಮೇ 31 ರಂದು ಮಾರಾಟ ಶುರುವಾಗಲಿದೆ.
- ರೆಡ್ಮಿ ನೋಟ್ 11SE ಸ್ಮಾರ್ಟ್‌ಫೋನ್ ಅಡಾಪ್ಟಿವ್‌ಸಿಂಕ್ ಟೆಕ್ನಾಲಜಿ ಹೊಂದಿರುವ 6.5 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ.
- ಮೀಡಿಯಾಟೆಕ್ ಡೈಮೆನ್ಸಿಟಿ SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ.
- ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.
- ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಎರಡೂ ಕ್ಯಾಮೆರಾ ಸೆಟಪ್‌ಗಳು 30 fps ನಲ್ಲಿ ಫುಲ್ HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
- 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎಂದಿನಿಂತೆ ಬ್ಲೂಟೂತ್ v5.1 ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈನೊಂದಿಗೆ ಬರುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ