ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೋಟೋ E32s: ಏನು ವಿಶೇಷತೆ?, ಬೆಲೆ ಎಷ್ಟು?

ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೋಟೋ E32s: ಏನು ವಿಶೇಷತೆ?, ಬೆಲೆ ಎಷ್ಟು?
Moto E32s

ಇತ್ತೀಚೆಗಷ್ಟೆ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿ ಭರ್ಜರಿ ಸುದ್ದಿ ಮಾಡಿತ್ತು. ಇದೀಗ ಸದ್ದಿಲ್ಲದೆ ಕಂಪನಿ ಮೋಟೋ ಇ 32ಎಸ್ (Moto E32s) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ.

TV9kannada Web Team

| Edited By: Vinay Bhat

May 27, 2022 | 7:00 AM

ವಿಶ್ವದಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಹಾಗೂ ಒನ್​ಪ್ಲಸ್​ ನಂತಹ ಘಟಾನುಘಟಿ ಸ್ಮಾರ್ಟ್​​ಫೋನ್ ಬ್ರ್ಯಾಂಡ್​​ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಕೂಡ ಮೋಟೋ ಕಂಪನಿಯ ಫೋನ್​ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇತ್ತೀಚೆಗಷ್ಟೆ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿ ಭರ್ಜರಿ ಸುದ್ದಿ ಮಾಡಿತ್ತು. ಇದೀಗ ಸದ್ದಿಲ್ಲದೆ ಕಂಪನಿ ಮೋಟೋ ಇ 32ಎಸ್ (Moto E32s) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್‌ನೊಂದಿಗೆ ಬರುತ್ತದೆ. ಇದರಲ್ಲಿ ಕ್ಯಾಮೆರಾ ಕೂಡ ಅದ್ಭುತವಾಗಿದ್ದು ಬಲಿಷ್ಠ ಬ್ಯಾಟರಿಯನ್ನು ಕೂಡ ಅಳವಡಿಸಲಾಗಿದೆ. ಇಲ್ಲಿದೆ ನೋಡಿ ಈ ಫೋನಿನ ಬೆಲೆ ಮತ್ತು ಫೀಚರ್ಸ್​ ಬಗೆಗಿನ ಮಾಹಿತಿ.

ಇದನ್ನೂ ಓದಿ

  1. ಮೋಟೋ E32s ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ ಡಿಸ್​ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ.
  2. ಇದು ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  3. ಮೋಟೋ E32s ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ.
  4. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
  5. ಈ ಸ್ಮಾರ್ಟ್‌ಫೋನ್​ಗೆ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಅಳವಡಿಸಲಾಗಿದೆ. 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
  6. ಮೋಟೋ E32s ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಯುರೋಪಿಯನ್‌ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿದ್ದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಸ್ಮಾರ್ಟ್‌ಫೋನ್‌ ಬೆಲೆ EUR 149.99, ಅಂದರೆ ಭಾರತದಲ್ಲಿ ಸುಮಾರು 12,400 ರೂ. ಎನ್ನಬಹುದು.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada